ಹಿಮಾಲಯಕ್ಕೆ ಪಾದ ಬೆಳಸಿದ ರಜನಿಕಾಂತ್
ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತೆರೆಕಂಡ ಬಹುಭಾಷಾ ಚಿತ್ರ 'ಎಂಧಿರನ್' ಬಾಕ್ಸಾಫೀಸ್ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ. ಚಿತ್ರ ಯಶಸ್ವಿಯಾಗುತ್ತಿದ್ದಂತೆ ಆ ಚಿತ್ರದ ನಾಯಕ ನಟ ರಜನಿಕಾಂತ್ ಹಿಮಾಲಯಕ್ಕೆ ಪಾದ ಬೆಳಸಿದ್ದಾರೆ.
ನವದೆಹಲಿವರೆಗೂ ವಿಮಾನದಲ್ಲಿ ತೆರಳಿ ಅಲ್ಲಿಂದ ರಸ್ತೆಮಾರ್ಗವಾಗಿ ಹಿಮಾಲಯದ ತಪ್ಪಲನ್ನು ತಲುಪಲಿದ್ದಾರೆ. ಒಂದು ತಿಂಗಳ ಕಾಲ ರಜನಿಕಾಂತ್ ಹಿಮಾಲಯದಲ್ಲಿ ಕಳೆಯಲಿದ್ದಾರೆ ಎನ್ನುತ್ತವೆ ಮೂಲಗಳು. ಇಷ್ಟಕ್ಕೂ ಹಿಮಾಲಯದಲ್ಲಿ ರಜನಿ ಏನು ಮಾಡುತ್ತಾರೆ?
ಅಲ್ಲಿನ ಯೋಗಿಗಳನ್ನು ಭೇಟಿ ಮಾಡುತ್ತಾರೆ. ಧ್ಯಾನದಲ್ಲಿ ಕಳೆಯುತ್ತಾರೆ ಎನ್ನುತ್ತವೆ ಮೂಲಗಳು. ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕೆ ಮತ್ತೆ ಮನೆಗೆ ವಾಪಸ್ಸಾಗಲಿದ್ದಾರೆ. ತಮ್ಮ ಪ್ರತಿ ಸಿನಿಮಾ ಬಿಡುಗಡೆಯಾದಾಗಲೂ ರಜನಿ ಹೀಗೆ ಹಿಮಾಲಯಕ್ಕೆ ಭೇಟಿ ನೀಡುವುದು ವಾಡಿಕೆ.
More from Filmibeat
ರಜನಿಕಾಂತ್ ಎಂಧಿರನ್ ಹಿಮಾಲಯ ಎ ಆರ್ ರೆಹಮಾನ್ ಐಶ್ವರ್ಯ ರೈ enthiran rajinikanth himalaya ar rahman aishwarya rai


Click it and Unblock the Notifications











