ಒದ್ದೆ ಮುದ್ದೆ ಪಾತ್ರಗಳಲ್ಲಿ ಪಡ್ಡೆಗಳಿಗೆ ಕಚಗುಳಿಯಿಟ್ಟ ನಟಿ
By Srinath
Next »
« Previous
wet-dressed-silk-smitha-attracts-youth
ಆದರೆ, ಆಗಿನ ಚಿತ್ರಗಳಲ್ಲಿ ಸೆಕ್ಸ್ ಬೊಂಬೆಯಾಗಿ ಹೆಚ್ಚಾಗಿ ಕಾಣಿಸಿಕೊಂಡಿದ್ದರಿಂದ ಅವವೇ ಪಾತ್ರಗಳು ಆಕೆಯ ಸುತ್ತ ಗಿರಕಿ ಹೊಡೆದವು. ವೈವಿಧ್ಯತೆ ಕಾಣಲೇ ಇಲ್ಲ. ಹಾಗೆಂದು ಸಿಲ್ಕ್ ಸ್ಮಿತಾಗೆ ಅಭಿನಯ ಗೊತ್ತಿರಲಿಲ್ಲ ಎಂದಲ್ಲ. ಆದರೆ ಚಿತ್ರರಂಗ ಆಕೆಯನ್ನು ಸೆಕ್ಸ್ ಬೊಂಬೆಯಾಗಿ ಕಾಣಿಸಬೇಕು ಎಂಬ ಹಪಾಹಪಿಯಲ್ಲಿತ್ತು.
ಒದ್ದೆ ಮುದ್ದೆಯಾಗಿ ಪಡ್ಡೆಗಳು, ಮುದಕರು ಎನ್ನದೆ ಎಲ್ಲ ವಯೋಮಾನದವರನ್ನು ಬೆಚ್ಚಗೆ ಮಾಡುತ್ತಿದ್ದ ಸ್ಮಿತಾ ಎದುರು ಝಣ ಝಣ ಕಾಂಚಾಂಣ ಬೆಟ್ಟದಷ್ಟು ಗುಡ್ಡೆ ಬೀಳುತ್ತಿತ್ತು. ಬಿಕಿನಿ ಧರಿಸಿ ದುಷ್ಟ ಜನರನ್ನು ಸದೆಬಡಿಯುತ್ತಿದ್ದ ಸಿಲ್ಕ್ ಅಂದರೆ ಬ್ಯಾಡ್ ಗಯ್ ಗಳಿಗೂ ಇಷ್ಟ ಇಷ್ಟ.
ಸೆಕ್ಸ್ ಅಪೀಲ್ ಜತೆಗೆ ನಟನೆಯೂ ಆಕೆಯ ಕೈಹಿಡಿದಿತ್ತು. ಚಿತ್ರರಂಗದ ಮೇರುವ್ಯಕ್ತಿ ಭಾರತಿ ರಾಜಾರ 'ಅಲೈಂಗಳ್ ಒಯಿವಾತ್ತಿಲೈ' ಇದಕ್ಕೆ ಯಕ್ಕ ಉದಾಹರಣೆ. ತಮಿಳು, ಮಲಯಾಳಂ, ತೆಲುಗು, ಕನ್ನಡ ಮತ್ತು ಹಿಂದಿ ಹೀಗೆ ಒಟ್ಟು 450ಕ್ಕೂ ಹೆಚ್ಚು ಚಿತ್ರಗಳಲ್ಲಿ ಆಕೆ ಅಭಿನಯಿಸಿದ್ದರು.
ಸಿಲ್ಕ್ ಸ್ಮಿತಾ ಬಗ್ಗೆ ಬರೆಯುವಾಗ ಬಾಲು ಮಹೇಂದ್ರ ಹೆಸರು ಪ್ರಸ್ತಾಪವಾಗಲೇಬೇಕು. 1983ರ ದಿನಗಳವು. 'ಮೂನ್ರಾಂ ಪಿರೈ' ಮೂಲಕ ನಿರ್ದೇಶಕ ಬಾಲು ಸ್ಮಿತಾರಲ್ಲಿ ಅಡಕವಾಗಿದ್ದ ನಟಿಗೆ ಮೂರ್ತಸ್ವರೂಪ ನೀಡಿದರು. ಮುಂದೆ ಹಿಂದಿಯಲ್ಲಿ 'ಸದ್ಮಾ'ದಲ್ಲಿಯೂ ಈ ಜೋಡಿ ಮಿಂಚಿತು.
ಆದರೆ, ಅಭಿಮಾನಿ ದೇವರುಗಳು ಸ್ಮಿತಾರನ್ನು ಸೆಕ್ಸಿ ದೇವತೆಯನ್ನಾಗಿಯೇ ನೋಡಬಯಸಿದರು. ಸ್ಮಿತಾ, ತಡಮಾಡದೆ ಮತ್ತೆ ದಢೂತಿ ಸೊಂಟದ ಸುರುಳಿಯಾಟಕ್ಕೆ ಅಂಟಿಕೊಂಡರು.
Next »
« Previous
More from Filmibeat
English summary
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X