»   » ‘ಬ್ಲ್ಯಾಕ್‌’ಗೆ 4 ಸ್ಕಿೃೕನ್‌ ಪ್ರಶಸ್ತಿಗಳ ಗರಿ

‘ಬ್ಲ್ಯಾಕ್‌’ಗೆ 4 ಸ್ಕಿೃೕನ್‌ ಪ್ರಶಸ್ತಿಗಳ ಗರಿ

Subscribe to Filmibeat Kannada

ಮುಂಬಯಿ : ಸಂಜಯ್‌ಲೀಲಾ ಭನ್ಸಾಲಿ ನಿರ್ದೇಶನದ ‘ಬ್ಲ್ಯಾಕ್‌’ ಚಿತ್ರ ವಿವಿಧ ವಿಭಾಗಗಳಲ್ಲಿ ಒಟ್ಟು ನಾಲ್ಕು ಸ್ಕಿೃೕನ್‌ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಬ್ಲ್ಯಾಕ್‌ ಚಿತ್ರವು ಚಿತ್ರಕತೆ, ಛಾಯಾಗ್ರಹಣ, ಧ್ವನಿ ಮತ್ತು ಹಿನ್ನೆಲೆ ಸಂಗೀತ ವಿಭಾಗ ಸೇರಿ ಒಟ್ಟು ನಾಲ್ಕು ಸ್ಕಿೃೕನ್‌ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ಬ್ಲ್ಯಾಕ್‌ ಚಿತ್ರ ದೇಶ-ವಿದೇಶಗಳಲ್ಲೆಲ್ಲ ಜನಪ್ರಿಯವಾಗಿ, ಅಮಿತಾಭ್‌ ಮತ್ತು ರಾಣಿ ಮುಖರ್ಜಿ ಅವರಿಗೆ ಅಪಾರ ಮನ್ನಣೆ ಮತ್ತು ಒಂದರಮೇಲೊಂದು ಪ್ರಶಸ್ತಿಗಳನ್ನೂ ತಂದುಕೊಟ್ಟಿದೆ. ಇದೀಗ ನಾಲ್ಕು ಸ್ಕಿೃೕನ್‌ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಬ್ಲ್ಯಾಕ್‌ ಮತ್ತೊಮ್ಮೆ ತನ್ನ ಜನಪ್ರಿಯತೆಯನ್ನು ಎತ್ತಿತೋರಿಸಿದೆ.

ಸಶಕ್ತೀಕರಣದ ಸ್ಫೂರ್ತಿ ಚಿತ್ರಿಸಿದ ಇಕ್ಬಾಲ್‌ ಚಿತ್ರ ಹಾಗೂ ರಾಜಕೀಯ ಮೌಲ್ಯಗಳನ್ನು ಬಿಂಬಿಸಿದ ಹಜಾರ್‌ ಖ್ವಾಯಿಶೇ ಐಸಿ ಚಿತ್ರಗಳಿಗೆ ಪ್ರಪ್ರಥಮ ರಾಮ್‌ನಾಥ್‌ ಗೋಯಂಕಾ ಪ್ರಶಸ್ತಿಗಳು ಲಭಿಸಿವೆ.

ಇಂಡಿಯನ್‌ ಎಕ್ಸ್‌ಪ್ರೆಸ್‌ ಸಮೂಹದ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಮುಖ್ಯ ಸಂಪಾದಕ ಶೇಖರ್‌ ಗುಪ್ತಾ ಮಾತನಾಡಿ, ನಮ್ಮ ಸಂಸ್ಥೆಯ ಸ್ಥಾಪಕ ರಾಮ್‌ನಾಥ್‌ ಗೋಯಂಕಾ ಅವರ ಮೌಲ್ಯಗಳನ್ನು ಈ ಚಿತ್ರಗಳು ಬಿಂಬಿಸಿವೆ. ಹಾಗಾಗಿ ಈ ಎರಡೂ ಚಿತ್ರಗಳಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದರು.

ವರ್ಣರಂಜಿತವಾಗಿ ಬುಧವಾರ ರಾತ್ರಿ ನಡೆದ 12ನೇ ವಾರ್ಷಿಕ ಸ್ಕಿೃೕನ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿಜೇತರು ಸ್ವೀಕರಿಸಿದರು.

ಸ್ಕಿೃೕನ್‌ ಪ್ರಶಸ್ತಿ ವಿಜೇತರು :

ಅತ್ಯುತ್ತಮ ಹಾಸ್ಯನಟ -ಅಭಿಷೇಕ್‌ ಬಚ್ಚನ್‌( ಚಿತ್ರ-ಬಂಟಿ ಔರ್‌ ಬಬ್ಲಿ)
ಅತ್ಯುತ್ತಮ ಖಳನಾಯಕ -ನಾನಾ ಪಾಟೇಕರ್‌(ಚಿತ್ರ-ಅಪಹರಣ್‌)
ಅತ್ಯುತ್ತಮ ಪೋಷಕ ನಟ -ನಾಸಿರುದ್ದೀನ್‌ ಶಾ
ಅತ್ಯುತ್ತಮ ಪೋಷಕ ನಟಿ -ಶ್ವೇತಾ ಪ್ರಸಾದ್‌
ಭರವಸೆಯ ನವನಟಿ -ವಿದ್ಯಾ ಬಾಲನ್‌(ಚಿತ್ರ-ಪರಿಣೀತಾ)
ಭರವಸೆಯ ನವನಟ -ಶೈನೆ ಅಹುಜಾ(ಚಿತ್ರ-ಹಜಾರೋ ಖ್ವಾಯಿಶೇ ಐಸಿ)
ಅತ್ಯುತ್ತಮ ಸಂಗೀತ ನಿರ್ದೇಶಕ -ಶಂಕರ್‌ ಎಹ್‌ಸಾನ್‌ ಲಾಯ್‌(ಚಿತ್ರ-ಬಂಟಿ ಔರ್‌ ಬಬ್ಲಿ)
ಅತ್ಯುತ್ತಮ ಗೀತರಚನೆಕಾರ -ಗುಲ್ಜಾರ್‌
ಅತ್ಯುತ್ತಮ ಗಾಯಕ -ಸೋನು ನಿಗಮ್‌(ಚಿತ್ರ-ಪಹೇಲಿ, ಗೀತೆ-ಧೀರೇ ಜಲ್ನಾ)
ಅತ್ಯುತ್ತಮ ಗಾಯಕಿ -ಶ್ರೇಯಾ ಘೋಷಲ್‌(ಚಿತ್ರ-ಪರಿಣೀತಾ, ಗೀತೆ-ಪಿಯಾ ಬೋಲೆ)
ಅತ್ಯುತ್ತಮ ಸಾಹಸ ನಿರ್ದೇಶಕ -ವೀರು ದೇವ್‌ಗನ್‌(ನಾಯಕ ನಟ ಅಜಯ್‌ ದೇವ್‌ಗನ್‌ ತಂದೆ)
ಅತ್ಯುತ್ತಮ ಬಾಲ ಪ್ರತಿಭೆ -ಆಯೇಶಾ ಕಪೂರ್‌(ಚಿತ್ರ-ಬ್ಲ್ಯಾಕ್‌)

(ಏಜೆನ್ಸೀಸ್‌)

Post your views

ಒಂದು ಸಿನಿ ನೋಟ :
ಕನ್ನಡತಿಯ ಕಣ್ಣಲ್ಲಿ ಅಮಿತಾಭ್‌ರ ‘ಬ್ಲ್ಯಾಕ್‌’


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada