»   » ಪಲ್ಲವಿ ಇಲ್ಲದ ಚರಣ, ಮಸ್ತ್ ಮಜಾ ಮಾಡಿ ತೆರೆಗೆ

ಪಲ್ಲವಿ ಇಲ್ಲದ ಚರಣ, ಮಸ್ತ್ ಮಜಾ ಮಾಡಿ ತೆರೆಗೆ

Subscribe to Filmibeat Kannada
jennifer kotwal
ಈ ವಾರ ಕೂಡ ಮೂರು ಚಿತ್ರಗಳು ತೆರೆಕಾಣುತ್ತಿದೆ. ಬಹುಶಃ ಮುಂಬರುವ ವಾರದಲ್ಲೂ ಈ ಪದ್ಧತಿ ಮುಂದುವರೆಯಲಿದೆ. ಪ್ರಮುಖ ಚಿತ್ರಮಂದಿರಗಳು ದೊರೆಯದ ಕಾರಣ ಬಿಡುಗಡೆಗೆ ಸಿದ್ಧವಿರುವ ಚಿತ್ರಗಳು ತೆರೆಕಾಣುವುದು ತಡವಾಗುತ್ತಿದೆ. ಬಹು ತಾರಾಗಣದ ಹಾಸ್ಯ ಪ್ರಧಾನ ಚಿತ್ರ ಮಸ್ತ್ ಮಜಾ ಮಾಡಿ, ಕ್ರೈಂ ಆಧಾರಿತ ಪಲ್ಲವಿ ಇಲ್ಲದ ಚರಣ, ಸಾಹಸಭರಿತ ಸಂಚು ಇಂದು ತೆರೆಕಂಡಿವೆ.

"ಮಸ್ತ್ ಮಜಾ ಮಾಡಿ"

ಸೌಂದರ್ಯ ನಮನ ಕ್ರಿಯೇಷನ್ಸ್ ಅವರ ಚೊಚ್ಚಲ ಚಿತ್ರ "ಮಸ್ತ್ ಮಜಾ ಮಾಡಿ" ಇಂದು ರಾಜ್ಯಾದ್ಯಂತ ತೆರೆಕಾಣಲಿದೆ. ಚಿತ್ರದ ಜಾಹಿರಾತುಗಳನ್ನು ಹೊತ್ತ ಐದು ನಗರಸಾರಿಗೆ ಬಸ್ಸಗಳು ಪ್ರಮುಖ ಬಡಾವಣೆಗಳಲ್ಲಿ ಚಲಿಸಿ ನಾಗರಿಕರ ಮನದಲ್ಲಿ ಮಸ್ತ್ ಮಜಾ ಮಾಡಲು ಹೊರಟಿದೆ. ರಿಯಲ್ ಸ್ಟಾರ್ ಉಪೇಂದ್ರ ಬಹು ನಾಯಕಿಯರೊಂದಿಗೆ ಹೆಜ್ಜೆ ಹಾಕಿರುವುದು ಚಿತ್ರದ ವಿಶೇಷ ಒಂದಾದರೆ ಐದು ಜನ ನಾಯಕಿಯರಿಗೆ ಏಕ ನಾಯಕಿಯಾಗಿ ಜೆನ್ನಿಫರ್ ಇರುತ್ತಾರೆ.

ತಾರಾಗಣ : ಸುದೀಪ್, ಕೋಮಲ್, ವಿಜಯ ರಾಘವೇಂದ್ರ, ದಿಗಂತ್, ನಾಗಕಿರಣ್, ಜೆನ್ನಿಫರ್ ಕೊತ್ವಾಲ್, ರಂಗಾಯಣ ರಘು, ಸಿಹಿಕಹಿ ಚಂದ್ರು ಮುಂತಾದವರು
ಕಥೆ: ಸೌಂದರ್ಯ ನಮನ ಕ್ರಿಯೇಷನ್ಸ್ ತಂಡ
ಸಾಹಿತ್ಯ: ಕವಿರಾಜ್, ರಾಮ್ ನಾರಾಯಣ್, ಶ್ಯಾಮ್
ಸಂಗೀತ: ಬಾಲಾಜಿ
ಛಾಯಾಗ್ರಹಣ: ಎಂ. ಅರ್. ಸೀನು
ನಿರ್ದೇಶನ: ಅನಂತರಾಜು
ಪ್ರಮುಖ ಚಿತ್ರಮಂದಿರಗಳು: ಸಂತೋಷ್ , ನವರಂಗ್ , ಈಶ್ವರಿ , ಆದರ್ಶ, ಭಾರತಿ(ಪೀಣ್ಯ), ಬಾಲಾಜಿ(ತಾವರೆಕರೆ) ವಜ್ರೇಶ್ವರಿ(ಉಲ್ಲಾಳ), ನರಸಿಂಹ (ಹೊಸೂರು ರಸ್ತೆ) [ಎಲ್ಲಾ 4 ಆಟಗಳು], ವೀರೇಶ್,ಮಾರುತಿ(ರಾಜಗೋಪಾಲನಗರ),ಮಾನಸ(ಕೋಣನಕುಂಟೆ)[ಎಲ್ಲಾ 3 ಆಟಗಳು], ಪ್ರಸನ್ನ, ಗೋವರ್ಧನ್, ಉಮಾ, ಮೋಹನ್(ಸುಂಕದ ಕಟ್ಟೆ) ,ವೆಂಕಟೇಶ್ವರ(ಆವಲಹಳ್ಳಿ) [ಎಲ್ಲಾ ಬೆ.ಆಟಗಳು] , ಪಿವಿಆರ್ ಹಾಗೂ ಇನ್ನಿತರ ಚಿತ್ರಮಂದಿರಗಳು
***
ಪಲ್ಲವಿ ಇಲ್ಲದ ಚರಣ

ಶ್ರೀ. ಎಸ್.ವಿ.ಕೆ. ಪ್ರೊಡಕ್ಷನ್ ಲಾಂಚನದಲ್ಲಿ ಹೊಸಪೇಟೆ ವಿನೋದ್ ಸಿಂಗ್ ನಿರ್ಮಿಸಿರುವ ಈ ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ. ಪ್ರೀತಿ ಮತ್ತು ಕ್ರೈಂ ಆಧಾರಿತ ಚಿತ್ರ.ನಾಗಕಿರಣ್ ಮಸ್ತ್ ಮಜಾ ಚಿತ್ರದ ನಾಯಕರಲ್ಲಿ ಒಬ್ಬರಾಗಿದ್ದು, ಅವರ ಎರಡು ಚಿತ್ರಗಳು ಒಂದೇ ದಿನದಂದು ತೆರೆಕಾಣುತ್ತಿರುವುದು ವಿಶೇಷ.

ತಾರಾಗಣ : ನಾಗಕಿರಣ್, ಪಾಯಲ್, ಬಾಲು, ಲಂಬೂ ನಾಗೇಶ್, ಮಂಡ್ಯ ರಮೇಶ್, ಅರವಿಂದ್ ಮುಂತಾದವರಿದ್ದಾರೆ.
ಸಂಗೀತ: ಬಾಬ್ಜಿ ಸಂದೀಪ್
ಛಾಯಾಗ್ರಹಣ:ನಾಗೇಶ್ವರ ರಾವ್
ನಿರ್ದೇಶನ: ಶಿವಪ್ರಭು
ಚಿತ್ರಮಂದಿರ: ಅಪರ್ಣ(4 ಆಟ)
***
ಸಂಚು
ಯೌವನದ ಸುಳಿಯಲ್ಲಿ, ಅಗ್ನಿಕನ್ಯೆ , ಅನಾಥರಕ್ಷಕ, ಅನಂತ ಪ್ರೇಮ, ಭಾರತನಾರಿ ಎಂಬ ವಿಭಿನ್ನ ವಿಚಿತ್ರ ಚಿತ್ರಗಳನ್ನು ನೀಡಿದ ಛಾಯಾಗ್ರಾಹಕ ಮತ್ತು ನಿರ್ದೇಶಕ ಟಿ, ಜನಾರ್ಧನ್ ಅವರ ನಿರ್ಮಾಣದ ಸಂಚು ಚಿತ್ರ ಕೂಡ ತೆರೆ ಕಂಡಿದೆ. ಕುತೂಹಲ ಭರಿತ ಚಿತ್ರವಾಗಿದ್ದು ನಿಮ್ಮ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ ಎಂದು ಚಿತ್ರದ ನಿರ್ಮಾಪಕ, ಛಾಯಾಗ್ರಾಹಕ ಟಿ. ಜನಾರ್ಧನ್ ಹೇಳುತ್ತಾರೆ. ಕಿರುತೆರೆಯಲ್ಲಿ ಹೆಸರು ಮಾಡಿದ ಎಂ.ಡಿ ಕೌಶಿಕ್ ಚಿತ್ರದ ನಿರ್ದೇಶಕ.

ಲಾಂಛನ: ಮಂಜುನಾಥೇಶ್ವರ ಪಿಕ್ಚರ್ಸ್
ನಿರ್ದೇಶಕ: ಎಂ.ಡಿ.ಕೌಶಿಕ್
ತಾರಾಗಣ: ಸ್ವಸ್ತಿಕ್ ಶಂಕರ್
ಚಿತ್ರಮಂದಿರ: ಕೈಲಾಶ್ (4 ಆಟ), ನವರಂಗ್ (ರಾತ್ರಿ 10ಕ್ಕೆ), ವಿಶಾಲ್, ರಾಜೇಶ್ವರಿ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಪೂರಕ ಓದಿಗೆ:
12 ಮಂದಿ ನಟಿಯರೊಂದಿಗೆ ಉಪೇಂದ್ರ
ಪಂಚನಾಯಕರ ಮುದ್ದಿನ ನಾಯಕಿಯಾಗಿ ಜನ್ನಿಫರ್
ವಿದೇಶದಲ್ಲಿ ನಾಲ್ವರು ನಾಯಕರ ಮಸ್ತ್ ಮಜಾ ಮಾಡಿ

 

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada