»   » ಚಿತ್ರೋತ್ಸವಕ್ಕೆ ಸಿಂಗಾರವಾದ ಬೆಂಗಳೂರು

ಚಿತ್ರೋತ್ಸವಕ್ಕೆ ಸಿಂಗಾರವಾದ ಬೆಂಗಳೂರು

Posted By:
Subscribe to Filmibeat Kannada

ವಿಶ್ವದ ಅತಿದೊಡ್ಡ್ದ ಮೂರನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬೆಂಗಳೂರು ಸಜ್ಜಾಗಿದೆ. ಈ ಸಲದ ಚಲನಚಿತ್ರೋತ್ಸವದಲ್ಲಿ ನೀರಿನ ಮಹತ್ವದ ಬಗ್ಗೆ ಧ್ವನಿ ಎತ್ತರಿಸಲಿದ್ದುಕಾರ್ಯಕ್ರಮಕ್ಕೆ 'Voice from the Water 2008' ಎಂದು ಹೆಸರಿಸಲಾಗಿದೆ.ಬೆಂಗಳೂರು ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೆ.13ರಿಂದ ಸೆ.18ರವರೆಗೆ ಚಲನಚಿತ್ರೋತ್ಸವ ನಡೆಯಲಿದೆ. ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರನಿರ್ಮಾಪಕ ಶೇಖರ್ ಕಪೂರ್ ಚಾಲನೆ ನೀಡಲಿದ್ದಾರೆ.

ಉತ್ಸವದಲ್ಲಿ 30 ದೇಶಗಳ 70 ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಜಾಗತಿಕ ತಾಪಮಾನ, ಅಣೆಕಟ್ಟುಗಳು, ಅತಿವೃಷ್ಟಿ, ಬರಗಾಲ, ವಲಸೆ, ವಾತಾವರಣ ಬದಲಾವಣೆ, ವನ್ಯಜೀವಿಗಳು ಮತ್ತು ಭೌಗೋಳಿಕ ರಾಜಕೀಯ, ನೀರಿನ ಅನ್ವೇಷಣೆ ಮುಂತಾದ ಮಹತ್ವದ ಅಂಶಗಳ ಬಗ್ಗೆ ಚಲನಚಿತ್ರೋತ್ಸವ ಬೆಳಕು ಚೆಲ್ಲಲಿದೆ.

ಬೆಂಗಳೂರಿನ ಹಲವಾರು ಸ್ಥಳಗಳಲ್ಲಿ ಸಿನಿಮಾಗಳು ಪ್ರದರ್ಶಿತವಾಗಲಿದ್ದು ಬೆಳಗಿನ ಆಟಗಳನ್ನು ಸಂಪೂರ್ಣವಾಗಿ ವಿದ್ಯಾರ್ಥಿಗಳಿಗೆ ಮೀಸಲಾಗಿದೆ. ಹಾಗೆಯೇ ಚಲನಚಿತ್ರ ಕಲಾವಿದರು, ನಿರ್ಮಾಪಕರು, ವಿದ್ಯಾರ್ಥಿಗಳು, ವಿದ್ವಾಂಸರು, ಚಿಂತಕರು ಜಲ ಸಂಪನ್ಮೂಲ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಚರ್ಚಿಸಲಿದ್ದಾರೆ. ಇದಕ್ಕಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿತ್ರಕಲೆ, ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ, ಆಸಕ್ತರು 'ನೀರಿ'ನ ದಾಹವನ್ನು ನೀಗಿಸಿಕೊಳ್ಳಬಹುದು.

ಬೆಂಗಳೂರು ಫಿಲ್ಮ್ ಸೊಸೈಟಿ, ಬೆಂಗಳೂರು ವಿಶ್ವವಿದ್ಯಾಲಯ, ಅರ್ಗ್ಯಾಮ್, ಮಾಕ್ಸ್ ಮುಲ್ಲರ್ ಭವನ ನೀರಿನ ಬಗ್ಗೆ ಅರಿವು ಮೂಡಿಸಲು ರಾಷ್ಟ್ರೀಯ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೈಜೋಡಿಸಿವೆ. 2005ರಲ್ಲಿ ಮೊದಲ ಹಾಗೂ 2007ರಲ್ಲಿ ಎರಡನೆಯ ಸಮ್ಮೇಳನ ನಡೆದಿತ್ತು.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada