ಈ ವಾರ ನಾಲ್ಕನೇ ಮನೆಯಲ್ಲಿ "ಶುಕ್ರ"!

By * ಚಿತ್ರಗುಪ್ತ

ವಾರಕ್ಕೆ ಎರಡು ಮೂರು ಚಿತ್ರಗಳು ತೆರೆ ಕಾಣುವುದು ಮಾಮೂಲಿ. ಅಂಥದ್ದರಲ್ಲಿ ಏಕಾಏಕಿ ನಾಲ್ಕು ಮಿಸೈಲ್‌ಗಳು ಪ್ರೇಕ್ಷಕರ ಮೇಲೆ ಬಿದ್ದರೆ ಏನಾಗಲಿಕ್ಕಿಲ್ಲ? ಏನಾಗಬೇಕೋ ಅದು ಆಗಲಿಲ್ಲ ಎನ್ನುವುದು ಉದ್ಧರಣ ಚಿನ್ನೆ ಗಾತ್ರದ ಉತ್ತರ!

ಈ ವಾರ ಬರೋಬ್ಬರಿ ನಾಲ್ಕು ಚಿತ್ರಗಳು ಬಿಡುಗಡೆಯಾಗಿವೆ. ಒಂದು ಕಡೆ ಸಂಭಾಷಣೆಕಾರ ರಂಗಪ್ಪ ಹೋಗ್ಬಿಟ್ನಾ?, ಇನ್ನೊಂದು ಕಡೆ ಅಪ್ಪು ವೆಂಕಟೇಶ್ ಅವರ ಒನ್‌ಡೇ, ಮತ್ತೊಂದು ಕಡೆ ಹೊಸಬರೇ ಹೆಣೆದಿರುವ ಸ್ಯೂಸೈಡ್, ಮಗದೊಂದು ಕಡೆ ದೇವರಾಜ್ ಮಗನ ಕೋಟೆ!

ಯಾರು ಹಿತವರು ನಿಮಗೆ ಈ ನಾಲ್ವರೊಳಗೆ ಎಂಬ ಊಹಾತೀತ ಪ್ರಶ್ನೆಯನ್ನು ಶುಕ್ರವಾರ ಬೆಳಗ್ಗೆ ಮುಂದಿಟ್ಟಾಗ ಪ್ರೇಕ್ಷಕಪ್ರಭು ಒಕ್ಕೋರಲಿನಿಂದ ರಿಪೋರ್ಟ್ ಕೊಟ್ಟಿದ್ದು-ರಂಗಪ್ಪ ಹೋಗೇಬಿಟ್ಟ, ಒನ್‌ಡೇ ಮಂಡೇ ಒಳಗೆ ಎತ್ತಂಗಡಿ, ಕೋಟೆ ಕೋಟಿ ಗಳಿಸದಿದ್ದರೂ ಮೂರು ವಾರ ಓಕೆ, ಸೂಸೈಡ್ ನೋಡುವ ಬದಲು ಮನೆಯಲ್ಲೇ ಕೂತು ಪುಂಕಾನುಪುಂಕವಾಗಿ ಬರುವ ಸೀರಿಯಲ್ ನೋಡಬಹುದು!

ತಿಂಗಳಿಂದೀಚೆಗೆ ಕನ್ನಡ ಚಿತ್ರರಂಗ ನಿರೀಕ್ಷೆಗೂ ಮೀರಿ ಚೇತರಿಕೆ ಕಂಡಿತ್ತು. ಮೈಲಾರಿ ಮೈಲೇಜ್ ಐವತ್ತರ ಗಡಿ ದಾಟಿತ್ತು, ಸೂಪರ್ ಅಂತೂ ಸೂಪರ್ರೋ ರಂಗಾ, ಜಾಕಿ ನೂರಿಪ್ಪತ್ತೈದು ದಿನಕ್ಕೆ ಮೂರೂವರೆ ದಿನ ಬಾಕಿ, ಬಾಸ್ ದರ್ಶನ್‌ಗೆ ಉಸಿರು ನೀಡಿತು, ಒಲವೇ ಮಂದಾರಕ್ಕ ಮನೆ ಮಂದಿ ಬಂದಾರ, ಮೊದಲಾ ಸಲ ಕುಂಟುತ್ತಾ ಸಾಗಿದರೂ ನಿರ್ಮಾಪಕರ ಸಾಲ ತೀರಿಸಿದೆ...

ಹೀಗೆ ವಾಣಿಜ್ಯ ಮಂಡಳಿಯ ಮುಂದೆ ನಿಂತು ಹರಟುವ ಸೋ ಕಾಲ್ಡ್ ಸಿನಿ ಪ್ರಿಯರ ಪಾಸಿಟಿವ್ ಮಾತು ಕೇಳಿ ಬರುತ್ತಿತ್ತು. ಆದರೆ, ಈ ವಾರ ಬಂದ ನಾಲ್ಕರಲ್ಲಿ ಮೂರನ್ನು ನೋಡೋಕೆ ಎರಡು ಕಣ್ಣು ಸಾಲದಮ್ಮ... ಕೋಟೆಯನ್ನು ಕಷ್ಟಪಟ್ಟು ಸಹಿಸಿಕೊಂಡು ನೋಡಿದರೆ ಓಕೆನಮ್ಮಾ... ಎನ್ನುತ್ತಿದ್ದಾರೆ ಅದೇ ಸೇಮ್ ಓಲ್ಡ್ ಸಿನಿಪ್ರಿಯರು!

ಅಕಸ್ಮಾತ್ ಈ ನಾಲ್ಕೂ ಚಿತ್ರಗಳು ಹಿಗ್ಗಾ ಮಗ್ಗಾ ಹಿಟ್ ಆಗುವ ಕ್ವಾಲಿಟಿ ಹೊಂದಿದ್ದರೆ ಪ್ರೇಕ್ಷಕರ ಗತಿ ಏನು ಎಂಬ ಪ್ರಶ್ನೆಗೆ ಉತ್ತರ ಮುಂದಿನ ದಿನಗಳಲ್ಲಾದರೂ ಸಿಕ್ಕರೆ... ಒಂದು. ಎರಡು.. ಮೂರು... ನಾಲ್ಕು.... ಆಮೇಲಿನ್ನೇನು???

More from Filmibeat

English summary
Is Kannada Film Chamber of Commerce(KFCC)has broken its own rules by allowing releasing of more movies. Four new kannada movies released last day which not only created problem of movie theater allotment also created chaos in the mind of cine lovers to choose which movie to go.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X