»   » ಮೊಗ್ಯಾಂಬೊ’ ಅಮರೀಶ್‌ಪುರಿ ಇನ್ನಿಲ್ಲ

ಮೊಗ್ಯಾಂಬೊ’ ಅಮರೀಶ್‌ಪುರಿ ಇನ್ನಿಲ್ಲ

Subscribe to Filmibeat Kannada

ನಟ ಅಮರೀಶ್‌ ಪುರಿ ಜನವರಿ 12ರ ಬುಧವಾರ ಮುಂಬಯಿಯ ಹಿಂದೂಜ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು .

ಅಮರೀಶ್‌ ಪುರಿ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಅವರು ಕೋಮಾಕ್ಕೆ ತೆರಳಿದ್ದರು. ಮಲೇರಿಯಾ ಕೂಡ ಅವರನ್ನು ಕಾಡುತ್ತಿತ್ತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕಳೆದ ವಾರವಷ್ಟೇ ಅಮರೀಶ್‌ ಪುರಿ ಶಸ್ತ್ರಚಿಕಿತ್ಸೆಯಾಂದಕ್ಕೆ ಒಳಗಾಗಿದ್ದರು. ಪತ್ನಿ, ಓರ್ವ ಪುತ್ರಿ ಹಾಗೂ ಪುತ್ರನನ್ನು ಅವರು ಅಗಲಿದ್ದಾರೆ.

ಅಮರೀಶ್‌ ಪುರಿ ಜನಿಸಿದ್ದು 1932ರ ಜೂನ್‌ 23ರಂದು. 1971ರಲ್ಲಿ ‘ರೇಷ್ಮಾ ಔರ್‌ ಶೇರಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ರಂಗಭೂಮಿಯಲ್ಲೂ ಸಕ್ರಿಯರಾಗಿದ್ದ ಅಮರೀಶ್‌ ಪುರಿ, ಅನೇಕ ಜಾಹಿರಾತುಗಳಿಗೆ ತಮ್ಮ ಕಂಚಿನ ಕಂಠದಾನ ಮಾಡಿದ್ದರು.

ಶ್ಯಾಮ್‌ ಬೆನಗಲ್‌ರ ‘ನಿಶಾಂತ್‌’ , ‘ಮಂಥನ್‌’ ಹಾಗೂ ‘ಭೂಮಿಕಾ’ ಚಿತ್ರಗಳು ಅಮರೀಶ್‌ ಪುರಿ ಅವರೊಳಗಿನ ಕಲಾವಿದನನ್ನು ಬೆಳಕಿಗೆ ತಂದವು. 1987ರಲ್ಲಿ ತೆರೆಕಂಡ ‘ಮಿಸ್ಟರ್‌ ಇಂಡಿಯಾ’ದಲ್ಲಿನ ಮೊಗ್ಯಾಂಬೊ ಪಾತ್ರ ಅವರನ್ನು ಜನಪ್ರಿಯತೆಗೆ ತುತ್ತತುದಿ ತಲುಪಿಸಿತು. ಅಕ್ಷಯ್‌ಕುಮಾರ್‌, ಪ್ರಿಯಾಂಕ ಚೋಪ್ರಾ, ಕರೀನಾ ಅಭಿನಯದ ‘ಮುಯ್‌ಸೆ ಶಾದಿ ಕರೋಗೆ’ ಅಮರೀಶ್‌ಪುರಿ ಅಭಿನಯದ ಇತ್ತೀಚಿನ ಚಿತ್ರ.

ಕನ್ನಡ ಚಿತ್ರಗಳಲ್ಲೂ ಅಭಿನಯಿಸಿದ್ದ ಅಮರೀಶ್‌ ಪುರಿ- ‘ಗಂಡಭೇರುಂಡ’ ಚಿತ್ರದಲ್ಲಿ ಸ್ಮರಣೀಯ ಅಭಿನಯ ನೀಡಿದ್ದರು. ರಾಜೇಂದ್ರಸಿಂಗ್‌ ಬಾಬು ಅವರ ಪುತ್ರ ಆದಿತ್ಯನ ಚೊಚ್ಚಿಲ ಚಿತ್ರ ‘ಲವ್‌’ನಲ್ಲೂ ಪುರಿ ಚಿಕ್ಕದೊಂದು ಪಾತ್ರದಲ್ಲಿ ನಟಿಸಿದ್ದರು.

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada