»   » ರಾಮ್ ಗೋಪಾಲ್ ಸಿನಿಮಾದಲ್ಲಿ ಕರ್ನಾಟಕ ಬ್ಲೂ ಫಿಲಂ

ರಾಮ್ ಗೋಪಾಲ್ ಸಿನಿಮಾದಲ್ಲಿ ಕರ್ನಾಟಕ ಬ್ಲೂ ಫಿಲಂ

Posted By:
Subscribe to Filmibeat Kannada
<ul id="pagination-digg"><li class="next"><a href="/news/12-ram-gopal-varma-on-karnataka-blue-boys-aid0135.html">Next »</a></li></ul>
12-ram-gopal-varma-to-take-karnataka-porngate
ಸಿನಿಮಾ ಕಥಾವಸ್ತುವಿಗಾಗಿ ಹಸಿಹಸಿ ಘಟನೆಗಳಿಗಾಗಿ ಹೊಂಚುಹಾಕುವ ಬಾಲಿವುಡ್ ಖ್ಯಾತ ನಿರ್ದೇಶಕ ರಾಮಗೋಪಾಲ ವರ್ಮಾಗೆ ಮೊನ್ನೆ ವಿಧಾನಸೌಧದಲ್ಲಿ ಕಂಡುಬಂದ ಬಿಜೆಪಿ ಸಚಿವತ್ರಯರ ದುಸ್ಸಾಹಸವು ವರ್ಮಾ ಅವರ ಮುಂದಿನ ಸಾಹಸಕ್ಕೆ ಪ್ರೇರಣಯಾಗಲಿದೆಯೇ? ಅಂದರೆ RGV, ಕರ್ನಾಟಕ ಬ್ಲೂ ಬಾಯ್ಸ್ ಕುರಿತು ಸಿನಿಮಾ ಮಾಡುತ್ತಾರಾ? ಎಂಬ ಕುತೂಹಲಕಾರಿ ಪ್ರಶ್ನೆಗಳು ಎದ್ದಿವೆ.

ಅದಕ್ಕೂ ಮುನ್ನ porn ಬಗ್ಗೆ ಆತನ ನಿಲುವು, ಅನಿಸಿಕೆಗಳೇನು ಎಂಬುದನ್ನು ತಿಳಿದುಕೊಳ್ಲುವ ಸಾಹಸ ಮಾಡೋಣ. ಅವರ ಮಾತಿಗಳಲ್ಲೇ ಕೇಳಿ - 'porn ಅಂದ್ರೆ ನನಗೆ ಪಂಚಪ್ರಾಣ. ವಯಸ್ಕರರೆಲ್ಲ ಅಶ್ಲೀಲ, ಲೈಂಗಿಕ ಚಿತ್ರಗಳನ್ನು ವೀಕ್ಷಿಸುತ್ತಿರುತ್ತಾರೆ ಗೊತ್ತಾ? 'ಇಲ್ಲ ನಾವು ಅಂಥಹವರಲ್ಲ' ಎನ್ನುವವರು ಶುದ್ಧ ಸುಳ್ಳು ಹೇಳುತ್ತಾರೆ ಎಂಬುದೇ ನನ್ನ ಅನಿಸಿಕೆ.

ನಿಜ ಹೇಳಿ. ಸದಾ ನಮ್ಮ ನಮ್ಮ ಉದ್ಯೋಗದಲ್ಲಿ ಕಾರ್ಯಮಗ್ನರಾಗುವ ನಮಗೆ ಬೋರ್ ಆಗುವುದಿಲ್ಲವೇ? ಮನಸ್ಸು ಬೇರೆ ಹುಲ್ಲುಗಾವಲಿನತ್ತ ಹೊರಳುವುದು ಬೇಡವೇ? ನನ್ನನ್ನೇ ತೆಗೆದುಕೊಳ್ಳಿ... ನಾನು ಚಿತ್ರೀಕರಣದಲ್ಲಿ ಬಿಸಿಯಾಗಿರುವಾಗ ನಾನು ನನ್ನ ಮೊಬೈಲಿನತ್ತ ಕಣ್ಣರಳಿಸುತ್ತೇನೆ. ಅದರಿಂದ ಉದ್ರೇಕ, ಉತ್ತೇಜನ ಪಡೆದು ಉತ್ಸಾಹಿತನಾಗುತ್ತೇನೆ' ಎಂದು ಯಾವುದೇ ಎಗ್ಗು ಸಿಗ್ಗಿಲ್ಲದೇ ಹೇಳಿದ್ದಾರೆ.

ಅಷ್ಟೇ ಅಲ್ಲ. ಅದೇ ಉಸಿರಿನಲ್ಲಿ ವರದಿಗಾರಿಕೆ ಮಾಡುತ್ತಾ ಬಳಲಿ ಬೆಂಡಾದಾಗ ಅಶ್ಲೀಲ ಚಿತ್ರಗಳಿಗಾಗಿ ತಾವು ತಡಕಾಡುವುದಿಲ್ಲವೇ ಎಂದು ಪತ್ರಕರ್ತರನ್ನೂ ಕೇಳಿದ್ದಾರೆ ಈ ಪುಣ್ಯಾತ್ಮ. ಅಂದಹಾಗೆ, ಮುಂಬೈ ಮೇಲಿನ ದಾಳಿ ಕುರಿತಾದ ತನ್ನ 26/11 ಸಿನಿಮಾದಲ್ಲಿ ಕರ್ನಾಟಕ ಬ್ಲೂ ಫಿಲಂ ಪ್ರಸಂಗನ್ನು ಬಳಸಿಕೊಳ್ಳುವುದಾಗಿ ರಾಮಗೋಪಾಲ ವರ್ಮುಡು ಘೋಷಿಸಿದ್ದಾರೆ.

<ul id="pagination-digg"><li class="next"><a href="/news/12-ram-gopal-varma-on-karnataka-blue-boys-aid0135.html">Next »</a></li></ul>

English summary
Ram Gopal Varma wants to include Karnataka Porngate in film that too in true spirits.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X