ಗೀತಪ್ರಿಯರಿಗೆ ನೆರವಿನ ಹಸ್ತ ಚಾಚಿದ ಐಟಿ ಕನ್ನಡಿಗರು
ಅರ್ಥಪೂರ್ಣ ಗೀತೆಗಳ ಮೂಲಕ ಕನ್ನಡಿಗರ ಮನಗೆದ್ದ ಗೀತಸಾಹಿತಿ ಗೀತಪ್ರಿಯ (ಲಕ್ಷ್ಮಣರಾವ್ ಮೋಹಿತೆ). ಈಗವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಗಂಟಲ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಬಳಿಕ ಹಾಸಿಗೆ ಹಿಡಿದಿದ್ದಾರೆ.
ಇತ್ತೀಚೆಗೆ ಬೆಂಗಳೂರು ಐ.ಟಿ ಕನ್ನಡಿಗರು ಗೀತಪ್ರಿಯ ಅವರನ್ನು ಭೇಟಿ ಮಾಡಿ ಅವರ ಆರೋಗ್ಯವನ್ನು ವಿಚಾರಿಸಿದರು. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಕ್ಕೆ ಭೇಟಿ ನೀಡಿದ ಅವರು ಹಿರಿಯ ಚೇತನ ಗೀತಪ್ರಿಯ ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಐ.ಟಿ ಕನ್ನಡಿಗರಾದ ಆನಂದ್ ಎಂಬಿ, ದಿನೇಶ್ ಅಡಿಗ, ಸುರೇಶ್ ಎಚ್ ಎಂ, ರವೀಂದ್ರ ಪ್ರತಾಪ್ ಜೈನ್ ಹಾಗೂ ಮಂಜುನಾಥ ಗೌಡ ಅವರು ತಮ್ಮ ವತಿಯಿಂದ ರು.25 ಸಾವಿರದ ಡಿಡಿಯನ್ನು ಗೀತಪ್ರಿಯರಿಗೆ ಹಸ್ತಾಂತರಿಸಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.
ಗೀತಪ್ರಿಯ ಅವರ ಚಿಕಿತ್ಸೆಗೆ ಇನ್ನಷ್ಟು ಆರ್ಥಿಕ ಸಹಾಯ ಬೇಕಾಗಿದೆ. ಮುಂದೆಯೂ ಅವರಿಗೆ ಹಣದ ಸಹಾಯ ಮಾಡುವುದಾಗಿ ಐ.ಟಿ ಕನ್ನಡಿಗ ಆನಂದ್ ಎಂಬಿ ತಿಳಿಸಿದ್ದಾರೆ. ಎರಡನೇ ಕಂತಿನ ಹಣವನ್ನು ಅವರಿಗೆ ಶೀಘ್ರದಲ್ಲೇ ಹಸ್ತಾಂತರಿಸಲಿರುವುದಾಗಿ ತಿಳಿಸಿದ್ದಾರೆ. ಎಲ್ಲರ ಸಹಕಾರ ನಿರೀಕ್ಷಿಸಿರುವ ಅವರು ತಮ್ಮ ಇ-ಮೇಲ್ [email protected] ಮೂಲಕ ಸಂಪರ್ಕಿಸಲು ಕೋರಿದ್ದಾರೆ. (ಏಜೆನ್ಸೀಸ್)


Click it and Unblock the Notifications











