twitter
    For Quick Alerts
    ALLOW NOTIFICATIONS  
    For Daily Alerts

    'ನಮ್ಮಣ್ಣ ಡಾನ್' ಬಿಡುಗಡೆ ದಿನಾಂಕ ಘೋಷಣೆ

    |

    Ramesh Aravind
    ನಿರೀಕ್ಷೆಯ 'ನಮ್ಮಣ್ಣ ಡಾನ್' ಚಿತ್ರದ ಬಿಡುಗಡೆ ದಿನಾಂಕ ಪಕ್ಕಾ ಆಗಿದೆ. ನಟ, ನಿರ್ದೇಶಕ ರಮೇಶ್ ಅರವಿಂದ್ ಚಿತ್ರ ನಮ್ಮಣ್ಣ ಡಾನ್, ಫೆಬ್ರವರಿ 17ರಿಂದ ಬೆಂಗಳೂರಿನ ಕೆ. ಜಿ. ರಸ್ತೆಯ ಭೂಮಿಕಾ ಚಿತ್ರಮಂದಿರ ಹಾಗೂ ರಾಜ್ಯಾದ್ಯಂತ ಬಹಳಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಕೇವಲ ಕರ್ನಾಟಕ ಮಾತ್ರವಲ್ಲದೇ ರಾಜ್ಯದ ಹೊರಗಡೆ ಕೂಡ ಈ ಚಿತ್ರ ತೆರೆಕಾಣಲಿದೆ.

    ಹಾಸ್ಯ ಚಿತ್ರಗಳ ಮೂಲಕ ಸಾಕಷ್ಟು ಜನಮೆಚ್ಚುಗೆಗೆ ಪಾತ್ರವಾಗಿರುವ ರಮೇಶ್, ಈ ಚಿತ್ರದಲ್ಲಿ ಯಾವ ಮೆಸೇಜನ್ನು ಅದ್ಯಾವ ರೀತಿ ಹೇಳಲಿದ್ದಾರೆಯೋ ಎಂಬ ಕುತೂಹಲ ಎಲ್ಲರಲ್ಲಿದೆ. ಇದಕ್ಕೆ ಕಾರಣ, ಈ ಚಿತ್ರದ ಆಡಿಯೋ ಬಿಡುಗಡೆಯನ್ನು ಮೊಬೈಲ್ ನಲ್ಲಿ ಮಾಡುವ ಮೂಲಕ ವಿಭಿನ್ನತೆ ಮೆರೆದಿದ್ದರು ರಮೇಶ್.

    ಇದೀಗ ಮುಂಬೈ, ಗೋವಾ ಹಾಗೂ ಪುಣೆಯಲ್ಲೂ ಪ್ರದರ್ಶನ ಏರ್ಪಡಿಸುವ ಪ್ಲಾನ್ ಮೂಲಕ ಹೊರನಾಡಿನಲ್ಲಿರುವ ಕನ್ನಡಿಗರ ಪ್ರೀತಿಗೂ ಕಾರಣರಾಗಲಿದ್ದಾರೆ ರಮೇಶ್. "ಕನ್ನಡ ಚಿತ್ರಗಳಿಗೆ ಹೊರ ರಾಜ್ಯಗಳಲ್ಲೂ ಬೇಡಿಕೆಯಿದೆ. ಆದರೆ ಅಲ್ಲಿ ವಿತರಣೆ ಮಾಡಲು ಯಾರೂ ಒಪ್ಪುತ್ತಿಲ್ಲ. ಆದರೆ ನಾವು ಪ್ಲಾನ್ ಮಾಡಿ ಹೊರ ರಾಜ್ಯಗಳಲ್ಲೂ ನಮ್ಮಣ್ಣ ಡಾನ್ ಬಿಡುಗಡೆ ಮಾಡಲಿದ್ದೇವೆ. ಅಷ್ಟೇ ಅಲ್ಲ, ಏಪ್ರಿಲ್ ಅಥವಾ ಮೇ ನಲ್ಲಿ ಅಮೆರಿಕಾದಲ್ಲೂ ಬಿಡುಗಡೆ ಮಾಡಲಿದ್ದೇವೆ" ಎಂದಿದ್ದಾರೆ ರಮೇಶ್. (ಒನ್ ಇಂಡಿಯಾ ಕನ್ನಡ)

    Sunday, February 12, 2012, 13:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X