twitter
    For Quick Alerts
    ALLOW NOTIFICATIONS  
    For Daily Alerts

    ಫಿಲಂ ಚೇಂಬರ್‌ ಸದಸ್ಯರಿಗೆ ಬೆಂಡೆತ್ತಿದ ಎಂಎಸ್ ಸತ್ಯು

    By Rajendra
    |

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರನ್ನು ಖ್ಯಾತ ನಿರ್ದೇಶಕ ಎಂಎಸ್ ಸತ್ಯು ಬೆಂಡೆತ್ತಿದ್ದಾರೆ. ಫಿಲಂ ಚೇಂಬರ್ ಸದಸ್ಯರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದು ಕಲಾತ್ಮಕ ಚಿತ್ರಗಳನ್ನು ಕಡೆಗಣಿಸುತ್ತಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

    ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೊಸ ರಕ್ತ ಹರಿಯುತ್ತಿಲ್ಲ. ಪ್ರತಿ ವರ್ಷ ಅದೇ ಅದೇ ಮುಖಗಳು. ಇವರಿಗೆ ಪರಭಾಷಾ ಚಿತ್ರಗಳ ಮೇಲಿನ ಮಮಕಾರ ಮಾತೃಭಾಷೆಯ ಚಿತ್ರಗಳ ಮೇಲಿಲ್ಲ. ಅತ್ಯುತ್ತಮ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಪಿ.ಶೇಷಾದ್ರಿ ಅಂತಹವರನ್ನು ಫಿಲಂ ಚೇಂಬರ್ ಕಡೆಗಣಿಸುತ್ತಿದೆ ಎಂದು ಸತ್ಯು ಬೇಸರಿಸಿಕೊಂಡಿದ್ದಾರೆ.

    ಕನ್ನಡದಲ್ಲಿ ನಿರ್ಮಾಣವಾದ ಅತ್ಯುತ್ತಮ ಚಿತ್ರಗಳು ಚಿತ್ರಮಂದಿರ ಸಮಸ್ಯೆಯನು ಎದುರಿಸುತ್ತಿವೆ. ಇದನ್ನು ಪರಿಹರಿಸುವ ಪ್ರಯತ್ನವನ್ನು ಫಿಲಂ ಚೇಂಬರ್ ಮಾಡುತ್ತಿಲ್ಲ. ರೀಮೇಕ್ ಚಿತ್ರಗಳಿಗೆ ಇವರು ರತ್ನಗಂಬಳಿ ಸ್ವಾಗತ ಕೋರುತ್ತಿದ್ದಾರೆ. ಆದರೆ ಕಲಾತ್ಮಕ ಚಿತ್ರಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದಿರುವ ಸತ್ಯು ಫಿಲಂ ಚೇಂಬರ್ ಸದಸ್ಯರನ್ನು 'ಪುಂಡರು' ಎಂದೂ ಜರಿದಿದ್ದಾರೆ. (ಏಜೆನ್ಸೀಸ್)

    English summary
    Veteran director MS Sathyu take to task on members of KFCC have no concern to quality films. It is bounded duty of KFCC to get good theatre set up for films made in good quality. In KFCC only hooligans are members. Same old faces stay in the committee year after year.
    Thursday, April 12, 2012, 17:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X