ತೆಲುಗಿನಲ್ಲಿ ಛಮ್ಮಕ್ ಛಲ್ಲೋ ಎಂದ ಸಂಚಿತಾ ಪಡುಕೋಣೆ
ಕನ್ನಡದ 'ರಾವಣ' ಚಿತ್ರದಲ್ಲಿ ಅಭಿನಯಿಸಿದ್ದ ಸಂಚಿತಾ ಪಡುಕೋಣೆ ಆ ಚಿತ್ರದ ಬಳಿಕ ಅಕ್ಷರಶಃ ಮಾಯವಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಸಂಚಿತಾಗೆ ಹೇಳಿಕೊಳ್ಳುವಂತಹ ಅವಕಾಶಗಳು ಬರಲೇ ಇಲ್ಲ. ಕನ್ನಡದಲ್ಲಿ ಲೂಸ್ ಮಾದನ ಚಿತ್ರವೇ ಕಟ್ಟಕಡೆಯ ಚಿತ್ರವಾಗಿತ್ತು.
ಇದೀಗ ತೆಲುಗಿನ 'ಛಮ್ಮಕ್ ಛಲ್ಲೋ' ಚಿತ್ರದಲ್ಲಿ ಅಭಿನಯಿಸುವ ಚಾನ್ಸ್ ಸಂಚಿತಾ ಸಿಕ್ಕಿದೆ. ತೆಲುಗಿನಲ್ಲಿ ಸಂಚಿತಾಗೆ ಇದು ಚೊಚ್ಚಲ ಅವಕಾಶ. ಚಿತ್ರದ ನಾಯಕ ವರುಣ್ ಸಂದೇಶ್. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ನೀಲಕಂಠ ಎಂಬುವವರು. ಈ ಹಿಂದೆ ಇವರು ಶೋ, ಮಿಸ್ಸಮ್ಮ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು.
'ಛಮ್ಮಕ್ ಛಲ್ಲೋ' ಚಿತ್ರ ಯೂತ್‌ಫುಲ್ ಕಮರ್ಶಿಯಲ್ ಅಂಶಗಳಿಂದ ಕೂಡಿರುತ್ತದೆ. ಶೀಘ್ರದಲ್ಲೇ ಚಿತ್ರ ಸೆಟ್ಟೇರಲಿದೆ ಎನ್ನುತ್ತವೆ ಟಾಲಿವುಡ್ ಮೂಲಗಳು. 'ರಾವಣ' ಚಿತ್ರದ ಸೋಲು ಸಂಚಿತಾರ ಪಾಲಿಗೆ ಈ ರೀತಿ ಆಘಾತ ನೀಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. (ಏಜೆನ್ಸೀಸ್)
More from Filmibeat
English summary
Kundapura girl Sanchita Padukone, who mesmerized the audience in the Kannada movie Ravana with Yogish is making her debut in Tollywood with the movie Chammak Challo. She is pair up with Varun Sandesh in this film. The film is said to be a youthful commercial entertainer


Click it and Unblock the Notifications











