ಮಾಲಾಶ್ರೀ ಶಕ್ತಿಗೆ ಶಾಸಕ ನರೇಂದ್ರ ಬಾಬು ಯುಕ್ತಿ

By Rajendra

ಹಾಲಿ ಶಾಸಕರೊಬ್ಬರು ಶಾಸಕರಾಗಿಯೇ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಇದೇ ಮೊದಲಿರಬಹುದು. ಕನಸಿನ ರಾಣಿ ಮಾಲಾಶ್ರೀ ಮುಖ್ಯಭೂಮಿಕೆಯಲ್ಲಿರುವ ಶಕ್ತಿ ಚಿತ್ರದಲ್ಲಿ ಶಾಸಕರಾಗಿ ನೆ.ಲ.ನರೇಂದ್ರಬಾಬು ಅಭಿನಯಿಸಿದ್ದಾರೆ. ಈಗಾಗಲೆ ಅವರು ಕಿರುತೆಯಲ್ಲಿ ಗುರುತಿಸಿಕೊಂಡಿದ್ದಾರೆ.

ಆದರೆ ರಾಜಕೀಯ ವ್ಯಕ್ತಿಯಾಗಿ ಶಾಸಕರಾಗಿ ಅಭಿನಯಿಸುತ್ತಿರುವುದು ಇದೇ ಮೊದಲು. ರಾಮು ನಿರ್ಮಿಸುತ್ತಿರುವ ಶಕ್ತಿ ಚಿತ್ರದಲ್ಲಿ ನರೇಂದ್ರ ಬಾಬು ಅವರು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ತೋರಿಸಲಾಗಿದೆ. ನಿರ್ದೇಶಕ ಅನಿಲ್ ಚಿತ್ರಕ್ಕೆ ಸಂಭಾಷಣೆಯನ್ನೂ ಬರೆದಿದ್ದಾರೆ. ಅನಿಲ್ ಸಂಭಾಷಣೆ ತುಂಬಾ ಚೆನ್ನಾಗಿದೆ ಎಂದು ನರೇಂದ್ರಬಾಬು ಶ್ಲಾಘಿಸಿದ್ದಾರೆ.

ಮಾಲಾಶ್ರೀ ಈ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. 'ಮುತ್ತಿನಂಥ ಹೆಂಡತಿ' ಚಿತ್ರ ಸೇರಿದಂತೆ ಎರಡು ವರ್ಷಗಳ ಹಿಂದೆ ತೆರೆ ಕಂಡ 'ಕನ್ನಡದ ಕಿರಣ್‌ಬೇಡಿ'ವರೆಗೂ ರಾಮು ಎಂಟರ್ ಪ್ರೈಸಸ್‌ನ ಎಂಟು ಚಿತ್ರಗಳಲ್ಲಿ ಮಾಲಾಶ್ರೀ ನಟಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಸಿಡಿದೇಳುವ 'ಶಕ್ತಿ'ಯಾಗಿ ಮಾಲಾಶ್ರೀ ಅಭಿನಯಿಸುತ್ತಿದ್ದಾರೆ.

ಥ್ರಿಲ್ಲರ್‌ಮಂಜು, ರವಿವರ್ಮ, ರಾಮ್‌ಲಕ್ಷ್ಮಣ್ ಮತ್ತು ಪಳನಿರಾಜ್ ಸಾಹಸ ನಿರ್ದೇಶನ, ರಾಜೇಶ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಲಕ್ಷ್ಮಣ್ ರೆಡ್ಡಿ ಅವರ ಸಂಕಲನವಿದೆ. ಮಾಲಾಶ್ರೀ, ರವಿಶಂಕರ್, ಶಯಾಜಿರಾವ್ ಶಿಂಧೆ, ವಿನಯಾಪ್ರಸಾದ್, ಆಶಾಲತಾ, ಅವಿನಾಶ್, ಶರತ್ ಲೋಹಿತಾಶ್ವಾ, ಸಾಧುಕೋಕಿಲಾ, ಕುರಿಗಳು ಪ್ರತಾಪ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
The sitting MLA of Mahalakshmi Layout Karnataka Assembly N.L. Narendra Babu who also hails from films and television plays the role of legislator in Kannada movie Shakthi. action heroine Malashri plays lead role in the movie producing by her husband Ramu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X