'ನಮ್ಮಣ್ಣ ಡಾನ್' ಬಿಡುಗಡೆ ದಿನಾಂಕ ಘೋಷಣೆ

ಹಾಸ್ಯ ಚಿತ್ರಗಳ ಮೂಲಕ ಸಾಕಷ್ಟು ಜನಮೆಚ್ಚುಗೆಗೆ ಪಾತ್ರವಾಗಿರುವ ರಮೇಶ್, ಈ ಚಿತ್ರದಲ್ಲಿ ಯಾವ ಮೆಸೇಜನ್ನು ಅದ್ಯಾವ ರೀತಿ ಹೇಳಲಿದ್ದಾರೆಯೋ ಎಂಬ ಕುತೂಹಲ ಎಲ್ಲರಲ್ಲಿದೆ. ಇದಕ್ಕೆ ಕಾರಣ, ಈ ಚಿತ್ರದ ಆಡಿಯೋ ಬಿಡುಗಡೆಯನ್ನು ಮೊಬೈಲ್ ನಲ್ಲಿ ಮಾಡುವ ಮೂಲಕ ವಿಭಿನ್ನತೆ ಮೆರೆದಿದ್ದರು ರಮೇಶ್.
ಇದೀಗ ಮುಂಬೈ, ಗೋವಾ ಹಾಗೂ ಪುಣೆಯಲ್ಲೂ ಪ್ರದರ್ಶನ ಏರ್ಪಡಿಸುವ ಪ್ಲಾನ್ ಮೂಲಕ ಹೊರನಾಡಿನಲ್ಲಿರುವ ಕನ್ನಡಿಗರ ಪ್ರೀತಿಗೂ ಕಾರಣರಾಗಲಿದ್ದಾರೆ ರಮೇಶ್. "ಕನ್ನಡ ಚಿತ್ರಗಳಿಗೆ ಹೊರ ರಾಜ್ಯಗಳಲ್ಲೂ ಬೇಡಿಕೆಯಿದೆ. ಆದರೆ ಅಲ್ಲಿ ವಿತರಣೆ ಮಾಡಲು ಯಾರೂ ಒಪ್ಪುತ್ತಿಲ್ಲ. ಆದರೆ ನಾವು ಪ್ಲಾನ್ ಮಾಡಿ ಹೊರ ರಾಜ್ಯಗಳಲ್ಲೂ ನಮ್ಮಣ್ಣ ಡಾನ್ ಬಿಡುಗಡೆ ಮಾಡಲಿದ್ದೇವೆ. ಅಷ್ಟೇ ಅಲ್ಲ, ಏಪ್ರಿಲ್ ಅಥವಾ ಮೇ ನಲ್ಲಿ ಅಮೆರಿಕಾದಲ್ಲೂ ಬಿಡುಗಡೆ ಮಾಡಲಿದ್ದೇವೆ" ಎಂದಿದ್ದಾರೆ ರಮೇಶ್. (ಒನ್ ಇಂಡಿಯಾ ಕನ್ನಡ)


Click it and Unblock the Notifications











