»   »  ಕಿಚ್ಚ ಸುದೀಪ್ ದ್ವಿಪಾತ್ರದಲ್ಲಿ ಮತ್ತೊಂದು ಚಿತ್ರ!

ಕಿಚ್ಚ ಸುದೀಪ್ ದ್ವಿಪಾತ್ರದಲ್ಲಿ ಮತ್ತೊಂದು ಚಿತ್ರ!

Posted By:
Subscribe to Filmibeat Kannada
ಕಿಚ್ಚ ಸುದೀಪ್ ರ ಹೊಸ ಚಿತ್ರವೊಂದು ಶೀಘ್ರದಲ್ಲೇ ಸೆಟ್ಟೇರಲಿದೆ. ಶಂಕರೇಗೌಡ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.ಈ ಚಿತ್ರದಲ್ಲೂ ಸುದೀಪ್ ದು ದ್ವಿಪಾತ್ರ! ಒಂದು ತೆರೆಯ ಮೇಲೆ ಇನ್ನೊಂದು ತೆರೆಯ ಹಿಂದೆ. ಅಂದರೆ ಸುದೀಪ್ ನಾಯಕ ನಟನಾಗಿ ಅವರೇ ನಿರ್ದೇಶಿಸುತ್ತಿರುವ ಚಿತ್ರ!

ಬಹುಶಃ ಚಿತ್ರದ ಮುಹೂರ್ತ ಮಾರ್ಚ್ 19 ಅಥವಾ 20ರಂದು ನೆರವೇರಬಹುದು. ಶ್ರೀಮುರಳಿ ಮತ್ತು ಪ್ರಿಯಾಂಕ ನಟಿಸಿದ್ದ ಶಂಕರೇಗೌಡರ 'ಯಜ್ಞ' ಚಿತ್ರವನ್ನು ರಮಣಶ್ರೀ ಅಂಧ ಮಕ್ಕಳ ಶಾಲೆಯಲ್ಲಿ ಆರಂಭಿಸಲಾಗಿತ್ತು. ಸುದೀಪ್ ಚಿತ್ರವನ್ನೂ ಅದೇ ಶಾಲೆಯಲ್ಲಿ ಆರಂಭಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.ಆರ್ ಶೇಖರ್ ನಿರ್ದೇಶಿಸಿರುವ 'ಯಜ್ಞ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ರಾಮ್ ಗೋಪಾಲ್ ವರ್ಮಾ ಹಿಂದಿಯಲ್ಲಿ ನಿರ್ದೇಶಿಸುತ್ತಿರುವ ಅಮಿತಾಬ್ ಬಚ್ಚನ್ ಮುಖ್ಯಭೂಮಿಕೆಯಲ್ಲಿರುವ ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದು, ಅದರ ಚಿತ್ರೀಕರಣ ಮುಗಿದಿದೆ. ಸುದೀಪ್ ದ್ವಿಪಾತ್ರದಲ್ಲಿ ನಟಿಸಿರುವ 'ಈ ಶತಮಾನದ ವೀರಮದಕರಿ' ಚಿತ್ರ ಸಹ ಬಿಡುಗಡೆಗೆ ಸಿದ್ಧವಾಗಿದೆ. ಮದಕರಿ ಚಿತ್ರ ಬಿಡುಗಡೆಯಾದ ನಂತರ ಸುದೀಪ್ ನಿರ್ದೇಶನದಲ್ಲಿ ಶಂಕರೇಗೌಡರ ಚಿತ್ರ ಸೆಟ್ಟೇರಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ವರ್ಮಾರ ಫೂಂಕ್ ಭಾಗ 2ರಲ್ಲಿ ಸುದೀಪ್
ಬಳ್ಳಾರಿ ರೆಡ್ಡಿಗಳ ವಿರುದ್ಧ ನಟ ಸುದೀಪ್ ಸ್ಪರ್ಧೆ!?
ವೀರ ಮದಕರಿ ಶೀರ್ಷಿಕೆ ವಿವಾದಕ್ಕೆ ಮತ್ತೆ ಜೀವ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada