ನಾಸಿರುದ್ದೀನ್ ಷಾ ಮಣಿಪಾಲ್ ಆಸ್ಪತ್ರೆಗೆ ದಾಖಲು
ಬಾಲಿವುಡ್ ಪ್ರಸಿದ್ಧ ನಟ ನಾಸಿರುದ್ದೀನ್ ಷಾ ತಲೆ ಸುತ್ತು, ಕ್ಲೇಶ, ಸುಸ್ತಿನಿಂದ ಬಳಲುತ್ತಿರುವ ಅವರು ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಮಂಗಳವಾರ ದಾಖಲಾದರು. ಕೊಡಗಿನಲ್ಲಿ ಚಿತ್ರವೊಂದರ ಚಿತ್ರೀಕರಣದ ವೇಳೆ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು.
ಮಣಿಪಾಲ್ ಆಸ್ಪತ್ರೆಯಲ್ಲಿ ಎಂಆರ್ ಐ ಸೇರಿದಂತೆ ವಿವಿಧ ಬಗೆಯ ವೈದ್ಯಕೀಯ ಪರೀಕ್ಷೆಗಳನ್ನು ನಾಸಿರುದ್ದೀನ್ ಷಾ ಅವರಿಗೆ ಮಾಡಲಾಗುತ್ತಿದೆ.ಅವರ ಆರೋಗ್ಯ ಸ್ಥಿರವಾಗಿದ್ದು ಶೀಘ್ರದಲ್ಲೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಮಣಿಪಾಲ್ ಆಸ್ಪತ್ರೆ ಸಿಇಒ ಡಾ.ಸುದರ್ಶನ್ ತಿಳಿಸಿದ್ದಾರೆ.
ತೀವ್ರ ಬಿಸಿಲಿನ ಕಾರಣ ಅವರಿಗೆ ಬಳಲಿಕೆ ಉಂಟಾಗಿದೆ ಅಷ್ಟೆ. ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಗಿದ್ದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರ ತಂಡ ತಿಳಿಸಿದೆ. ಕೊಡಗಿನಲ್ಲಿ ಚಿತ್ರೀಕರಣದ ವೇಳೆ ಅವರಿಗೆ ತಲೆ ಸುತ್ತು ಬಂದಿತ್ತು.
More from Filmibeat
ನಾಸಿರುದ್ದೀನ್ ಷಾ ಮಣಿಪಾಲ್ ಆಸ್ಪತ್ರೆ ತಲೆಸುತ್ತು ಅನಾರೋಗ್ಯ ಕೊಡಗು ಬೆಂಗಳೂರು naseeruddin shah manipal hospital uneasiness dizziness tiredness kodagu bangalore


Click it and Unblock the Notifications











