twitter
    For Quick Alerts
    ALLOW NOTIFICATIONS  
    For Daily Alerts

    ರಾಮರಾಮ! porngate ಬಗ್ಗೆ ವರ್ಮಾ ಹೇಳುವುದೇನು?

    By Srinath
    |
    <ul id="pagination-digg"><li class="previous"><a href="/news/12-ram-gopal-varma-to-take-karnataka-porngate-aid0135.html">« Previous</a>

    ram-gopal-varma-on-karnataka-blue-boys
    ಇಡೀ ನಾಡು ಕರ್ನಾಟಕ ಬ್ಲೂ ಬಾಯ್ಸ್ ಬಗ್ಗೆ ಛೀ ಥೂ ಅನ್ನುತ್ತಿದ್ದರೆ ಒಬ್ಬ ರಾಮ್ ಗೋಪಾಲ್ ವರ್ಮಾ ಮಾತ್ರ ತ್ರಿಮೂರ್ತಿಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ! 'ನಮ್ಮ ರಾಜಕಾರಣಿಗಳನ್ನು ಬರೀ ಭ್ರಷ್ಟರು ಅಂತ ಅಂದ್ಕೊಂಡಿದ್ದೆ. ಆದರೂ ಅವರೂ ಮನುಷ್ಯರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ' ಎಂದು ಸೆನ್ಸೇಶನಲ್ ಚಿತ್ರಗಳಿಗಾಗಿ ತುಡಿಯುವ ವರ್ಮಾ ನಮ್ಮ ಸಚಿವತ್ರಯರನ್ನು ಕೊಂಡಾಡಿದ್ದಾರೆ! ಇದನ್ನು ಕೇಳಿ, ಸವದಿ ಪಟಾಲಂ ಆನಂದತುಂದಿಲಿತರಾದರು ಎಂಬ ಸುದ್ದಿ ಇನ್ನೂ ಹೊರಬಿದ್ದಿಲ್ಲ.

    ಅಷ್ಟೇ ಅಲ್ಲ ಮುಂದೆ ಕೇಳಿ - 'ಭಾರತ ನಿಜಕ್ಕೂ ಬೆಳೆಯುತ್ತಿದೆ, ಪ್ರಗತಿ ಪಥದಲ್ಲಿದೆ ಎಂಬುದರ ಧ್ಯೋತಕ ಈ ಪ್ರಕರಣವಾಗಿದೆ. ಸುಮ್ಮನೆ ಅಶ್ಲೀಲ ಚಿತ್ರೋದ್ಯಮವನ್ನು ಜರಿಯುವ ಬದಲು ಅದನ್ನು ಕಾನೂನುಬದ್ಧಗೊಳಿಸುವುದು ಒಳಿತು' ಎಂದೂ ಹೇಳುತ್ತಾರೆ ಗೋಪಾಲವರ್ಮಾ, ರಾಮರಾಮ!

    'ನೋಡಿ. ಸುಮ್ನೆ ಮಕ್ಕಳನ್ನು ಅಶ್ಲೀಲತೆಯಿಂದ ರಕ್ಷಿಸಬೇಕು ಅಂತೆಲ್ಲ ಬೊಗಳೆ ಬಿಡುವುದು ಬೇಡ. ಅದೆಲ್ಲ ಸ್ಟುಪಿಡ್. ಮಕ್ಕಳು 'ಅದನ್ನು' ನೋಡಿದಾಗ ಉದ್ರೇಕಗೊಳ್ಳುವುದಿಲ್ಲ; ಅಸಲಿಗೆ ಅವರಿಗೆ 'ಅದು' ಅರ್ಥವೇ ಆಗಿರುವುದಿಲ್ಲ' ಎಂದು ವರ್ಮಾ 'ಪ್ರಬುದ್ಧರಾಗಿ' ಮಾತನಾಡಿದ್ದಾರೆ.

    'ಅದರೆ ಹಿಂಸಾಚಾರ ಮತ್ತು ದುರ್ಬಳಕೆಯಿಂದ ಮಕ್ಕಳನ್ನು ರಕ್ಷಿಸಿಡಬೇಕು. ಇದಕ್ಕೆಲ್ಲ ಮದ್ದು ಅಶ್ಲೀಲತೆಯನ್ನು ನೈತಿಕವಾಗಿ, ಕಾನೂನುಬದ್ಧಗೊಳಿಸಬೇಕು. ಆಗ ಮಾತ್ರ ಮಕ್ಕಳು ಮತ್ತು ಮಹಿಳೆಯರ ವಿರುದ್ಧದ ಕ್ರೌರ್ಯ ಮಾಯವಾಗುತ್ತದೆ' ಎಂದು ಓತಪ್ರೋತರಾಗಿ ಹೇಳಿದ್ದಾರೆ ವರ್ಮಾ ಸಾಹೇಬರು. ನೀವೇನಂತೀರಿ?

    <ul id="pagination-digg"><li class="previous"><a href="/news/12-ram-gopal-varma-to-take-karnataka-porngate-aid0135.html">« Previous</a>

    English summary
    Ram Gopal Varma wants to include Karnataka Porngate in his film that too in true spirits. What he has to say about Karnataka Blue Boys.
    Sunday, February 12, 2012, 14:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X