ಮಾಸಾಂತ್ಯಕ್ಕೆ ಗಾನ ಬಜಾನ ತೆರೆಗೆ
'ಗಾನ ಬಜಾನ' ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಈ ತಿಂಗಳ ಕೊನೆಯಲ್ಲಿ ತೆರೆಗೆ ಬರಲಿದೆ ಎಂದು ನಿರ್ಮಾಪಕ ನವೀನ್ ತಿಳಿಸಿದ್ದಾರೆ. ನಿಮ್ಮ ಸಿನಿಮಾ ಸಂಸ್ಥೆಯಿಂದ ನಿರ್ಮಾಣವಾಗಿರುವ ದ್ವಿತೀಯ ಚಿತ್ರ ಇದು.
ಹಿಂದೆ ಈ ಸಂಸ್ಥೆಯಿಂದ ನಿರ್ಮಾಣವಾದ 'ಲವ್‌ಗುರು' ಚಿತ್ರ ನೋಡುಗರ ಪ್ರಶಂಸೆಗೆ ಪಾತ್ರವಾಗಿತ್ತು. ಈ ಚಿತ್ರ ಕೂಡ ವಿಭಿನ್ನ ಪ್ರೇಮಕಥೆಯನ್ನೊಳಗೊಂಡಿದೆ. ಸಿರಿಗಂಧದ ನಾಡಿನ ಮಡಿಕೇರಿ, ಬೆಂಗಳೂರು, ಮೈಸೂರು ಮುಂತಾದೆಡೆಗಳಲ್ಲಿ 'ಗಾನ ಬಜಾನ ಚಿತ್ರದ ಚಿತ್ರೀಕರಣ ನಡೆದಿದೆ ಎನ್ನುತ್ತಾರೆ ನಿರ್ದೇಶಕ ಪ್ರಶಾಂತ್‌ರಾಜ್.
ಶೇಖರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಧನಂಜಯ್ ಸಂಭಾಷಣೆ ಬರೆದಿದ್ದಾರೆ. ಇಸ್ಮಾಯಿಲ್ ಕಲಾನಿರ್ದೇಶನ ಹಾಗೂ ರವಿಶಂಕರ್, ನರಸಿಂಹ ಅವರ ನಿರ್ಮಾಣನಿರ್ವಹಣೆಯಿದೆ. ತರುಣ್, ರಾಧಿಕಾಪಂಡಿತ್, ದಿಲೀಪ್‌ರಾಜ್, ಮಂಜುನಾಥ್‌ಹೆಗ್ಡೆ, ಯಶವಂತ್‌ಸರ್‌ದೇಶಪಾಂಡೆ, ಶರಣ್, ಸಿ.ಆರ್.ಸಿಂಹ, ಲಲಿತಾ, ಲಕ್ಷ್ಮೀದೇವಮ್ಮ ಚಿತ್ರದ ತಾರಾಬಳಗದಲ್ಲಿದ್ದಾರೆ.
More from Filmibeat
ಗಾನ ಬಜಾನ ರಾಧಿಕಾ ಪಂಡಿತ್ ತರುಣ್ ದಿಲೀಪ್ ರಾಜ್ ಪ್ರಶಾಂತ್ ರಾಜ್ ಸಿ ಆರ್ ಸಿಂಹ gaana bajaana rahika pandit tarun dilip raj prashanth raj c r simha


Click it and Unblock the Notifications











