For Quick Alerts
  ALLOW NOTIFICATIONS  
  For Daily Alerts

  ಅಪರೂಪದ ಕ್ಯಾಮೆರಾದಲ್ಲಿ ತಾಜ್‌ಮಹಲ್ ಸೆರೆ

  By Staff
  |

  ಈ ಕ್ಯಾಮೆರಾ ತೀರಾ ಅಪರೂಪವಲ್ಲದಿದ್ದರೂ ಈ ಬಾರಿ ಅದು ಬಳಕೆಯಾದ ರೀತಿ ಮಾತ್ರ ತೀರಾ ಅಪರೂಪ. ಅಂಥಾ ಅಪರೂಪದ ಘಟನೆಗೆ ಕನ್ನಡ ಚಿತ್ರ 'ತಾಜ್‌ಮಹಲ್' ಸಾಕ್ಷಿಯಾಗಿದೆ.

  ಅಂಥ ಅಪರೂಪದ ಕ್ಯಾಮೆರಾದ ಹೆಸರು ಎಆರ್ಆರ್ಐ 435. ಸ್ಯಾಂಡಲ್‌ವುಡ್‌ನಲ್ಲಿ ಈ ಕ್ಯಾಮೆರಾ ಅನೇಕ ವರ್ಷಗಳಿಂದ ಬಳಕೆಯಾಗುತ್ತಿದ್ದರೂ ಕೇವಲ ಹಾಡಿನ ದೃಶ್ಯ ಸೆರೆಹಿಡಿಯಲು ಮಾತ್ರ ಬಳಸಲಾಗುತ್ತಿತ್ತು. ಈಗ ಇಡೀ ಚಿತ್ರದ ಚಿತ್ರೀಕರಣಕವನ್ನು 435 ಕ್ಯಾಮೆರಾದಲ್ಲಿ ಮಾಡಿದ ಪ್ರಥಮ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೆ 'ತಾಜ್‌ಮಹಲ್' ಪಾತ್ರವಾಗಿದೆ.

  ಹೆಗ್ಗಳಿಕೆಯೇನೆಂದರೆ ಈ ಕ್ಯಾಮೆರಾದ ಒಂದು ದಿನದ ಬಾಡಿಗೆಯೇ 11 ಸಾವಿರ ರುಪಾಯಿ. ಇತರ ಕ್ಯಾಮೆರಾಗಳಾದರೆ ಐದಾರು ಸಾವಿರಕ್ಕೆ ಬಾಡಿಗೆಗೆ ಸಿಗುತ್ತವೆ. ಆ ಕಾರಣದಿಂದಲೇ ಕ್ಯಾಮೆರಾ 435ವನ್ನು ಹಾಡಿನ ಚಿತ್ರೀಕರಣಕ್ಕಾಗಿ ಮಾತ್ರ ಬಳಸಲಾಗುತ್ತಿತ್ತು. ಈಗ ಇಡೀ ಚಿತ್ರವನ್ನು ಚಿತ್ರೀಕರಿಸಿ ನಿರ್ದೇಶಕ ಚಂದ್ರು ಮತ್ತು ಸಿನಿಛಾಯಾಗ್ರಾಹಕ ಚಂದ್ರಶೇಖರ್ ಹೆಮ್ಮೆಯಿಂದ ಬೀಗುತ್ತಿದ್ದಾರೆ.

  ಅವಶ್ಯಕತೆಯಿಲ್ಲದಿದ್ದರೂ ಹಾಡಿನ ಚಿತ್ರೀಕರಣ ವಿದೇಶದಲ್ಲಿಯೇ ನಡೆಯಬೇಕೆಂಬ ನಿಯಮ ಪಾಲಿಸಿಕೊಂಡು ಬರುತ್ತಿರುವ ಚಿತ್ರನಿರ್ಮಾಪಕರಿಗೆ ತಾಜ್‌ಮಹಲ್ ಹಣವನ್ನು ಉಳಿಸುವ ದಾರಿಯೊಂದನ್ನು ತೋರಿಸಿಕೊಟ್ಟಿದೆ. ಬೆಂಗಳೂರಿನಲ್ಲಿದ್ದೇ ಅಮೆರಿಕಾವನ್ನು ಚಿತ್ರೀಕರಿಸಿರುವುದು ಈ ಚಿತ್ರದ ಮತ್ತೊಂದು ವಿಶೇಷ. ವಿಶಿಷ್ಟ ತಂತ್ರಜ್ಞಾನದಿಂದ ಅಮೆರಿಕದ ಸ್ಥಳಗಳನ್ನು ಇದರಲ್ಲಿ ಅಳವಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಚಂದ್ರು ಮತ್ತು ಚಂದ್ರಶೇಖರ್‌ಗೊಂದು ಶಭಾಸ್‌ಗಿರಿ ಕೊಡಲೇಬೇಕು. ಏಕೆಂದರೆ, ಅಮೆರಿಕಕ್ಕೇ ಹೋಗಿ ಚಿತ್ರೀಕರಣ ನಡೆಸದಿದ್ದರಿಂದ ನಿರ್ಮಾಪಕರಿಗೆ ಅನಾಮತ್ 17 ಲಕ್ಷ ಜೋಬಿನಲ್ಲಿಯೇ ಉಳಿದಿವೆ.

  ಪ್ರಥಮಬಾರಿಗೆ ನಿರ್ದೇಶನದ ಹೊಣೆ ಹೊತ್ತಿರುವ ಚಂದ್ರು ನಟರ ಮತ್ತು ತಂತ್ರಜ್ಞರ ಸಹಕಾರದಿಂದ ಇದೆಲ್ಲಾ ಸಾಧ್ಯವಾಯಿತು ಎಂದು ಹರ್ಷಚಿತ್ತರಾಗಿದ್ದಾರೆ. ಅದಲ್ಲದೆ, ಅವರ ನಿರ್ದೇಶನ ಸಾಮರ್ಥ್ಯವನ್ನು ಹಿರಿಯ ನಟ ಅನಂತ್ ನಾಗ್ ಇಡೀ ಚಿತ್ರತಂಡದ ಎದಿರು ಹಾಡಿ ಹೊಗಳಿರುವುದು ಅವರ ಸಂತೋಷವನ್ನು ನೂರ್ಮಡಿಗೊಳಿಸಿದೆ. ಮುಖ್ಯ ಭೂಮಿಕೆಯಲ್ಲಿರುವ ನಟಿ ಪೂಜಾ ಗಾಂಧಿ ಕೂಡ ತಮ್ಮ ಪಾತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಅಜಯ್ ಸಿಂಗ್ ನಟಿಸುತ್ತಿದ್ದಾರೆ.

  ಕೆಲ ಹಾಡಿನ ಚಿತ್ರೀಕರಣ ಮಾತ್ರ ಬಾಕಿಯುಳಿದಿದ್ದು ಯಾಣ, ಕುಮಟಾ, ಅಂಕೋಲಾ ಮುಂತಾದೆಡೆಯಲ್ಲಿ ಸ್ಥಳಗಳಲ್ಲಿ ಮುಂದುವರಿಸುವ ಯೋಜನೆ ಚಂದ್ರು ಹೊಂದಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X