ಸ್ಟೈಲ್ ಕಿಂಗ್ ರಜನಿಕಾಂತ್‌ಗೆ ಹುಟ್ಟುಹಬ್ಬದ ಸಂಭ್ರಮ

By Rajendra

ದಕ್ಷಿಣ ಭಾರತದಲ್ಲಿ ಚಿರಪರಿಚಿತ ಹೆಸರು ಶಿವಾಜಿ ಗಾಯಕ್ವಾಡ್...ಸೂಪರ್ ಸ್ಟಾರ್ ರಜನಿಕಾಂತ್. ಸೋಮವಾರ (ಡಿ.12) ರಜನಿಕಾಂತ್‌ಗೆ ಹುಟ್ಟುಹಬ್ಬ ಸಂಭ್ರಮ. ಇಂದು ಅವರು 62ನೇ ವಸಂತಕ್ಕೆ ಅಡಿಯಿಟ್ಟಿದ್ದಾರೆ. ಅವರ ಅಪಾರ ಅಭಿಮಾನಿಗಳು ಅವರನ್ನು ತಲೈವರ್ (ತಮಿಳಿನಲ್ಲಿ ಹಾಗೆಂದರೆ ದೊರೆ, ಯಜಮಾನ, ದೇವರು, ಒಡೆಯ ಎದೆಲ್ಲ ಅರ್ಥಗಳಿವೆ) ಎಂದು ಪ್ರೀತಿಯಿಂದ ಕರೆಯುತ್ತಾರೆ.

ತನ್ನ ಐದನೇ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ದುರ್ದೈವಿ ರಜನಿ. ಒಪ್ಪತ್ತಿನ ಊಟಕ್ಕೆ ನಾನಾ ಕಷ್ಟಗಳನ್ನು ಪಡುತ್ತಾ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದರು. ಬಳಿಕ ಜೀವನ ಸಂಘರ್ಷದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಮೂಟೆ ಹೊರೆಯುವ ಕೂಲಿಯಾಗಿ, ಆ ಬಳಿಕ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದರು.

ರಂಗಭೂಮಿ ಮೇಲಿನ ಆಕರ್ಷಣೆಗೆ ಒಳಗಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಗೆಳೆಯರ ಪ್ರೋತ್ಸಾಹದಿಂದ ಮದ್ರಾಸ್ ಫಿಲಂ ಇನ್ಸಿಟಿಟ್ಯೂಟ್‌ನಲ್ಲಿ ಸೇರಿದರು. ಖ್ಯಾತ ನಿರ್ದೇಶಕ ಬಾಲಚಂದರ್ ಕಣ್ಣಿಗೆ ಬೀಳುವ ಮೂಲಕ 'ಅಪೂರ್ವ ರಾಗಂಗಲ್' ಚಿತ್ರದ ಮೂಲಕ 1975ರಲ್ಲಿ ಬೆಳ್ಳಿತೆರೆಗೆ ಅಡಿಯಿಟ್ಟರು. ಅಲ್ಲಿಂದ ಆರಂಭವಾದ ರಜನಿ ಸಿನಿ ಜೀವನದಲ್ಲಿ ಇದುವರೆಗೂ 150 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ರಜನಿ ಅಭಿಮಾನಿಗಳು ಡಿ.12ನ್ನು World Style Day ಎಂದು ಸೆಲಿಬ್ರೇಟ್ ಮಾಡುತ್ತಾರೆ. ಈ ವರ್ಷ ರಜನಿಕಾಂತ್ ಆರೋಗ್ಯ ಕೈಕೊಟ್ಟ ಕಾರಣ ಅವರು ಅಷ್ಟಾಗಿ ಚಿತ್ರಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಲಿಲ್ಲ. ಅವರ ಮುಂಬರುವ 'ರಾಣಾ' ಚಿತ್ರಕ್ಕಾಗಿ ಪ್ರೇಕ್ಷಕರು ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ. 'ತಲೈವರ್' ರಜನಿಕಾಂತ್‌ಗೆ ಹುಟ್ಟುಹಬ್ಬದ ಶುಭಾಶಯಗಳು. (ಒನ್‌ಇಂಡಿಯಾ ಕನ್ನಡ)

More from Filmibeat

English summary
Tamil superstar Rajinikanth is celebrating his 62nd birthday on Monday. Known lovingly as thalaivar among fans, Rajinikanth was honoured with the Padma Bhushan Award in the year 2000 and has at least 150 movies to his credit as an actor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X