For Quick Alerts
  ALLOW NOTIFICATIONS  
  For Daily Alerts

  ಜೂ.ಎನ್ಟಿಆರ್ ಮೇಲೆ ಕಣ್ಣಾಕಿದ ಗೋಲ್ಡನ್ ಸ್ಟಾರ್

  By Rajendra
  |

  'ಕೂಲ್' ಚಿತ್ರ ನೆಲಕಚ್ಚಿದ ಮೇಲೆ ಗೋಲ್ಡನ್ ಸ್ಟಾರ್ ಗಣೇಶ್‌ ಅಷ್ಟೇ ಕೂಲಾದರು. ಈಗವರು ಸ್ವಮೇಕ್ ಚಿತ್ರಗಳ ಸಹವಾಸವೇ ಬೇಡ ಎಂಬ ಲಾಜಿಕ್ಕಿಗೆ ಬಂದಂತಿದೆ. 'ಶೈಲೂ' ಚಿತ್ರ ಗಣೇಶ್‌ ಕೆರಿಯರ್ ಗ್ರಾಫ್‍ನಲ್ಲಿ ತುಸು ಏರಿಕೆ ಕಂಡ ಕಾರಣ ಕೊಂಚ ಚೇತರಿಸಿಕೊಳ್ಳುವಂತೆ ಮಾಡಿತ್ತು.

  ಈಗ ಮತ್ತೊಂದು ರೀಮೇಕ್ ಚಿತ್ರದ ಸಿದ್ಧತೆಯಲ್ಲಿ ಗಣೇಶ್ ಇದ್ದಾರೆ. ಈ ಬಾರಿ ಅವರು ತೆಲುಗಿನಲ್ಲಿ ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿರುವ 'ದಮ್ಮು' ಮೇಲೆ ಕಣ್ಣಾಕಿದ್ದಾರೆ. ಜೂನಿಯರ್ ಎನ್ಟಿಆರ್ , ತ್ರಿಷಾ ಕೃಷ್ಣನ್ ಮುಖ್ಯಭೂಮಿಕೆಯಲ್ಲಿರುವ ರೊಮಾನ್ಸ್ ಹಾಗೂ ಆಕ್ಷನ್ ಪ್ರಧಾನ ಈ ಚಿತ್ರದ ಬಗ್ಗೆ ಟಾಲಿವುಡ್‌ನಲ್ಲಿ ಭಾರಿ ನಿರೀಕ್ಷೆಗಳಿವೆ.

  'ದಮ್ಮು' ಕನ್ನಡ ರೀಮೇಕ್‌ಗೆ ಇನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ. ನಿರ್ದೇಶನದ ಜವಾಬ್ದಾರಿ ಯಾರಿಗೆ ಕೊಡುತ್ತಾರೋ, ಚಿತ್ರದ ತಾಂತ್ರಿಕ ಹಾಗೂ ತಾರಾಬಳಗದ ವಿವರಗಳು ಇನ್ನಷ್ಟೇ ಹೊರಬೀಳಬೇಕಾಗಿದೆ. ಅಂದಹಾಗೆ ತೆಲುಗು 'ದಮ್ಮು' ಚಿತ್ರ 2012ರ ಮಾರ್ಚ್ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. (ಒನ್‌ಇಂಡಿಯಾ ಕನ್ನಡ)

  English summary
  Sandalwood sources says Golden Star Ganesh is all set to remade Telugu movie Dammu in Kannada. The actor is planning to do a remake of it in Kannada. Jr NTR is playing lead in Dammu

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X