»   » ‘ಬಿಸಿಬಿಸಿ’ ಪಾಸು, ಪ್ರಗತಿಯಲ್ಲಿ ‘ಲವ್‌’!

‘ಬಿಸಿಬಿಸಿ’ ಪಾಸು, ಪ್ರಗತಿಯಲ್ಲಿ ‘ಲವ್‌’!

Posted By: Staff
Subscribe to Filmibeat Kannada

ರಮೇಶ್‌, ಅನು ಪ್ರಭಾಕರ್‌ ಹಾಗೂ ಮಾಧುರಿ ಭಚ್ಚಾಟಾರ್ಯ ಅಭಿನಯಿಸಿರುವ 'ಬಿಸಿ ಬಿಸಿ' ಚಿತ್ರ ಸೆನ್ಸಾರ್‌ ಪರೀಕ್ಷೆಯಲ್ಲಿ ಪಾಸಾಗಿದೆ. ಚಿತ್ರಕ್ಕೆ 'ಯು' ಪ್ರಮಾಣಪತ್ರ ನೀಡಿರುವ ಸೆನ್ಸಾರ್‌ ಮಂಡಳಿ- ಸದಭಿರುಚಿಯ ಹಾಗೂ ಕುಟುಂಬ ಸಮೇತ ನೋಡಬಹುದಾದ ಚಿತ್ರ ಎಂದು 'ಬಿಸಿ ಬಿಸಿ'ಯನ್ನು ಬಣ್ಣಿಸಿದೆ.

ಜನವರಿ ತಿಂಗಳಲ್ಲೇ ತೆರೆ ಕಾಣಲು ಸಿದ್ಧತೆ ನಡೆಸಿರುವ 'ಬಿಸಿ ಬಿಸಿ' ಬಗ್ಗೆ ನಾಯಕ ನಟ ರಮೇಶ್‌ ಅಪಾರ ವಿಶ್ವಾಸ ಹೊಂದಿದ್ದು , ಈ ಚಿತ್ರದ ಮೂಲಕ ತಮ್ಮ ವೃತ್ತಿ ಜೀವನಕ್ಕೆ ತಿರುವು ದೊರಕಬಹುದೆಂದು ನಿರೀಕ್ಷಿಸುತ್ತಿದ್ದಾರೆ. ತೆರೆ ಕಾಣುವ ಮುನ್ನವೇ, 'ಬಿಸಿ ಬಿಸಿ' ರಿಮೇಕ್‌ಗೆ ತೆಲುಗು ಮಂದಿ ಓಡಾಡುತ್ತಿರುವುದು ರಮೇಶ್‌ ನಿರೀಕ್ಷೆಗಳನ್ನು ಹೆಚ್ಚಿಸಿದೆ.

'ಲವ್‌' ಪ್ರಗತಿಯಲ್ಲಿ !

ನಿರ್ದೇಶಕ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ಅವರ ಪುತ್ರ ಆದಿತ್ಯ ನಾಯಕನಟನಾಗಿ ಅಭಿನಯಿಸುತ್ತಿರುವ ಚೊಚ್ಚಿಲ ಚಿತ್ರ 'ಲವ್‌' ಚಿತ್ರೀಕರಣ ಹೆಚ್ಚೂ ಕಡಿಮೆ ಮುಕ್ತಾಯ ಹಂತ ತಲುಪಿದೆ.

ಮಲಯಾಳಂನ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಹಾಗೂ ಬಾಲಿವುಡ್‌ನ ಖ್ಯಾತ ಖಳನಟ ಅಮರೀಶ್‌ ಪುರಿ ನಟಿಸಿರುವ 'ಲವ್‌' ಚಿತ್ರ ಗಾಂಧಿನಗರದಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಅನು ಮಲ್ಲಿಕ್‌ 'ಲವ್‌' ಗೆ ಸಂಗೀತ ನೀಡಿದ್ದಾರೆ. ರಾಜೇಂದ್ರಸಿಂಗ್‌ಬಾಬು ತಮ್ಮ ಪುತ್ರನ ಚೊಚ್ಚಿಲ ಚಿತ್ರದ ಗೆಲುವಿಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ನಡೆಸಿದ್ದಾರೆ. ಈ ಚಿತ್ರದ ನಾಯಕ ನಟಿ ರಕ್ಷಿತಾ.

'ಲವ್‌' ಚಿತ್ರದ ಎರಡು ಗೀತೆಗಳ ದೃಶ್ಯೀಕರಣ ಬಾಕಿ ಉಳಿದಿದ್ದು , ಈ ಗೀತೆಗಳ ಚಿತ್ರೀಕರಣ ಸದ್ಯದಲ್ಲಿಯೇ ನಡೆಯಲಿದೆ ಎಂದು ನಿರ್ಮಾಪಕಿ ಆರ್‌.ಅಮೃತಾಸಿಂಗ್‌ ತಿಳಿಸಿದ್ದಾರೆ.

English summary
Bisi Bisi Rameshs new kannada film gets U certificate
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada