»   » ಈ ವಾರ ನಾನು ಗಾಂಧಿ, ಮಹರ್ಷಿ ಚಿತ್ರಗಳು ತೆರೆಗೆ

ಈ ವಾರ ನಾನು ಗಾಂಧಿ, ಮಹರ್ಷಿ ಚಿತ್ರಗಳು ತೆರೆಗೆ

Subscribe to Filmibeat Kannada
Movie Maharshi still
ಮಕ್ಕಳ ಚಿತ್ರ 'ನಾನು ಗಾಂಧಿ' ಮಕ್ಕಳ ದಿನಾಚರಣೆಯ ದಿನವಾದ ನವೆಂಬರ್ 14 ರಂದು ರಾಜ್ಯದ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಯವರ ಆದರ್ಶವನ್ನು ಜೀವನದಲ್ಲಿ ಯಾವ ರೀತಿ ಅಳವಡಿಸಿಕೊಳ್ಳಬೇಕು ಎನ್ನುವುದು ಚಿತ್ರ ಅಂಶವಾಗಿದೆ. ಡಾ. ಬೆಸಗರಹಳ್ಳಿ ರಾಮಣ್ಣ ಅವರ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ.

ಎನ್ ಆರ್ ನಂಜುಂಡೆಗೌಡ ಅವರು ಈ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದಾರೆ. ಈ ಚಿತ್ರಕ್ಕೆ ಈಗಾಗಲೇ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಇವರ ಪುತ್ರ ಮಾಸ್ಟರ್ ಲೋಹಿತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರದಲ್ಲಿ ರಮೇಶ್ ಭಟ್, ಪ್ರಮೀಳ ಜೋಷಾಯಿ, ಸುಂದರ್ ರಾಜ್, ಸದಾಶಿವ ಬ್ರಹ್ಮಾವರ, ಮಂಡ್ಯ ರಮೇಶ್ ಮುಂತಾದವರು ತಾರಾಗಣದಲ್ಲಿದ್ದಾರೆ. ನಾಗರಾಜ್ ಅಡ್ವಾಣಿ ಅವರ ಕ್ಯಾಮೆರಾ ಕೈಚಳಕ, ರಾಜಪ್ಪ ಧಳವಾಯಿ ಅವರ ಸಂಭಾಷಣೆ ಹಾಗೂ ರಾಜು ಉಪೇಂದ್ರ ಕುಮಾರ್ ಅವರ ಸಂಗೀತ ಈ ಚಿತ್ರದ ವಿಶೇಷತೆಯಾಗಿದೆ.

ಒರಟ ಐಲವ್ ಯೂ ಚಿತ್ರದ ನಾಯಕ ನಟ ಪ್ರಶಾಂತ್ ಮತ್ತು ಮುಂಗಾರು ಮಳೆ ಖ್ಯಾತಿಯ ಪೂಜಾ ಗಾಂಧಿ ಪ್ರಧಾನ ಭೂಮಿಕೆಯಲ್ಲಿರುವ 'ಮಹರ್ಷಿ' ಚಿತ್ರ ಸೆನ್ಸಾರ್ ಮಂಡಳಿಯ 'ಎ' ಪ್ರಮಾಣ ಪತ್ರದೊಂದಿಗೆ ಈ ಶುಕ್ರವಾರ ತೆರೆ ಕಾಣಲಿದೆ. ಡಿ ಕೆ ರಾಮಕೃಷ್ಣ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಕಾಲೇಜ್ ಆವರಣದಲ್ಲಿ ನಡೆಯುವ ಘಟನೆ ಮತ್ತು ತಾಯಿ ಸೆಂಟಿಮೆಂಟ್ ಸುತ್ತ ಚಿತ್ರಕತೆ ರೂಪಿಸಲಾಗಿದೆ. ರಮೇಶ್ ಅಲಬೈ ಅವರ ಛಾಯಾಗ್ರಹಣ, ಶ್ರೀಮುರಲಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಿಯಾಂಕ, ಮುನಿ, ವಿಶ್ವ ಮುಂತಾದವರು ತಾರಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada