ಚಿತ್ರರಂಗಕ್ಕೆ ಯಶ್ ಸಿಕ್ಕು 12 ವರ್ಷ: ಅಭಿಮಾನಿಗಳಿಂದ ಸಂಭ್ರಮಾಚರಣೆಗೆ ಸಿದ್ಧತೆ

ಯಶ್ ಎಂಬುದು ಈಗ ರಾಜ್ಯದಲ್ಲಿ ಮಾತ್ರವಲ್ಲ, ದೇಶದಾದ್ಯಂತ ಸಿನಿಪ್ರೇಮಿಗಳಿಗೆ ಪರಿಚಿತ ಹೆಸರು. ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟರಲ್ಲೊಬ್ಬರಾದ ಯಶ್ ಸಿನಿಮಾ ನಾಯಕನಾಗಿ 12 ವರ್ಷವಾಗಲು ಎರಡು ದಿನ ಬಾಕಿ ಇದೆ!

Recommended Video

Kannad Gothilla :ರಚಿತಾ ರಾಮ್ ಚಾನ್ಸ್ ಮಿಸ್ ಮಾಡ್ಕೊಂಡ್ರು ಹರಿಪ್ರಿಯಾ ಕ್ಯಾಚ್ ಹಾಕೊಂಡ್ರು |Mayuraa Raghavendra

ಹೌದು, ಯಶ್ ಎಂಬ ಪ್ಯಾನ್ ಇಂಡಿಯಾ ಹೀರೋ, ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಬಿಡುಗಡೆ ಆಗಿ ಜುಲೈ 18 ಕ್ಕೆ ಹನ್ನೆರಡು ವರ್ಷವಾಗುತ್ತದೆ.

ಹೌದು, ಯಶ್ ನಾಯಕನಾಗಿ ನಟಿಸಿದ ಮೊತ್ತ ಮೊದಲ ಸಿನಿಮಾ 'ಮೊಗ್ಗಿನ ಮನಸ್ಸು' ಸಿನಿಮಾ ಬಿಡುಗಡೆ ಆಗಿದ್ದು 2008 ಜುಲೈ 18 ಕ್ಕೆ.

ಯಶ್ ನಾಯಕ ನಟರಾಗಿ 12 ವರ್ಷ

ಯಶ್ ನಾಯಕ ನಟರಾಗಿ 12 ವರ್ಷ

ಯಶ್ ಅವರು ಸಿನಿಮಾ ರಂಗಕ್ಕೆ ನಾಯಕರಾಗಿ ಪರಿಚಿತವಾಗಿ 12 ವರ್ಷಗಳಾಗುತ್ತಿರುವ ಸವಿ ನೆನಪಿಗಾಗಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದು, ಅದಕ್ಕೆಂದೇ ಕಾಮನ್ ಡಿಪಿ ಯನ್ನು ಬಿಡುಗಡೆ ಮಾಡಲಾಗಿದೆ.

'12 ಪರಿಶ್ರಮದಾಯಕ ವರ್ಷಗಳು'

'12 ಪರಿಶ್ರಮದಾಯಕ ವರ್ಷಗಳು'

ಯಶ್ ಅವರ ಸೂಪರ್ ಹಿಟ್ ಸಿನಿಮಾಗಳ ಸ್ಟಿಲ್‌ ಚಿತ್ರಗಳನ್ನು ಸೇರಿಸಿ ಕಾಮನ್ ಡಿಪಿ ಮಾಡಿದ್ದು, '12 ಪರಿಶ್ರಮಪೂರ್ವಕ ವರ್ಷಗಳು' ಎಂದು ಬರೆದಿದ್ದಾರೆ. ಕೊನೆಗೆ 'ಯಶ್ ಬಾಸ್' ಎಂದು ಎದ್ದು ಕಾಣುವಂತೆ ಕಾಮನ್ ಡಿಪಿಯನ್ನು ವಿನ್ಯಾಸ ಮಾಡಲಾಗಿದೆ.

ಯಶ್ ಮೊದಲ ಸಿನಿಮಾ 'ಜಂಭದ ಹುಡುಗಿ'

ಯಶ್ ಮೊದಲ ಸಿನಿಮಾ 'ಜಂಭದ ಹುಡುಗಿ'

ಯಶ್ ಅವರು ಮೊದಲು ನಟಿಸಿದ ಚಲನಚಿತ್ರ 'ಜಂಭದ ಹುಡುಗಿ' ಆ ಸಿನಿಮಾದಲ್ಲಿ ನಾಯಕಿ ಪ್ರಿಯಾ ಹಾಸನ್. ಅದೇ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಯಶ್ ಅಭಿನಯಿಸಿದ್ದರು. ಆ ಸಿನಿಮಾ 2007ರ ಜುಲೈ 15 ರಂದೇ ಬಿಡುಗಡೆ ಆಗಿತ್ತು. ಆದರೆ ನಾಯಕರಾಗಿ ಅಭಿನಯಿಸಿದ್ದು ಮೊಗ್ಗಿನ ಮನಸ್ಸು ಸಿನಿಮಾದಲ್ಲಿಯೇ.

ನಂದಗೋಕುಲ ಧಾರಾವಾಹಿಯಲ್ಲಿ ನಟಿಸಿದ್ದ ಯಶ್

ನಂದಗೋಕುಲ ಧಾರಾವಾಹಿಯಲ್ಲಿ ನಟಿಸಿದ್ದ ಯಶ್

ಸಿನಿಮಾದಲ್ಲಿ ನಟಿಸುವುದಕ್ಕೆ ಮುನ್ನಾ ಜನಪ್ರಿಯ ಧಾರಾವಾಹಿ 'ನಂದಗೋಕುಲ' ಧಾರಾವಾಹಿಯಲ್ಲಿ ನಟಿಸಿದ್ದರು ಯಶ್, ಆ ಧಾರವಾಹಿಯಲ್ಲಿ ರಾಧಿಕಾ ಸಹ ಇದ್ದರು. ನಂತರ ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಾಯಕ-ನಾಯಕಿಯಾಗಿ ಸಿನಿಮಾರಂಗಕ್ಕೆ ಪರಿಚಿತರಾದರು.

More from Filmibeat

English summary
Yash's first movie as hero released 12 years back on July 18. Fans celebrating 12 years for Yash in the industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X