ಬೇಸಿಗೆ ಬೇಗೆಯಲ್ಲಿ ಕ್ರೇಜಿಸ್ಟಾರ್ ಮಂಜಿನ ಹನಿಗಳು

By Rajendra

ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಏನಾಗಿದೆಯೋ ಗೊತ್ತಿಲ್ಲ. ಅವರಂತೂ ಆರಾಮವಾಗಿದ್ದಾರೆ. ಆದರೆ ಅವರ ಅಭಿನಯದ ಮಂಜಿನ ಹನಿ ಚಿತ್ರ ಮಾತ್ರ ಯಾಕೋ ಏನೋ ಚಿತ್ರಮಂದಿರಕ್ಕೆ ಅಡಿಯಿಡಲು ಹಿಂದೆ ಮುಂದೆ ನೋಡುತ್ತಿದೆ. ಬೇಸಿಗೆಯಲ್ಲಿ ಎಂಥಹ ಮಂಜು ಕರಗುವ ಕಾರಣ ಮಂಜಿನ ಹನಿಗಳು ತಂಪೆರೆಯುವ ಸಾಧ್ಯತೆಗಳಿವೆ.

ಕನಸುಗಾರ ಬಹುನಿರೀಕ್ಷಿತ ಕನಸು ಮಂಜಿನ ಹನಿ ಚಿತ್ರೀಕರಣ ಬಹುತೇಕ ಮುಗಿದಿದೆ. ರವಿಚಂದ್ರನ್ ಕನಸಿನಂತೆ ಚಿತ್ರ ಮೂಡಿಬಂದಿದೆಯಂತೆ ಎಂದು ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್ ತಿಳಿಸಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಮಂಜಿನ ಹನಿ ಆಡಿಯೋ ಮಾರುಕಟ್ಟೆಗೆ ಅಪ್ಪಳಿಸಲಿದೆ ಎಂದಿದ್ದಾರೆ.

ರವಿಚಂದ್ರನ್ ಹುಟ್ಟುಹಬ್ಬದ ದಿನ ಅಂದರೆ ಮೇ.30ರಂದು ಮಂಜಿನ ಹನಿಯನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂದು ಕನಸುಗಾರನ ಮತ್ತೊಂದು ಕನಸು ನೆರವೇರಲಿದೆ. ಅದೇನೆಂದರೆ ಅವರ ಮಗ ಮನೋರಂಜನ್ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಲಿದ್ದಾರೆ. ವೀರಸ್ವಾಮಿ ಕುಟುಂಬದ ಮೂರನೆ ತಲೆಮಾರಿನ ಬಳ್ಳಿ ಬೆಳ್ಳಿತೆರೆ ಬೆಳಗಲು ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ.

More from Filmibeat

English summary
Crazy Star lead movie Manjina Hani finally releasing on May 3, 2011 on his birthday. The movie is produced by Sandesh Nagaraj. On that day Ravichandran introducing his son Manoranjan to film industry. Audio of the film Manjina Hani to be release in April middle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X