twitter
    For Quick Alerts
    ALLOW NOTIFICATIONS  
    For Daily Alerts

    ಸುಮ್‌ ಸುಮ್ನೆ ನಗ್ತಾಳೆ ಡಾ.ಚಾಂದಿನಿ ಎರಡನೇ ಇನ್ನಿಂಗ್ಸ್

    By Rajendra
    |

    Actress Dr.Chandini
    ಸುಮ್‌ ಸುಮ್ನೆ ನಗ್ತಾಳೆ ಚಿಮ್‌ಚಿಮ್ನೆ ಮಿಂಚ್ತಾಳೆ ಹಾಡಿನಲ್ಲಿ ಉಪೇಂದ್ರ ಜೊತೆ ಹಾಡಿ ಕುಣಿದಿದ್ದ ಹುಡುಗಿ ಚಾಂದಿನಿ ಡಾಕ್ಟರೇಟ್ ಮುಗಿಸಿದ್ದು ಗೊತ್ತೇ ಇದೆ. ಈಗೇನು ಮಾಡುತ್ತಿದ್ದಾರೆ ಆಕೆ ಎಂದರೆ ಪಾಠ ಮಾಡ್ತಿದ್ದಾರೆ. ಮಣಿಪಾಲ್ ಗ್ರೂಪ್ ಕಾಲೇಜಿನಲ್ಲಿ ಚಾಂದಿನಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಎಂಬಿಎ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

    ವಿಷ್ಣುವರ್ಧನ್ ಹಾಗೂ ರಮೇಶ್ ಅರವಿಂದ್ ಮುಖ್ಯಭೂಮಿಕೆಯಲ್ಲಿದ್ದ 'ದೀಪಾವಳಿ' ಚಿತ್ರದ ಬಳಿಕ ಚಾಂದಿನಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದರು. ಬಳಿಕ ಆಕೆ ಫುಡ್‌ ಅಂಡ್‌ ಅಗ್ರಿಕಲ್ಚರ್‌ ಮಾರ್ಕೆಟಿಂಗ್ ಕುರಿತು ಮಹಾಪ್ರಬಂಧವೊಂದನ್ನು ಸಿದ್ಧಪಡಿಸಿದ್ದರು. ಮೈಸೂರು ವಿಶ್ವವಿದ್ಯಾಲಯದ ಪಿ ಎಚ್‌.ಡಿ. ಪದವಿಯನ್ನೂ ಪಡೆದಿದ್ದರು. ಈ ಮಹಾಪ್ರಬಂಧಕ್ಕೆ ವಿಷಯ ಸಂಗ್ರಹಿಸಲು ಕರ್ನಾಟಕದ ಹಲವಾರು ಹಳ್ಳಿಗಳನ್ನು ಸುತ್ತಿದ್ದರು.

    ಚಾಂದಿನಿ ಎದುರಿಸಿದ ಮೊದಲ ಶಾಟ್‌-ಉಪೇಂದ್ರ ಈಕೆಯನ್ನು ತಳ್ಳುವುದು, ಮೇಲೆ ಬೀಳುವುದು. ಇದನ್ನು ಸಲೀಸಾಗಿ ನಿರ್ವಹಿಸಿದರು. ಆಗ ಕೈಮೈಯಲ್ಲೆಲ್ಲಾ ತರಚು ಗಾಯಗಳಾಗಿದ್ದವಂತೆ. ಆದರೆ ಉಪೇಂದ್ರ ತನ್ನ ನಟನೆಯ ಬಗ್ಗೆ ಸೂಚಿಸಿದ್ದ ಮೆಚ್ಚುಗೆ ಆ ನೋವನ್ನು ಮರೆಸಿತಂತೆ. ಎ ಮತ್ತು ಎಕೆ 47 ಚಿತ್ರಗಳಲ್ಲೂ ಅಭಿನಯಿಸಿರುವ ಚಾಂದಿನಿ ಈಗ ಸೋನಿ ಎಂಟರ್‌ಟೈನ್‌ಮೆಂಟ್‌ ಡಿಸ್ಟ್ರಿಬ್ಯೂಷನ್ ಹೆಡ್ ಆಗಿ ಹೊಸ ಜವಾಬ್ದಾರಿಯನ್ನು ಹೊತ್ತಿದ್ದಾರೆ. (ಏಜೆನ್ಸೀಸ್)

    English summary
    Kannada A and AK 47 films fame Dr Chandini what she is doning now? After she completed doctorate degree, Chandini is now heading the Sony Entertainment distribution head and professor at Manipal Group of College.
    Saturday, November 12, 2011, 16:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X