»   » ರಾಜ್ ಸ್ಮಾರಕಕ್ಕೆ ಕಂಠೀರವದಲ್ಲಿ ಗುದ್ದಲಿ ಪೂಜೆ

ರಾಜ್ ಸ್ಮಾರಕಕ್ಕೆ ಕಂಠೀರವದಲ್ಲಿ ಗುದ್ದಲಿ ಪೂಜೆ

Posted By:
Subscribe to Filmibeat Kannada
Legendary Kannada actor Rajkumar (1929-2006)
ಬೆಂಗಳೂರು, ನ. 12 : ಕೊನೆಗೂ ವರನಟ ಡಾ. ರಾಜಕುಮಾರ್ ಸ್ಮಾರಕಕ್ಕೆ ಇಂದು ಅಧಿಕೃತವಾಗಿ ಚಾಲನೆ ದೊರೆಯಿತು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ ಸ್ಮಾರಕ ಕಾಮಗಾರಿಗೆ ಬುಧವಾರ ಸಂಜೆ ನಗರದ ಕಂಠೀರವ ಸ್ಟುಡಿಯೋಸ್ ಆವರಣದಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು.

ರಾಜ್ ಸ್ಮಾರಕ ನಿರ್ಮಾಣ ಮಾಡಬೇಕೆನ್ನುವುದು ಸರ್ಕಾರದ ಮಹತ್ವಾಕಾಂಕ್ಷೆ. ರಾಜ್ ಅಭಿಮಾನಿಗಳ ಅನೇಕ ದಿನಗಳ ಕನಸು ಇಂದು ನನಸಾಗಿದೆ. 2009ರ ರಾಜ್ಯೋತ್ಸವದ ಹೊತ್ತಿಗೆ ಈ ಸ್ಥಳದಲ್ಲಿ ರಾಜ್ ಸ್ಮಾರಕ ನಿರ್ಮಾಣ ಮಾಡುವ ಮೂಲಕ ಸರ್ಕಾರ ಇಲ್ಲಿಯೇ ರಾಜ್ಯೋತ್ಸವ ಆಚರಿಸಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪಾರ್ವತಮ್ಮ ರಾಜಕುಮಾರ್ ಬಾವುಕರಾಗಿ ಕಣ್ಣೀರು ಹಾಕಿದರು. ರಾಜಕುಮಾರ್ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಮುಂದಾಗಿರುವುದು ಅತೀವ ಸಂತಸದ ಸಂಗತಿಯಾಗಿದೆ. ರಾಜ್ ಅಭಿಮಾನಿಗಳ ಕನಸು ಈಡೇರಿದಂತಾಗಿದೆ ಎಂದು ಅವರು ಹೇಳಿದರು. ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ, ಸಾರಿಗೆ ಸಚಿವ ಆರ್. ಆಶೋಕ್, ಸಂಸದ ಅನಂತಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ಅನೇಕ ದಿನಗಳಿಂದ ರಾಜ್ ಸ್ಮಾರಕ ನಿರ್ಮಾಣ ಕಾಮಗಾರಿಗೆ ನೂರೆಂಟು ವಿಘ್ನಗಳು ಅಡ್ಡಿಯಾಗಿದ್ದವು. ರಾಜ್ ವಿಧಿವಶರಾಗಿ 2 ವರ್ಷ 7 ತಿಂಗಳು ಗತಿಸಿದ ನಂತರ ಕಾಮಗಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಬಿಜೆಪಿ ಸರ್ಕಾರ ತನ್ನ ಬಜೆಟ್ ನಲ್ಲಿ 10 ಕೋಟಿ ರು.ಗಳನ್ನು ಮೀಸಲಾಗಿರಿಸಿದೆ. ಇದಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ 20 ಎಕರೆ ಜಮೀನಿನಲ್ಲಿ ಸ್ಮಾರಕವನ್ನು ನಿರ್ಮಿಸಲಾಗುತ್ತಿದೆ.

(ದಟ್ಸ್ ಕನ್ನಡ ವಾರ್ತೆ)

ಡಾ. ರಾಜಕುಮಾರ್ (1929-2006)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada