»   »  ರಾಧಿಕಾರಿಂದ ತೆರಿಗೆ ಇಲಾಖೆಗೆ ಭಾರಿ ಆದಾಯ!

ರಾಧಿಕಾರಿಂದ ತೆರಿಗೆ ಇಲಾಖೆಗೆ ಭಾರಿ ಆದಾಯ!

Posted By:
Subscribe to Filmibeat Kannada
ಕನ್ನಡ ಚಲನಚಿತ್ರ ನಟಿ ರಾಧಿಕಾ ದೆಸೆಯಿಂದ ಬೆಂಗಳೂರು ಆದಾಯ ತೆರಿಗೆ ಇಲಾಖೆ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ! ಆದಾಯ ತೆರಿಗೆ ಇಲಾಖೆಯನ್ನು ಕೇಂದ್ರ ಹಣಕಾಸು ಸಚಿವಾಲಯ ಶಹಬಾಸ್ ಎಂದು ಬೆನ್ನುತಟ್ಟಿ ಪ್ರೋತ್ಸಾಹಿಸಿದೆ.

ರಾಧಿಕಾ ಮನೆಯಿಂದ ಸುಮಾರು ರು.3 ಕೋಟಿ ತೆರಿಗೆ ವಂಚನೆ ಹಣವನ್ನು ವಶಪಡಿಸಿಕೊಂಡಿದ್ದ ಕಾರಣ ಆದಾಯ ತೆರಿಗೆ ಇಲಾಖೆ ಈ ಅಗ್ಗಳಿಕೆಗೆ ಪಾತ್ರವಾಗಿದೆ. ಫೆ.18, 2007ರಲ್ಲಿ ಬೆಂಗಳೂರು ಡಾಲರ್ಸ್ ಕಾಲೋನಿಯಲ್ಲಿನ ರಾಧಿಕಾ ಮನೆ ಮೇಲೆ ದಾಳಿ ಮಾಡಿ ಅಪಾರ ಮೊತ್ತದ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು.ದಾಳಿಯ ನೇತೃತ್ವ ವಹಿಸಿದ್ದ ಆದಾಯ ತೆರಿಗೆ ಇಲಾಖೆಯ ಮೂವರು ಹಿರಿಯ ತನಿಖಾಧಿಕಾರಿಗಳನ್ನು ಕೇಂದ್ರ ಹಣಕಾಸು ಸಚಿವಾಲಯ ಪ್ರಶಂಸಿಸಿದೆ.

ರಾಧಿಕಾ ಆದಾಯಕ್ಕೂ ಮೀರಿ ಅಧಿಕ ಹಣ ಹೊಂದಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು. ನಾಲ್ಕು ಗೋಣಿ ಚೀಲಗಳಲ್ಲಿ ತುಂಬಿದ ಹಣದೊಂದಿಗೆ ಟೊಯೊಟಾ ಇನ್ನೋವಾ ಕಾರು ಇನ್ನೇನು ರಾಧಿಕಾ ಮನೆ ಪ್ರವೇಶಿಸುತ್ತಿದ್ದಂತೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡಿದ್ದರು.

ದಾಳಿಯಲ್ಲಿ ರು.3.73 ಕೋಟಿ ನಗದು, ಚಿನ್ನಾಭರಣಗಳು ಮತ್ತು ಮನೆ ಖರೀದಿ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು.ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿನ ರಾಧಿಕಾರ ರು.12 ಕೋಟಿ ಮೌಲ್ಯದಲ್ಲಿ ಮನೆಯೂ ಪಟ್ಟಿಯಲ್ಲಿ ಸೇರಿತ್ತು. ರಾಧಿಕಾರ 2007-08ನೇ ಸಾಲಿನ ಆದಾಯ 9.96 ಕೋಟಿ ರು. ಎಂದು ಲೆಕ್ಕ ಹಾಕಿದ ಆದಾಯ ತೆರಿಗೆ ಇಲಾಖೆ ರು.3.24 ಕೋಟಿ ಮೊತ್ತದ ತೆರಿಗೆಯನ್ನು ಸಂಗ್ರಹಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೂರಕ ಓದಿಗೆ
ಮಾಲ್ಡವೀಸಿಗೆ ರಾಧಿಕಾ ಕುಮಾರಣ್ಣ ಪ್ರವಾಸ
ಝಡ್ ಪ್ಲಸ್ ಸೆಕ್ಯುರಿಟಿಯಲ್ಲಿ ರಾಧಿಕಾ ಪ್ರತ್ಯಕ್ಷ!
ಅವರ ಪರ್ಸನಲ್ ವಿಷಯ ನಮಗ್ಯಾಕೆ
ರಾಧಿಕಾ ಅವರ ಆಕರ್ಷಕ ಚಿತ್ರಪಟಗಳು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada