ಪ್ರೀತಿಯ ಹಂಗಾಮ, ಹೌಸ್ ಫುಲ್ ಚಿತ್ರ ಮುನ್ನಡೆ

By Staff

ಮೇವರಿಕ್ ಸಂಸ್ಥೆಯ ಲಾಂಛನದಲ್ಲಿ ಡಾ:ಅನುಜ್‌ಸಕ್ಸೆನಾ ನಿರ್ಮಾಣದ ಹೌಸ್‌ಫುಲ್ ಚಿತ್ರಕ್ಕೆ ನಗರದಲ್ಲಿ ಭರದ ಚಿತ್ರೀಕರಣ ನಡೆಯುತ್ತಿದೆ. ದಿಗಂತ್, ಗಿರಿಜಾಓಕ್, ರಮೇಶ್‌ಭಟ್, ಲೋಕನಾಥ್, ರೇಖಾ ವಿ ಕುಮಾರ್ ಅವರ ಅಭಿನಯದಲ್ಲಿ ಹಲವು ಹಾಸ್ಯ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಂಡ ನಿರ್ದೇಶಕ ಹೇಮಂತ್ ಹೆಗ್ಡೆ ಈ ಚಿತ್ರದಲ್ಲಿ ವಿಶೇಷ ಜೀಪ್‌ವೊಂದನ್ನು ಬಳಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಕಳೆದ ಮೂರುವರ್ಷಗಳಿಂದ ಮುಂಬೈನಲ್ಲಿ ಜಾಹಿರಾತು ವಿಭಾಗ ಸೇರಿದಂತೆ ವಿವಿಧ ಭಾಗಗಳಲ್ಲಿ ಗುರುತಿಸಿಕೊಂಡಿರುವ ಮೇವರಿಕ್ ಸಂಸ್ಥೆ ಹೌಸ್‌ಫುಲ್ ಚಿತ್ರವನ್ನು ನಿರ್ಮಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. 100% ಕಾಮಿಡಿ ಹಾಗೂ 0% ಬೋರು ಎಂಬ ಅಡಿಬರಹದೊಂದಿಗೆ ನಿರ್ಮಾಣವಾಗುತ್ತಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಕಿರಣ್‌ರಾವ್. ಮಗಿವೆಂಕಟೇಶ್ ಛಾಯಾಗ್ರಹಣ, ಕಿರಣ್ ಸಂಗೀತ, ಶ್ರೀಧರ್‌ಹೆಗ್ಡೆ ಸಂಕಲನವಿರುವ ಚಿತ್ರದ ತಾರಾಬಳಗದಲ್ಲಿ ದಿಗಂತ್, ಗಿರಿಜಾಓಕ್, ವಿಶಾಕಸಿಂಗ್, ಲೋಕನಾಥ್, ಹೇಮಂತ್‌ಹೆಗ್ಡೆ, ಮಿಲಿಂದ್‌ಗುನಾಜಿ, ಅವತಾರ್‌ಗಿಲ್, ರಮೇಶ್‌ಭಟ್, ಬುಲೆಟ್‌ಪ್ರಕಾಶ್ ಮುಂತಾದವರಿದ್ದಾರೆ.
****

ಮುಂದುವರೆದ ಪ್ರೀತಿಯ ಹಂಗಾಮ
ವಿಶಿಷ್ಟ ಚಲನಚಿತ್ರ ಶೀರ್ಷಿಕೆಗಳಿಂದ ಹೆಸರಾಗುತ್ತಿದೆ ಕನ್ನಡ ಚಿತ್ರರಂಗ. ಆ ಸಾಲಿಗೆ ಮತ್ತೊಂದು ಸೇರ್ಪಡೆ ಪ್ರೀತಿಯ ಹಂಗಾಮ. ನಿವಾಸಿ ಆರ್ಟ್ಸ್ ಲಾಂಛನದಲ್ಲಿ ಹಿಂದೆ ಹೃದಯ ಬಂಧನ, ಪ್ರತಿಧ್ವನಿ ಚಿತ್ರಗಳನ್ನು ನಿರ್ಮಿಸಿದ್ದ ಏಕನಾಥ್ ಅವರ ನಿರ್ಮಾಣದ ಈ ಚಿತ್ರಕ್ಕೆ ನಾಯಕ ವಿವೇಕ್‌ರಾಜ್, ನಾಯಕಿ ಶುಭಾಪುಂಜಾ, ನಂದ, ಅವಿನಾಶ್, ಎನ್ ಜಿ ಆರ್ ಮಂಜು ಹಾಗೂ ಸಹಕಲಾವಿದರ ಅಭಿನಯದಲ್ಲಿ ನಗರದ ಮಾರತಹಳ್ಳಿಯ ಮಲ್ಟಿಪ್ಲಕ್ಸ್ ಹಾಗೂ ಮುಂತಾದೆಡೆ 15ದಿನಗಳ ಮೊದಲಹಂತದ ಚಿತ್ರೀಕರಣ ಪೂರ್ಣವಾಗಿದೆ. ಶೀಘ್ರದಲ್ಲೇ ಬೆಂಗಳೂರು ಹಾಗೂ ಮಂಡ್ಯದಲ್ಲಿ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ

ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ವಿವೇಕ್‌ರಾಜ್ ಚಿತ್ರದ ನಿರ್ದೇಶಕರೂ ಹೌದು. ಆರು ಹಾಡುಗಳಿರುವ ಈ ಚಿತ್ರಕ್ಕೆ ರಾಜ್‌ಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಚಂದ್ರಶೇಖರ್ ಛಾಯಾಗ್ರಹಣ, ವರ್ಮನ್ ಸಂಕಲನ, ಮೋಹನ್ ಕಲೆ, ಎಂ.ಎಸ್.ರಮೇಶ್ ಹಾಗೂ ಆರ್.ರಾಜಶೇಖರ್ ಸಂಭಾಷಣೆ, ಕವಿರಾಜ್ ಗೀತರಚನೆ, ಹರ್ಷ ಸಹನಿರ್ದೇಶನ ಹಾಗೂ ಜೈಕುಮಾರ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿವೇಕ್‌ರಾಜ್, ಶುಭಾಪುಂಜಾ, ಅವಿನಾಶ್, ಊರ್ವಶಿ, ನಂದ, ಪ್ರಕಾಶ್ ಮುಂತಾದವರಿದ್ದಾರೆ.

(ದಟ್ಸ್ ಸಿನಿವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X