ದುನಿಯಾ ಸೂರಿ ನಿರ್ದೇಶನದಲ್ಲಿ ಪುನೀತ್ ಚಿತ್ರ!

By Staff

ಕನ್ನಡ ಚಿತ್ರೋದ್ಯಮದಲ್ಲಿ 'ಲಗೋರಿ' ಆಟ ಮತ್ತೆ ಶುರುವಾಗಿದೆ! ನಿರ್ದೇಶಕ ಯೋಗರಾಜ್ ಭಟ್ ಅರ್ಧಕ್ಕೆ ಕೈಬಿಟ್ಟಿದ್ದ ಆಟವನ್ನು ಮತ್ತೊಬ್ಬ ಯಶಸ್ವಿ ನಿರ್ದೇಶಕ ಸೂರಿ ಕೈಗೆತ್ತಿಕೊಂಡಿದ್ದಾರೆ. 'ಲಗೋರಿ' ಚಿತ್ರಕ್ಕೆ ಬಜೆಟ್ ಹೊಂದಿಸುವುದೇ ದೊಡ್ಡ ಸಮಸ್ಯೆಯಾಗಿದೆ ಎಂದು ಯೋಗರಾಜ್ ಭಟ್ ಕೈಚೆಲ್ಲಿದ್ದರು. ಹಾಗಾಗಿ 'ಲಗೋರಿ' ಆಸೆ ಕಮರಿ ಹೋಗಿತ್ತು. ಇದೀಗ ಮತ್ತೆ ಚಿಗುರಿದೆ.

ಅಂದುಕೊಂಡಂತೆ ಎಲ್ಲಾ ನಡೆದಿದ್ದರೆ ಪುನೀತ್ ರಾಜ್ ಕುಮಾರ್ ನಾಯಕತ್ವದಲ್ಲಿ 'ಲಗೋರಿ' ಚಿತ್ರ ಸೆಟ್ಟೇರಬೇಕಿತ್ತು. ಭಾರಿ ಬಜೆಟ್ ಚಿತ್ರವಾದ ಕಾರಣ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮೀನಾಮೇಷ ಎಣಿಸಿದ್ದರು. ವಿಧಿಯಿಲ್ಲದೆ ಲಗೋರಿ ಆಟವನ್ನು ನಿರ್ದೇಶಕ ಯೋಗರಾಜಭಟ್ ರದ್ದು ಮಾಡಿದ್ದರು.

ಇದೀಗ ಹೊಸ ಬೆಳವಣಿಗೆಯಲ್ಲಿ 'ಲಗೋರಿ' ಚಿತ್ರ ಸೂರಿ ನಿರ್ದೇಶನದಲ್ಲಿ ಮತ್ತೆ ಸೆಟ್ಟೇರಲಿದೆ. ಅಂದುಕೊಂಡಂತೆ ಚಿತ್ರಕ್ಕೆ ನಾಯಕ ನಟನಾಗಿ ಪುನೀತ್ ಅವರನ್ನೇ ಖಾಯಂಗೊಳಿಸಲಾಗಿದೆ. ಚಿತ್ರಕ್ಕೆ ಲಗೋರಿಗೆ ಬದಲಾಗಿದೆ ಮತ್ತೊಂದು ಹೊಸ ಶೀರ್ಷಿಕೆ ಇಡಲಾಗಿದೆ. ಸದ್ಯಕ್ಕೆ 'ಎಕ್ಕಾ' (ಇಸ್ಪೀಟಿನ ಎಲೆ) ಎಂಬ ಶೀರ್ಷಿಕೆಯನ್ನು ಇಡಲಾಗಿದ್ದು ಇನ್ನೂ ಅಂತಿಮವಾಗಿಲ್ಲ.

ಚಿತ್ರದ ತಾರಾಗಣ, ಸೆಟ್ಟೇರುವ ದಿನಾಂಕವನ್ನು ನಿರೀಕ್ಷಿಸಲಾಗಿದೆ. ಎಕ್ಕಾ ಚಿತ್ರ ಪುನೀತ್ ಅವರ ಸ್ವಂತ ಬ್ಯಾನರಿನಲ್ಲೇ ಸೆಟ್ಟೇರುವ ಸಾಧ್ಯತೆಗಳಿವೆ. ಅತ್ತ ನಿರ್ದೇಶಕ ಸೂರಿಗೂ ಇತ್ತ ಪುನೀತ್ ರಾಜ್ ಕುಮಾರ್ ಗೂ ಆಟದಲ್ಲಿ ಎಕ್ಕಾ ಬಿದ್ದಂತೆಯೇ! ರಾಜ್ ಬಿಡುಗಡೆ ನಂತರ ಎಲ್ಲವೂ ಅಂತಿಮವಾಗುವ ಸಾಧ್ಯತೆಗಳಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X