»   » 'ಅಣ್ಣಾ ಬಾಂಡ್'ನಲ್ಲಿ ಕಾಣದಂತೆ ಮಾಯವಾದ ಶಿವ

'ಅಣ್ಣಾ ಬಾಂಡ್'ನಲ್ಲಿ ಕಾಣದಂತೆ ಮಾಯವಾದ ಶಿವ

Posted By:
Subscribe to Filmibeat Kannada

ಬರೋಬ್ಬರಿ ಮೂವತ್ತು ವರ್ಷಗಳ ಹಿಂದೆ ಹಾಡಿದ್ದ ಅದೇ ಹಾಡನ್ನು ಮತ್ತೆ ಹಾಡುವ ಸದಾವಕಾಶ, ಅದೃಷ್ಟ ಅದೆಷ್ಟು ಜನರಿಗೆ ಸಿಗುತ್ತೆ ಹೇಳಿ? ಆದರೆ ಪವರ್ ಸ್ಟಾರ್ ಪುನೀತ್ ನಿಜವಾದ ಅದೃಷ್ಟಶಾಲಿ. ಡಾ ರಾಜ್ ಕುಮಾರ್ ನಟನೆಯ 'ಚಲಿಸುವ ಮೋಡಗಳು' ಚಿತ್ರದಲ್ಲಿದ್ದ ಈ ಹಾಡನ್ನು ಪುನೀತ್ ಆರೇಳು ವಯಸ್ಸಿನಲ್ಲಿದ್ದಾಗ ಹಾಡಿದ್ದರು. ಈಗ ಅದೇ ಹಾಡನ್ನು ಅವರದೇ ಆದ, ಬಿಡುಗಡೆಯಾಗಲಿರುವ 'ಅಣ್ಣಾ ಬಾಂಡ್' ಚಿತ್ರಕ್ಕಾಗಿ ಹಾಡಲಿದ್ದಾರೆ.

ಪುನೀತ್ ಪ್ರಕಾರ, "ಈ ಯೋಚನೆ ಬಂದಿದ್ದು ಅಣ್ಣಾ ಬಾಂಡ್ ನಿರ್ದೇಶಕ ಸೂರಿಯವರಿಗೆ. ಈ ಮೊದಲು ಬಂದಿದ್ದ ಆ ಹಾಡನ್ನು ತುಂಬಾ ಸಿಂಪಲ್ಲಾದ ಸಂಗೀತದ ಉಪಕರಣಗಳನ್ನು ಬಳಸಿಕೊಂಡು ಸಂಯೋಜನೆ ಮಾಡಲಾಗಿತ್ತು. ಆದರೆ ಈಗ ಪುನೀತ್ ಹಾಡುವ ಅದೇ ಹಾಡು ವಿಭಿನ್ನವಾಗಿ ಮೂಡಿಬರಲಿದೆಯಂತೆ. ಅದು ಯಾವ ರೀತಿಯಲ್ಲಿ ವಿಭಿನ್ನ ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

ಪುನೀತ್ ಅವರೊಂದಿಗೆ ಪ್ರಿಯಾಮಣಿ ಹಾಗೂ ನಿಧಿ ಸುಬ್ಬಯ್ಯ ನಾಯಕಿಯರಾಗಿ ನಟಿಸಿದ್ದಾರೆ. ಬಾಲಿವುಡ್ ನ ಜಾಕಿ ಶ್ರಾಫ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ವಿ ಹರಿಕೃಷ್ಣರ ಸಂಗೀತ ಸುಧೆ ಈ ಚಿತ್ರದಲ್ಲಿದೆ. ಶೀರ್ಷಿಕೆ ಗೀತೆಯನ್ನು ನಿರ್ದೇಶಕ ಯೋಗರಾಜ್ ಭಟ್ ವಿಶೇಷವಾಗಿ ಬರೆದಿದ್ದಾರೆ ಎಂದು ಹೇಳಿದೆ ಚಿತ್ರತಂಡ. ಒಟ್ಟಿನಲ್ಲಿ ಮೂರು ದಶಕದ ಹಿಂದಿನ ಹಾಡು ಅದೇ ಗಾಯಕನ ಧ್ವನಿ ಹಾಗೂ ನಟನೆಯಲ್ಲಿ ಮತ್ತೆ ಮೂಡಿಬರುತ್ತಿದೆ. (ಒನ್ ಇಂಡಿಯಾ ಕನ್ನಡ)

English summary
Rarely an actor gets opportunity to sing a song as a child artiste and to voice the same number after close to three decades. Kanadanthe mayavadanu from Chalisuva Modagalu brought Puneet Rajkumar under limelight.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada