For Quick Alerts
ALLOW NOTIFICATIONS  
For Daily Alerts

ಚಿತ್ರಶಿಲ್ಪಿ ಬಿಂಡಿಗನವಿಲೆ ಶ್ರೀನಿವಾಸ ರಂಗಾ ವಿಧಿವಶ

By Mahesh
|

ತಮ್ಮ ವೈವಿಧ್ಯಮಯ ಪ್ರತಿಭೆಯ ಮೂಲಕ ಭಾರತೀಯ ಚಲನಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ ಖ್ಯಾತ ನಿರ್ದೇಶಕ, ನಿರ್ಮಾಪಕ ಬಿಂಡಗನವಿಲೆ ಶ್ರೀನಿವಾಸ ಐಯಂಗಾರ್ ರಂಗಾ ಅಲಿಯಾಸ್ ಬಿಎಸ್ ರಂಗಾ ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅವರು ಇಂದು ಬೆಳಗ್ಗೆ ಚೆನ್ನೈನ ನಿವಾಸದಲ್ಲಿ ಕೊನೆಯುಸಿರೆಳಿದಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಕನ್ನಡ, ತೆಲುಗು, ತಮಿಳು ಚಿತ್ರರಂಗವಲ್ಲದೆ ಹಿಂದೆ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು.

ಬೆಂಗಳೂರಿನ ಮಾಗಡಿಯಲ್ಲಿ ನವೆಂಬರ್ 11, 1917ರಲ್ಲಿ ಜನಿಸಿದ ರಂಗಾ ಅವರಿಗೆ ಬಾಲ್ಯದಿಂದಲೂ ಫೋಟೋಗ್ರಾಫಿಯ ಮೇಲೆ ಆಸಕ್ತಿಯಿತ್ತು. ಆಗಿನ ಕಾಲಕ್ಕೆ ದುಬಾರಿ ಹವ್ಯಾಸ ಎನ್ನಬಹುದಾದ ಫೋಟೋಗ್ರಾಫಿಯನ್ನು ಸ್ವಂತ ಪರಿಶ್ರಮದಿಂದ ರಂಗಾ ಕಲಿತರು. 17 ನೇ ವಯಸ್ಸಿಗೆ ಲಂಡನ್ನಿನ ರಾಯಲ್ ಫೋಟೋಗ್ರಾಫಿ ಸೊಸೈಟಿಯ ಫೆಲೋಶಿಫ್ ಪಡೆದ ಕೀರ್ತಿ ಹೊಂದಿದರು.

ಮುಂಬೈನ ಖ್ಯಾತ ಛಾಯಾಗ್ರಾಹಕ, ತಂತ್ರಜ್ಞ ಕೃಷ್ಣ ಗೋಪಾಲ್ ಅವರ ಬಳಿ ಶಿಷ್ಯ ವೃತ್ತಿ ಆರಂಭಿಸಿದ ರಂಗಾ, ಮುಂದೆ ಐದು ದಶಕಗಳ ಕಾಲ ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಸಿನಿಮಾಟೋಗ್ರಾಫರ್, ನಿರ್ದೇಶಕ, ನಿರ್ಮಾಪಕ, ಲ್ಯಾಬ್ ಮಾಲೀಕ, ಸ್ಟಡಿಯೋ ಮಾಲೀಕ, ವಿತರಕ ಹಾಗೂ ಕಥೆಗಾರರಾಗಿ ಕೂಡಾ ರಂಗಾ ಕಾರ್ಯ ನಿರ್ವಹಿಸಿದರು.

ವಿಕ್ರಮ್ ಪ್ರೊಡಕ್ಷನ್ ಸಂಸ್ಥೆ ಮೂಲಕ ಸಿನಿಮಾಗಳನ್ನು ನಿರ್ಮಿಸಿದ ತೊಡಗಿದ ರಂಗಾ ಅವರು 60 ಹಾಗೂ 70 ರ ದಶಕದವನ್ನು ಆಳಿದರು. ಕನ್ನಡದಲ್ಲಿ ಭಕ್ತ ಮಾರ್ಕಂಡೇಯ ಇವರು ನಿರ್ದೇಶಿಸಿದ ಮೊದಲ ಚಲನಚಿತ್ರ. ನಂತರ ಚಂದ್ರಹಾಸ, ಮಿಸ್ಟರ್ ರಾಜ್ ಕುಮಾರ್, ಭಲೇ ಬಸವ, ಸಿಡಿಲ ಮರಿ, ಭಾಗ್ಯವಂತ ಮುಂತಾದ ಯಶಸ್ವಿ ಚಿತ್ರಗಳನ್ನು ನೀಡಿ ಜನಮನ ಗೆದ್ದರು. 1964 ರಲ್ಲಿ ತೆರೆಗೆ ಬಂದ "ಅಮರ ಶಿಲ್ಪಿ ಜಕಣಾಚರಿ" ವರ್ಣಚಿತ್ರ ನಿರ್ಮಿಸಿ ದಾಖಲೆ ಮೆರೆದರು.

ಡಾ. ರಾಜ್ ಕುಮಾರ್, ಎಂಜಿ ರಾಮಚಂದ್ರನ್ , ಎನ್ ಟಿ ರಾಮರಾವ್ , ಅಕ್ಕಿನೇನಿ ನಾಗೇಶ್ವರ ರಾವ್, ಶಿವಾಜಿ ಗಣೇಶನ್ ಮುಂತಾದ ಸಿನಿ ದಿಗ್ಗಜರನ್ನು ನಿರ್ದೇಶಿಸಿದ ಖ್ಯಾತಿ ಬಿಎಸ್ ರಂಗಾ ಅವರಿಗಿತ್ತು. ಬೆಂಗಳೂರಿನ ವಸಂತ್ ಸ್ಟುಡಿಯೋ ಮಾಲೀಕ ನಿರ್ಮಾಪಕ ವಸಂತ್ ಅವರು ರಂಗಾ ಅವರ ಪುತ್ರ. ರಂಗಾ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರ ಸಂಘ, ಕಲಾವಿದರ ಸಂಘ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

English summary
Filmmaker Bindinganavale Srinivas Iyengar Ranga better known as BS Ranga passed away today(Dec.11) at Chennai. He made movies in kannada, hindi, tamil and telugu languages. He was born in Magadi, Bengaluru. He was multi talented, he was photographer, actor, director, producer(Vikram Production), script writer. His produced movie Amarshilpi Jakkanna it was the first colour movie of Kannada industry.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more