»   »  ಕಾಳಿದಾಸ ಲವ್ವಲ್ ಬಿದ್ದ ಚಿತ್ರದಲ್ಲಿ ಪೂಜಾಗಾಂಧಿ

ಕಾಳಿದಾಸ ಲವ್ವಲ್ ಬಿದ್ದ ಚಿತ್ರದಲ್ಲಿ ಪೂಜಾಗಾಂಧಿ

Subscribe to Filmibeat Kannada
ಕನ್ನಡ ಚಿತ್ರನಾಯಕಿರನ್ನು ಸರಿಹೊತ್ತಿನಲ್ಲಿ ಎಬ್ಬಿಸಿ ನಿನಗೆ ಯಾವ ಪಾತ್ರ ಮಾಡಲು ಇಷ್ಟ ಎಂದು ಕೇಳಿದರೆ, ಹಿಂದೆ ಮುಂದೆ ಯೋಚಿಸದೆ ಕಲ್ಪನಾ ಮಾಡಿದ ಹುಚ್ಚಿಯ ಪಾತ್ರ ತುಂಬಾ ಇಷ್ಟ. ಅಂತಹ ಪಾತ್ರದಲ್ಲಿ ಒಮ್ಮೆಯಾದರೂ ನಟಿಸಬೇಕು ಎನ್ನುತ್ತಾರೆ. ಸರಿ ಬಿಡಿ, ಕಲ್ಪನಾ ಕನ್ನಡ ಚಲನ ಚಿತ್ರರಂಗ ಕಂಡ ಮಹಾನ್ ನಟಿ, ಆಕೆಯ ನಟನೆ, ಮ್ಯಾನರಿಸಂ ಪರದೆಯಲ್ಲಿ ನೋಡುವುದೆ ಒಂದು ಮಹದಾನಂದ. ಇದೀಗ ತಾನೆ ಸ್ಯಾಂಡಲ್ ವುಡ್ ಗೆ ಪ್ರವೇಶ ಪಡೆದ ಹೊಸ ನಟಿ ಕೂಡ ಹೇಳುವುದು ಇದನ್ನೆ. ಅದು ಸಹಜ ಕೂಡ.

ನಟಿ ಪ್ರೇಮಾ, ಸುಧಾರಾಣಿ, ರಾಧಿಕಾ, ರಕ್ಷಿತಾ, ರಮ್ಯಾ ಹೀಗೆ ಪ್ರಸಿದ್ಧಿ ಪಡೆದಿರುವ ಎಲ್ಲ ನಟಿಯರೂ ತಾವು ನೀಡಿದ ಪ್ರತಿ ಸಂದರ್ಶನದಲ್ಲೂ ಕಲ್ಪನಾ ಕುರಿತ ಮಾತು, ಆವರ ನಟನೆ, ಆಕೆಯ 'ಶರಪಂಜರ' ನೆನೆಪಿಸಿಕೊಳ್ಳದೆ ಮಾತು ಮುಗಿಸುವುದಿಲ್ಲ. ಕನ್ನಡ ಚಿತ್ರರಂಗಕ್ಕೆ ನಟ ಸಾರ್ವಭೌಮ ಡಾ.ರಾಜ್ ಕುಮಾರ್, ನಿರ್ದೇಶಕ ಪುಟ್ಟಣ್ಣ ಕಣಗಾಲ್ ಎಷ್ಟು ಪ್ರತಿಭಾವಂತರೊ ಮಹಿಳಾ ನಟಿಯರಲ್ಲಿ ಮಿನುಗುತಾರೆ ಕಲ್ಪನಾ ಅಷ್ಟೇ ಪ್ರತಿಭಾವಂತ ನಟಿ.

ವಿಷಯ ಅದಲ್ಲ ಬಿಡಿ, ಇಂದಿನ ಸುದ್ದಿಯಲ್ಲಾ ಪೂಜಾ ಗಾಂಧಿಯದು. 'ಕಾಳಿದಾಸ್ ಲವ್ವಲ್ ಬಿದ್ದ' ಚಿತ್ರದಲ್ಲಿ ಹುಚ್ಚಿಯಾಗಿ ನಟಿಸುವ ಸುಯೋಗ ಪೂಜಾ ಗಾಂಧಿಗೆ ಒದಗಿ ಬಂದಿದೆ. ಕಾಳಿದಾಸ್ ಲವ್ವಲ್ ಬಿದ್ದ ಎಂಬ ಚಿತ್ರವನ್ನು ನಿರ್ದೇಶಿಸಿ ತೆರೆಗೆ ಸಿದ್ಧಮಾಡುತ್ತಿರುವ ವೆಂಕಟೇಶ್ ಪಂಚಾಂಗಂ ಈ ಚತ್ರವನ್ನು ಕುಮಾರ್ ಎನ್ನುವವರ ಜೊತೆ ಸೇರಿ ನಿರ್ಮಿಸುತ್ತಿದ್ದಾರೆ. ನವೀನ್ ಸುವರ್ಣ ಕ್ಯಾಮರಾ ಕೆಲಸ ಮಾಡಿದ್ದಾರೆ. ಪೂಜಾ ಜೊತೆಗೆ ಅನಂತ್ ನಾಗ್, ಸುಧಾರಾಣಿ ಮುಖ್ಯ ಪಾತ್ರದಲ್ಲಿದ್ದಾರೆ.

ಹುಚ್ಚಿ ಎಂದ ಮಾತ್ರಕ್ಕೆ ವಯೊಲೆಂಟ್ ಆಗಿರುವುದಿಲ್ಲ ಎನ್ನುತ್ತಾರೆ ಪೂಜಾ. ಹುಚ್ಚಿ ಎಂದರೆ ಬಟ್ಟೆ ಹರಿದುಕೊಂಡು ಬೀದಿ ಬೀದಿ ಸುತ್ತುವುದಿಲ್ಲ. ಆಕೆ ತುಂಬಾನೇ ಮುಗ್ಧೆ, ಬಾಲ್ಯದಲ್ಲಿ ಅವಳಿಗೆ ಏನೋ ಆಗಿರುತ್ತೆ ಮಾನಸಿಕ ಒತ್ತಡದಿಂದಾಗಿ ಹುಚ್ಚ್ಚಿಯಾಗಿರುತ್ತಾಳೆ. ನೋಡೋಕೆ ಮಾಮೂಲಿಯಾಗಿಯೇ ಕಾಣುತ್ತಾಳೆ ಎಂದು ಪೂಜಾ ತಮ್ಮ ಪಾತ್ರವನ್ನು ವಿವರಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮಿನುಗು ತಾರೆಯಾಗಿ ಪೂಜಾಗಾಂಧಿ
ಪೂಜಾಗಾಂಧಿ ಮೋಹಕ ಚಿತ್ರಪಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada