For Quick Alerts
  ALLOW NOTIFICATIONS  
  For Daily Alerts

  ಪ್ರಣೀತಾ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ '420' ಚಿತ್ರ

  By Rajendra
  |

  ಇದು 'ಪಕ್ಕಾ 420' ಚಿತ್ರ. ಸತತ ಸೋಲುಗಳಿಂದ ಸೊರಗಿರುವ ಗೋಲ್ಡನ್ ಸ್ಟಾರ್ ಗಣೇಶ್‌ ಈ ಚಿತ್ರದ ಮೂಲಕ ತಮ್ಮ ಹಣೆಬರಹವನ್ನು ತಕ್ಕಮಟ್ಟಿಗೆ ಬದಲಾಯಿಸಿಕೊಳ್ಳಲು ಹೊರಟಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ 'ಕಿರಾತಕ' ಖ್ಯಾತಿಯ ಪ್ರದೀಪ್ ರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಮಾರ್ಚ್ 14ಕ್ಕೆ ಚಿತ್ರದ ರೆಗ್ಯುಲರ್ ಶೂಟಿಂಗ್ ಶುರುವಾಗಲಿದೆ. ಚಿತ್ರದ ಪಾತ್ರವರ್ಗದಲ್ಲಿ ರಂಗಾಯಣ ರಘು, ಸಾಧು ಕೋಕಿಲ ಮುಂತಾದವರಿದ್ದಾರೆ. ಸಂಗೀತ ಹರಿಕೃಷ್ಣ ಹಾಗೂ ಆರ್ ಗಿರಿ ಛಾಯಾಗ್ರಹಣ. ಬಿಎ ಮಧು ಅವರ ಕತೆ, ಸಂಭಾಷಣೆ ಚಿತ್ರಕ್ಕಿದೆ.

  ರಿಮೇಕ್ ಚಿತ್ರಗಳಿಗೆ ಪ್ರಸಿದ್ಧಿಯಾಗಿರುವ ಎಂ.ಡಿ. ಶ್ರೀಧರ್ ಇದನ್ನು ನಿರ್ದೇಶಿಸಬೇಕಿತ್ತು. ಕಥೆಯ ಎಳೆ ಕೂಡ ಅವರದ್ದೇ. ಆದರೆ ಸದ್ಯ ಪ್ರಜ್ವಲ್ ದೇವರಾಜ್ ಜೊತೆ ಸಾಗರ್ ಮತ್ತು ಗಲಾಟೆ ಚಿತ್ರದಲ್ಲಿ ಬ್ಯುಸಿಯಾಗಿರುವುದರಿಂದ ಅವರಿಗೆ ಗಣೇಶ್ ರನ್ನು 420 ಮಾಡುವಷ್ಟು ಪುರುಸೊತ್ತಿಲ್ಲ. ಹಾಗಾಗಿ 'ಕಿರಾತಕ' ಪ್ರದೀಪ್ ರಾಜ್ ಕೈಗೆ ಒಪ್ಪಿಸಿದ್ದಾರೆ. (ಏಜೆನ್ಸೀಸ್)

  English summary
  Golden Star Ganesh and Praneetha lead film 420 will be launched on 14th March, 2012. Pradeep Raj is the director and the movie is being produced by Sandesh Nagaraj. Hari Krishna scores the music. ಪ್ರಣೀತಾ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ '420' ಚಿತ್ರ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X