ಪುಟ್ಟಣ್ಣ 'ಶುಭಮಂಗಳ' ರಿಮೇಕ್; ರಮ್ಯಾ-ಕಿಟ್ಟಿ ಜೋಡಿ

ಇಲ್ಲಿ ಪ್ರಣಯರಾಜನ ಪಾತ್ರವನ್ನು ಶ್ರೀನಗರ ಕಿಟ್ಟಿ ನಿರ್ವಹಿಸುವುದು ಹೆಚ್ಚುಕಮ್ಮಿ ಖಾತ್ರಿ. ಆರತಿ ನಿರ್ವಹಿಸಿದ ಪಾತ್ರಕ್ಕಾಗಿ ರಮ್ಯಾ ಜೊತೆ ಮಾತುಕತೆ ನಡೆಯುತ್ತಿದೆ. ಉತ್ತರಕರ್ನಾಟಕ ಭಾಗದಲ್ಲಿ ಉತ್ತಮ ಯಶಸ್ಸು ಗಳಿಸಿದ ಪ್ರಜ್ವಲ್ ದೇವರಾಜ್ ಅಭಿನಯದ 'ಕೋಟೆ' ಚಿತ್ರ ನಿರ್ದೇಶಿಸಿದ್ದ ಶ್ರೀನಿವಾಸ್ ರಾಜು ಮೂಲ ಚಿತ್ರದ ದೃಶ್ಯ ಸನ್ನಿವೇಶಗಳನ್ನು ಯಥಾವತ್ತಾಗಿ ಚಿತ್ರೀಕರಿಸಲು ನಿರ್ಧರಿಸಿದ್ದಾರೆ.
ಶುಭಮಂಗಳ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನೀಡಿದ್ದರು. ವಿಜಯನಾರಸಿಂಹ, ಉದಯಶಂಕರ್, ಕಣಗಾಲ್ ಪ್ರಭಾಕರ್ ಶಾಸ್ತ್ರಿ ಮತ್ತು ಎಂಎನ್ ವ್ಯಾಸ ರಾವ್ ರ ಸಾಹಿತ್ಯದಲ್ಲಿ ಮೂಡಿದ ಬಂದ 'ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು.. ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ.. ಹೂವೊಂದು ಬಳಿಬಂದು...' ಮುಂತಾದ ಹಾಡುಗಳು ಇಂದಿಗೂ ಬಹಳ ಜನಪ್ರಿಯ. ಇಲ್ಲೂ ಮೂಲ ಹಾಡುಗಳ ಟ್ಯೂನ್ ಮತ್ತು ಸಾಹಿತ್ಯವನ್ನು ಹಾಗೆ ಬಳಸಿಕೊಳ್ಳುತ್ತಾರೋ ಇಲ್ಲವೋ ಎಂದು ನಿರ್ದೇಶಕರು ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ.
More from Filmibeat
English summary
Puttanna Kanagal's well known film 'Shubhamangala' will be reproduced by producer Dinesh Gandhi. Ramya-Srinagara Kitti will be lead pair.


Click it and Unblock the Notifications











