For Quick Alerts
  ALLOW NOTIFICATIONS  
  For Daily Alerts

  ಖಾಲಿ ಖಾಲಿ ಕಣ್ಣಪರದೆಯಲ್ಲಿ ಯಶಸ್, ಸುಪ್ರೀತಾ

  |

  ದಿವಂಗತ ಶಂಕರ್ ನಾಗ್ ಅವರ 'ಗೀತಾ' ಚಿತ್ರದ 'ಕೇಳದೆ ನಿಮಗೀಗ...ದೂರದಲ್ಲಿ ಯಾರೋ' ಹಾಡಿನ ಸಾಲಿನ ಪ್ರಾರಂಭದ 'ಕೇಳದೆ ನಿಮಗೀಗ' ಎಂಬ ಸಾಲು ಚಿತ್ರವೊಂದಕ್ಕೆ ಶೀರ್ಷಿಕೆಯಾಗಿದ್ದು ಗೊತ್ತೇ ಇದೆ. ಸುದೀಪ್ ಶಿಷ್ಯ ಸತೀಶ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಯಶಸ್ ಸೂರ್ಯ, ಸುಪ್ರೀತಾ ಹಾಗೂ ಪೂಜಾ ಗಾಂಧಿ ಪ್ರಮುಖ ಪಾತ್ರಧಾರಿಗಳು. ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಹಾಡುಗಳೆರಡು ಬಾಕಿ ಇದ್ದವು.

  ಈ 'ಕೇಳದೆ ನಿಮಗೀಗ' ಚಿತ್ರಕ್ಕಾಗಿ 'ಪ್ರೇಮಕಥೆ ಬರೆದನು ಪರಶಿವನು...' ಹಾಗೂ 'ಖಾಲಿ ಖಾಲಿ ಕಣ್ಣ ಪರದೆ...' ಹಾಡುಗಳ ಚಿತ್ರೀಕರಣ ಮಾಲೂರ್ ಶ್ರೀನಿವಾಸ್ ನೃತ್ಯನಿರ್ದೇಶನದಲ್ಲಿ ಇತ್ತೀಚಿಗೆ ನಡೆದಿದೆ. ಇನ್ನುಳಿದ ಹಾಡುಗಳ ಚಿತ್ರೀಕರಣ ಈ ಮೊದಲೇ ಮುಗಿದಿರುವುದರಿಂದ ಚಿತ್ರದ ಚಿತ್ರೀಕರಣ ಮುಗಿದಂತಾಗಿದೆ. ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಪ್ರಾರಂಭವಾಗಲಿದೆ. ಶ್ರೀ ವೆಂಕಟ್ ಕ್ಯಾಮರಾ ಹಿಡಿದಿದ್ದು ಅಲ್ಟಿಮೇಟ್ ಶಿವು ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ಚಿತ್ರಕ್ಕಿದೆ.

  ವಿ ಮನೋಹರ್ ಸಂಗೀತ ಹಾಗೂ ಹಾಡುಗಳಿರುವ ಈ ಚಿತ್ರದಲ್ಲಿ ಡಾ ನಾಗೇಂದ್ರ ಪ್ರಸಾದ್ ಕೂಡ ಹಾಡು ಬರೆದಿದ್ದಾರೆ. ಮಿಂಚು ಪ್ರೊಡಕ್ಷನ್ ಅಡಿಯಲ್ಲಿ ಈ ಚಿತ್ರವನ್ನು ಯುವರಾಜ್ ಸಮರ್ಥ್ ನಿರ್ಮಿಸಿದ್ದಾರೆ. 'ಶಿಶಿರ' ಚಿತ್ರದಲ್ಲಿ ಅಮೋಘವಾಗಿ ನಟಿಸಿದ್ದ ಯಶಸ್ ಸೂರ್ಯ ಈ ಚಿತ್ರದ ನಾಯಕರು. ಸುಪ್ರೀತಾ, ಪೂಜಾ ಗಾಂಧಿ ಅವರೊಂದಿಗೆ ರೂಪಾದೇವಿ, ನೀನಾಸಂ ಅಶ್ವಥ್, ನವೀನ್ ತೀರ್ಥಹಳ್ಳಿ, ಬುಲೆಟ್ ಪ್ರಕಾಶ್ ಮುಂತಾದವರು ಪೋಷಕಪಾತ್ರದಲ್ಲಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Kannada actor Yashas Surya and Suprita starer movie 'Kelade Nimageega' has compleeted its Shooting. Pooja Gandhi also acted in an Important Role. Sathish, new comer has Directed this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X