»   » ಹೆಂಗಳೆಯರ ಮನದಲ್ಲಿ ಅಣ್ಣನಾದ ಪಾನ್ ವಾಲ

ಹೆಂಗಳೆಯರ ಮನದಲ್ಲಿ ಅಣ್ಣನಾದ ಪಾನ್ ವಾಲ

Posted By:
Subscribe to Filmibeat Kannada

ಅಣ್ಣತಂಗಿಯರ ಈ ಬಂಧ ಜನುಮಜನುಮಗಳ ಅನುಬಂಧ ಎಂದ ಶಿವರಾಜಕುಮಾರ್ ದೇವರು ಕೊಟ್ಟ ತಂಗಿ ಎಂದು ಕರ್ನಾಟಕದ ಹೆಂಗಳೆಯರ ಮನದಲ್ಲಿ ಅಣ್ಣನಾಗಿ ಶಾಶ್ವತ ಸ್ಥಾನ ಪಡೆದವರು. ಶ್ರೀಮತಿ ಲಕ್ಷ್ಮೀ ಅವರು ಅರ್ಪಿಸಿ ಆದಿತ್ಯ ಆರ್ಟ್ಸ್ ಎಂ ಎಲ್ ಸಿ ಲಾಂಛನದಲ್ಲಿ ಆದಿತ್ಯಬಾಬು ಅವರು ನಿರ್ಮಿಸುತ್ತಿರುವ ಪರಮೇಶ ಪಾನ್‌ವಾಲ ಚಿತ್ರದಲ್ಲೂ ಇಂಥ ಒಂದು ಘಟನೆ ನಡೆಯುತ್ತದೆ.

ಖಳನಟ ಮಹೇಶ್ ಶಿವಣ್ಣನ ಸಹೋದರಿ ಸೋನುವನ್ನು ಛೇಡಿಸುತ್ತಾನೆ. ಈ ವಿಷಯವನ್ನು ತಂಗಿಯಿಂದ ತಿಳಿದ ಶಿವಣ್ಣ ತನ್ನ ಕೋಪದ ಕಣ್ಣನ್ನು ತೆರೆದು ಮಹೇಶ ಹಾಗೂ ಆತನ ಪಡೆಗೆ ತಕ್ಕ ಪಾಠ ಕಲಿಸುವ ಸನ್ನಿವೇಶವನ್ನು ಸ್ಯಾಮೀಸ್ ಡ್ರೀಂ ಲ್ಯಾಂಡ್ ಹಾಗೂ ನೆಲಮಂಗಲದ ಭುಜಂಗಯ್ಯ ಶೆಟ್ಟಿ ಅವರ ನಿವಾಸದಲ್ಲಿ ಸಾಹಸ ನಿರ್ದೇಶಕ ರವಿವರ್ಮ ಅವರ ಸಹಯೋಗದೊಂದಿಗೆ ನಿರ್ದೇಶಕ ಮಹೇಶ್‌ಬಾಬು ಚಿತ್ರೀಕರಿಸಿಕೊಂಡರು.

ಹಿಂದೆ ಪುನೀತ್‌ರಾಜಕುಮಾರ್ ಅಭಿನಯದ ಅರಸು ಹಾಗೂ ಆಕಾಶ್ ಚಿತ್ರಗಳನ್ನು ನಿರ್ದೇಶಿಸಿದ್ದ ಮಹೇಶ್‌ಬಾಬು ಅವರು ಜನಾರ್ಧನ ಮಹರ್ಷಿ ಬರೆದಿರುವ ಕಥೆಗೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ವಿ.ಹರಿಕೃಷ್ಣ ಸಂಗೀತ, ವೀನಸ್‌ಮೂರ್ತಿ ಛಾಯಾಗ್ರಹಣ, ರವಿವರ್ಮ ಸಾಹಸ, ಕುಮಾರ್ ಕಲೆ ಹಾಗೂ ಚಂಪಕಧಾಮ ಬಾಬು, ಗಗನಮೂರ್ತಿ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಸೋನು, ಶ್ರೀನಿವಾಸಮೂರ್ತಿ, ಆಶೀಷ್‌ವಿದ್ಯಾರ್ಥಿ, ಅಕುಲ್‌ಬಾಲಾಜಿ, ಚಿತ್ರಾಶೆಣೈ, ರೇಖಾ, ಡಾ:ನಾಗೇಶ್ ಹಾಗೂ ಮಹೇಶ್ ಇದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada