twitter
    For Quick Alerts
    ALLOW NOTIFICATIONS  
    For Daily Alerts

    ಕರ್ನಾಟಕದ ವಿದ್ಯಾರ್ಥಿಗಳಿಗೆ ಉದಯ ಟಿವಿ ಕೊಡುಗೆ

    By Staff
    |

    ಹಲವು ವರ್ಷಗಳ ನಂತರ ಇದೇ ಪ್ರಥಮ ಬಾರಿಗೆ ಉದಯ ಟಿವಿ ಇತರ ವಾಹಿನಿಗಳನ್ನು ಹಿಂದಿಕ್ಕಿ ಒಂದು ಹೆಜ್ಜೆ ಮುಂದಿರಿಸಿದೆ. 'ಕೆರೆಯ ನೀರನು ಕೆರೆಗೆ ಚೆಲ್ಲಿ' ಎಂಬ ಮಾತನ್ನು ನೆನಪಿಸುವಂತೆ ಸನ್ ನೆಟ್‌ವರ್ಕ್‌ನ ಮುಖ್ಯಸ್ಥರಾದ ಕಲಾನಿಧಿ ಮಾರನ್ ಕರ್ನಾಟಕದ ಬಡ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಶಿಕ್ಷಣಕ್ಕಾಗಿ 1 ಕೋಟಿ ರೂ. ಸಹಾಯಧನ ಪ್ರಕಟಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್ ಪ್ಯಾಲೇಸ್‌‍ನಲ್ಲಿ 'ಸನ್‌ಫೀಸ್ಟ್ ಉದಯ-2007' ಪ್ರಶಸ್ತಿ ವಿತರಣೆಯ ಸಂದರ್ಭದಲ್ಲಿ ಸಹಾಯಧನವನ್ನು ಕಲಾನಿಧಿ ಮಾರನ್ ಪ್ರಕಟಿಸಿದರು.

    'ಚೆಲುವಿನ ಚಿತ್ತಾರ'ದಲ್ಲಿನ ಉತ್ತಮ ನಟನೆಗಾಗಿ ಅತ್ಯುತ್ತಮ ನಟ ಹಾಗೂನಟಿ ಪ್ರಶಸ್ತಿಯನ್ನು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಟಿ ಅಮೂಲ್ಯ ಪಡೆದುಕೊಂಡರು. ಅತ್ಯುತ್ತಮ ಯಶಸ್ವಿ ನಟ ಪ್ರಶಸ್ತಿಯನ್ನು ಪುನೀತ್ ರಾಜ್‌ಕುಮಾರ್‌ಗೆ ನೀಡಲಾಯಿತು. 'ಆ ದಿನಗಳು' ಚಿತ್ರದ ಚೇತನ್ ಹಾಗೂ 'ದುನಿಯಾ' ಚಿತ್ರದ ನಟಿ ರಶ್ಮಿಗೆ ಉತ್ತಮ ನವ ನಟ-ನಟಿ ಪ್ರಶಸ್ತಿಯನ್ನು ನೀಡಿ ಪ್ರೊತ್ಸಾಹಿಸಲಾಯಿತು. 'ಸ್ನೇಹಾಂಜಲಿ' ಚಿತ್ರದಲ್ಲಿ ನಟಿಸಿರುವ ಮೂಕ ಮತ್ತು ಕಿವುಡು ನಟ ಧೃವ್ ಅವರಿಗೆ ವಿಶೇಷ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಲಾಯಿತು.

    ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ:

    ಮಿಲನ ನಿರ್ದೇಶಕ ಪ್ರಕಾಶ್, ಶರತ್ ಲೋಹಿತಾಶ್ವ (ಆ ದಿನಗಳು ಚಿತ್ರದ ಖಳನಾಯಕ), ಕೋಮಲ್ ಕುಮಾರ್(ಸತ್ಯವಾನ್ ಸಾವಿತ್ರಿ ಚಿತ್ರದ ಹಾಸ್ಯ ನಟ), ಗುರುಕಿರಣ್(ಪಲ್ಲಕ್ಕಿ ಚಿತ್ರದ ಹಿನ್ನಲೆ ಗಾಯನಕ್ಕಾಗಿ), ಮನೋಮೂರ್ತಿ(ಚೆಲುವಿನ ಚಿತ್ತಾರ ಸಂಗೀತ ನಿರ್ದೇಶನ), ನಂದಿತಾ(ಹಿನ್ನಲೆ ಗಾಯಕಿ), ನಾಗೇಂದ್ರ ಪ್ರಸಾದ್(ದುನಿಯಾ ಚಿತ್ರದ ಸಾಹಿತ್ಯ), ದೀಪು ಎನ್ ಕುಮಾರ್(ದುನಿಯಾ ಚಿತ್ರದ ಸಂಕಲನಕ್ಕಾಗಿ), ಡಿಫರೆಂಟ್ ಡ್ಯಾನಿ(ದುನಿಯಾ ಚಿತ್ರದ ಸಾಹಸಕ್ಕಾಗಿ), ಕೃಷ್ಣ ಕುಮಾರ್(ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರದ ಛಾಯಾಗ್ರಹಣಕ್ಕಾಗಿ), ಇಮ್ರಾನ್ ಸರ್ದಾರಿಯಾ(ಕೃಷ್ಣ ಚಿತ್ರದ ನೃತ್ಯಕ್ಕಾಗಿ), ಉತ್ತಮ ಪೋಷಕ ನಟ-ನಟಿ ಪ್ರಶಸ್ತಿಯನ್ನು ಯಾರಿಗೂ ಕೊಡಲಿಲ್ಲ.

    ಡಾ.ರಾಜ್‌ಕುಮಾರ್ ಪ್ರಶಸ್ತಿಯನ್ನು ಹಿರಿಯ ಕಲಾವಿದ ಶನಿಮಹದೇವಪ್ಪ ಹಾಗೂ ಶಾಂತಮ್ಮ ಅವರಿಗೆ ನೀಡಿ ಗೌರವಿಸಲಾಯಿತು. ನಟ ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಅಭಿನಯ ಶಾರದೆ ಜಯಂತಿ ಅವರಿಗೆ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕನ್ನಡ ಚಿತ್ರರಂಗದಲ್ಲಿ 25 ವಸಂತಗಳನ್ನು ಕಂಡಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನವರಸ ನಾಯಕ ಜಗ್ಗೇಶ್ ಅವರಿಗೆ ವಿಶೇಷ ಪ್ರಶಸ್ತಿ ನೀಡಲಾಯಿತು.

    ಐದೂವರೆ ಗಂಟೆಗಳ ಕಾಲ ನಡೆದ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಹಲವರ ಸಹನೆಯನ್ನು ಪರೀಕ್ಷಿಸುವಂತಿತ್ತು. ಕಾರ್ಯಕ್ರಮದ ಕಡೆಯ ಎರಡು ಗಂಟೆಗಳನ್ನು ನಿಭಾಯಿಸಲು ನಿರ್ವಾಹಕರು ಪರದಾಡಬೇಕಾಯಿತು. ಹಾಗಾಗಿ ಈ ರಸಸಂಜೆ ಕಾರ್ಯಕ್ರಮ ಕೆಲವರ ಪಾಲಿಗೆ ನೀರಸವಾಗಿ ಕಂಡಿತು. ನಟಿ ರಮ್ಯಾ ಹಾಗೂ ಜೆನ್ನಿಫರ್ ಕೊತ್ವಾಲ್‌‌ ವೇದಿಕೆಗೆ ಆಗಮಿಸುತ್ತಿದ್ದಂತೆ ಕಾರ್ಯಕ್ರಮಕ್ಕೆ ರಂಗೇರಿತು. ಅವರ ಮನತಣಿಸುವ ನೃತ್ಯ ಪ್ರೇಕ್ಷಕರನ್ನು ಗೆಲುವಾಗಿಸಿತು. ಕಾರ್ಯಕ್ರಮದಲ್ಲಿ ಐಟಿಸಿ ಫುಡ್ಸ್ ವಿಭಾಗದ ಪ್ರಾದೇಶಿಕ ಕಾರ್ಯನಿರ್ವಾಹಕ ನಿರ್ದೇಶಕರಾದ ರವಿ ನವರೆ ಅವರು ಉಪಸ್ಥಿತರಿದ್ದರು.

    (ದಟ್ಸ್‌ಕನ್ನಡ ವಾರ್ತೆ)

    Thursday, April 18, 2024, 10:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X