»   » ಮಲ್ಲು ಆದ ಮಂಡ್ಯದ ಸೊಸೆ ಸುಮಲತಾ

ಮಲ್ಲು ಆದ ಮಂಡ್ಯದ ಸೊಸೆ ಸುಮಲತಾ

Subscribe to Filmibeat Kannada

ಸುಮಲತಾ ಗೊತ್ತಲ್ವಾ. 80 ಮತ್ತು 90ರ ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತುಂಬಾ ಬೇಡಿಕೆ ಹೊಂದಿದ್ದ ನಟಿಮಣಿ. ಇನ್ನೂ ಬೇಕು ಇನ್ನೂ ಬೇಕು ಎನ್ನುತ್ತಿರುವಾಗಲೇ ನಿವೃತ್ತಿ ಪಡೆದ ಜಾಣೆಯರಲ್ಲಿ ಅವರೂ ಒಬ್ಬರು ಎನ್ನುವುದು ನಮ್ಮ ನಿಸ್ಸಂದೇಹ ಭಾವನೆ. ನೀವು ಏನೇ ಹೇಳಿ, ರಿಟೈರ್ ಆದರೆ ಗವಾಸ್ಕರ್ ತರಹ ಆಗಿಬಿಡಬೇಕು. ಎಳಕೊಂಡು ಹೋಗಬಾರದು.

ಉತ್ತಮ ಬೇಡಿಕೆ ಇರುವಾಗಲೇ ಚಿತ್ರರಂಗ ಬಿಟ್ಟು ನಮ್ಮ ಮಂಡ್ಯದ ಗಂಡು ಅಂಬರೀಶ್ ಅವರನ್ನ 1991 ರಲ್ಲಿ ಮದುವೆಯಾಗಿ ಜೆಪಿ ನಗರದ ಗೃಹಸ್ಥಾಶ್ರಮ ಸೇರಿಕೊಂಡರು ಸುಮ. ತಮ್ಮ 15ನೆ ವಯಸ್ಸಿನಲ್ಲಿ "ಮಿಸ್ ಆಂಧ್ರ ಪ್ರದೇಶ್" ಪ್ರಶಸ್ತಿಯನ್ನೂ ಗಳಿಸಿಕೊಂಡರು. ಆರು ಬೇರೆ ಬೇರೆ ಭಾಷೆಗಳಲ್ಲಿ ನಟಿಸಬಲ್ಲ ಈಕೆ ಆ ಸಮಯದಲ್ಲಿ ಇಡೀ ದಕ್ಷಿಣ ಭಾರತದ ನಾಯಕಿಯರ ಸ್ಥಾನದಲ್ಲಿ ಮೊದಲನೆ ಸೀಟ್ ಗಳಿಸಿದ್ದರು. ಅದೆಲ್ಲ ಹಳೆ ಕತೆ. ಹಾಗಾದರೆ ಹೊಸತೇನು?

ಸುಮಲತಾ "ಕ್ಯಾಲೆಂಡರ್" ಅನ್ನುವ ಮಲಯಾಳಂ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರಂತೆ. ಈ ಚಿತ್ರಕ್ಕೆ ಪೃಥ್ವಿರಾಜ್ ನಾಯಕ ಮತ್ತು ನವ್ಯ ನಾಯರ್ ನಾಯಕಿ. ಚಿತ್ರದಲ್ಲಿ ತಂಕೊಮ್ ಜಾರ್ಜ್ ಎನ್ನುವ ಹೆಸರಿನ ವಿಧವೆಯ ಪಾತ್ರದಲ್ಲಿ ಸುಮಲತಾ ನಟಿಸಲಿದ್ದಾರೆ ಎನ್ನುವುದು ದಟ್ಸ್ ಕನ್ನಡಕ್ಕೆ ಬಂದ ಸದ್ಯದ ಮಾಹಿತಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada