»   » ಭಯಾನಕ ಚಿತ್ರ ಡಾರ್ಕ್ ನ ಸುತ್ತ ಒಂದು ನೋಟ

ಭಯಾನಕ ಚಿತ್ರ ಡಾರ್ಕ್ ನ ಸುತ್ತ ಒಂದು ನೋಟ

Subscribe to Filmibeat Kannada

ಮಿಡಿಯಾ ವಿಷನ್ ನಿರ್ಮಾಣದ ಹೊಸ ಬಗೆಯ ಚಿತ್ರ ಡಾರ್ಕ್ ಈಗಾಗಲೇ ಚಿತ್ರೀಕರಣ ಆರಂಭಿಸಿ 30 ದಿನಗಳು ಕಳೆದಿವೆ. ಚಿತ್ರದಲ್ಲಿ ಶೇ. 20 ರಷ್ಟು ಅನಿಮೇಷನ್ ತಂತ್ರಜ್ಞಾನ ಬಳಸಿ ಚಿತ್ರವನ್ನು ತಯಾರಿಸಲಾಗಿದೆ. ಚಿತ್ರೀಕರಣಕ್ಕೆ ಹೆಚ್ ಡಿ ಕೆಮೆರಾ ಬಳಸಲಾಗಿದ್ದು, ಅನಿಮೇಷನ್ ಬಳಸಿ ಸತ್ತು ಹೋದ 40ರ ಪ್ರಾಯದ ಮನುಷ್ಯ ಎದ್ದು ಬರುವುದನ್ನು ಅದ್ಭುತವಾಗಿ ಶೂಟ್ ಮಾಡಿದ್ದೇವೆ ಎನ್ನುತ್ತಾರೆ ನಟ, ನಿರ್ಮಾಪಕವೈ. ಇ. ನಟರಾಜ್

ಈ ಚಿತ್ರದಲ್ಲಿ ಶೇ. 50 ಭಾಗ ಹೊಸಬರು ಉಳಿದಂತೆ ಹಿರಿಯ ನಟ, ನಟಿಯಿರುತ್ತಾರೆ. ಶ್ರೀನಿವಾಸಮೂರ್ತಿ, ರಮೇಶ್ ಭಟ್, ರಮೇಶ್ ಪಂಡಿತ್ ಹಾಗೂ ಪದ್ಮಾವಾಸಂತಿಯಂತಹ ಹಿರಿಯ ಕಲಾವಿದರ ಜತೆಗೆ ನಟರಾಜ್, ಚಂದ್ರಕಾಂತ್, ದಿಲೀಪ್ ರಾಜ್ ಮುಂತಾದ ಕಿರಿಯರು ಅಭಿನಯಿಸಿದ್ದಾರೆ. ಅಶ್ವಿನಿ ಈ ಚಿತ್ರದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಶೇ. 50 ರಷ್ಟು ಫ್ಲಾಷ್ ಬ್ಯಾಕ್ ಕಥೆ ಹಾಗೂ ಉಳಿದಂತೆ ವಾಸ್ತವದ ಕಥೆಯನ್ನು ಚಿತ್ರ ಹೊಂದಿರುತ್ತದೆ.

ಶೇಷಾದ್ರಿಪುರಂನ ಕ್ಯಾಪ್ಚರ್ ಕೇಂದ್ರದಲ್ಲಿ ಅಭಿನಯದ ಕುರಿತಾದ ಶೀಘ್ರ ತರಬೇತಿ ಪಡೆದಿರುವ ಅಶ್ವಿನಿ, ಈ ಚಿತ್ರದಲ್ಲಿ ಹಳ್ಳಿಹುಡುಗಿಯ ಪಾತ್ರ ಮಾಡುತ್ತಿದ್ದಾರೆ. ಚಿತ್ರರಂಗದ ಪರಿಚಯ ಡೆಡ್ಲಿ ಸೋಮ ಚಿತ್ರದ ನಿರ್ಮಾಪಕ ಹಾಗೂ ಸಂಬಂಧಿ ಜಾಕ್ ಮಂಜುನಾಥ್ ಮೂಲಕ ಆಯಿತು ಎನ್ನುತ್ತಾರೆ ಅಶ್ವಿನಿ. ಕನ್ನಡದಲ್ಲಿ ಭಯಾನಕಚಿತ್ರಗಳ ಕಾಲ ಮುಗಿದು ಹೋಯಿತು ಎನ್ನುವಾಗಲೇ ಡಾರ್ಕ್ ನಂತಹ 'ಭಯಾನಕ 'ಚಿತ್ರಗಳು ಬರಲು ಆರಂಭಿಸಿರುವುದು ಶುಭ ಸೂಚನೆ ಎನ್ನಬಹುದೇ?

(ದಟ್ಸ್ ಕನ್ನಡಸಿನಿವಾರ್ತೆ)

ಅನಿಮೇಷನ್ ತಂತ್ರಜ್ಞಾನದ ಅದ್ಭುತ ಡಾರ್ಕ್ ಟ್ರೈಲರ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada