ಪಾಲಿಟಿಕ್ಸ್‌ಗೆ ಎನ್ಟಿಆರ್ ಪುತ್ರ ಬಾಲಕೃಷ್ಣ ಎಂಟ್ರಿ

By Rajendra

Actor N Balakrishna
ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಎನ್ ಟಿ ರಾಮರಾವ್ ಅವರ ಪುತ್ರ ಎನ್ ಬಾಲಕೃಷ್ಣ ಅವರು 2014ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ. ಈ ಮೂಲಕ ಆಂಧ್ರ ರಂಗೀನ್ ರಾಜಕೀಯ ಮತ್ತಷ್ಟು ರಂಗೇರಿದೆ.

2009ರ ಚುನಾವಣೆಯಲ್ಲಿ ಟಿಡಿಪಿ ಪರ ಪ್ರಚಾರ ಮಾಡಿದ್ದ ಬಿಟ್ಟರೆ, ನಂದಮೂರಿ ಬಾಲಕೃಷ್ಣ ಅವರು ರಾಜಕೀಯದಿಂದ ಬಹಳ ದೂರ ಉಳಿದಿದ್ದರು. ಈಗ ಅವರ ಪೊಲಿಟಿಕಲ್ ಎಂಟ್ರಿ ಆಂಧ್ರಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಎನ್ಟಿಆರ್ ಕಟ್ಟಿದ ತೆಲುಗು ದೇಶಂ ಪಾರ್ಟಿಯನ್ನು (ಟಿಡಿಪಿ) ಮತ್ತಷ್ಟು ಬಲವಡಿಸುವತ್ತ ಬಾಲಕೃಷ್ಣ ಮುಂದಾಗಿದ್ದಾರೆ.

ಪಕ್ಷಕ್ಕೆ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದಿದ್ದಾರೆ. ಆದರೆ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ಮಾತ್ರ ಸ್ಪಷ್ಟಪಡಿಸಿಲ್ಲ. ತಮಗೆ ಮುಖ್ಯಮಂತ್ರಿಯಾಗುವ ಹಂಬಲ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ದಿವಂಗತ ಎನ್ಟಿಆರ್ ಅವರ ಹಿರಿಯ ಪುತ್ರ ಎನ್ ಹರಿಕೃಷ್ಣ ಈಗಾಗಲೆ ರಾಜಕೀಯದಲ್ಲಿದ್ದು ಟಿಡಿಪಿ ಪಾಲಿಟ್‌ಬ್ಯೂರೋ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಅವರ ಪುತ ಜೂನಿಯರ್ ಎನ್ಟಿಆರ್ ಕೂಡ ಪಕ್ಷದ ಪ್ರಚಾರದಲ್ಲಿ ಗುರುತಿಸಿಕೊಂಡಿದ್ದರು. (ಏಜೆನ್ಸೀಸ್)

More from Filmibeat

English summary
Actor Balakrishna, brother-in-law of the Telugu Desam chief, Mr N. Chandrababu Naidu, announced that he will contest the 2014 Assembly elections and will play a key role in the Telugu Desam in the coming days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X