ಬೆಳಗಾವಿಯಲ್ಲಿ ತಾರೆಗಳ ಗುಂಡಿನ ಮತ್ತೇ ಗಮ್ಮತ್ತು

ರಾತ್ರಿಯಲ್ಲಾ ಗುಂಡು ಜೊತೆಗೆ ಭರ್ಜರಿ ತುಂಡು ಎಕ್ಕ ರಾಜ ರಾಣಿ ಎಂದು ಆಡಿದ ನಲಿದ ಕಲಾವಿದರಿಗೆ ಸೂರ್ಯೋದಯವಾಗಿದ್ದೇ ಬೆಳಗ್ಗೆ 10 ಗಂಟೆಯ ಮೇಲೆ. ಜನಪ್ರಿಯ ನಟರೊಬ್ಬರು ಇಸ್ಪೀಟ್ ಆಟ ಬಿಟ್ಟು ಕಡೆಗೂ ಸಮ್ಮೇಳನಕ್ಕೆ ಬರಲೇ ಇಲ್ಲ. ಇಸ್ಪ್ಪೀಟ್ ಆಟ ನಡೆಯುವಷ್ಟು ಹೊತ್ತೂ ಅವರು ತಂಗಿದ್ದ ಹೋಟೆಲ್ ಕೊಠಡಿಯಲ್ಲಿ ಪಾನಗೋಷ್ಠಿ ನಡದೇ ಇತ್ತು ಎನ್ನಲಾಗಿದೆ.
ಏತನ್ಮಧ್ಯೆ ನಟಿ ತಾರಾ ಅವರು ಮಹಿಳಾ ವೈದ್ಯರು ಇಲ್ಲ ಎಂಬ ಕಾರಣಕ್ಕೆ ಬೆಂಗಳೂರು ಬಸ್ ಹತ್ತಿ ವಾಪಸ್ಸಾಗಿದ್ದಾರೆ. ಅವರು ಯಾವುದೋ ಇಂಜಕ್ಷನ್ ತೆಗೆದುಕೊಳ್ಳಲು ಮಹಿಳಾ ವೈದ್ಯರೇ ಬೇಕಾಗಿತ್ತ್ತಂತೆ. ಆದರೆ ಅಲ್ಲಿ ಮಹಿಳಾ ವೈದ್ಯರಿಲ್ಲದೆ ಪುರುಷ ವೈದ್ಯರಿದ್ದದ್ದೇ ತಾರಾ ಮೇಡಂ ಗರಂ ಆಗಲು ಕಾರಣ ಎನ್ನಲಾಗಿದೆ. ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದ ಶಶಿಕುಮಾರ್ ಗಡದ್ದಾಗಿ ಮಧ್ಯಾಹ್ನ 1 ಗಂಟೆ ತನಕ ನಿದ್ದೆ ಹೊಡೆದಿರುವುದು ಹಲವರ ನಿದ್ದೆ ಕೆಡಿಸಿದೆ.
More from Filmibeat
English summary
Here is the some interesting news relating to Vishwa Kannada Sammelana, Belgaum. Sources says that some sandalwood stars boycott the programme and enjoyed boozing in Belgaum. Some spent whole night by playing cards. As a result few stars got up late at 10 am. Especially actor Shashikumar woke up at 1 pm.
ಬೆಳಗಾವಿ ಕನ್ನಡ ಸಮ್ಮೇಳನ ಬೆಳಗಾವಿ ಅಂಬರೀಷ್ ಶಿವರಾಜ್ ಕುಮಾರ್ ಉಪೇಂದ್ರ ತಾರಾ belgaum kannada convention belagavi ambarish shiva rajkumar upendra shashikumar tara


Click it and Unblock the Notifications











