»   » ಟಾಪ್‌ 5 ಕನ್ನಡ ಸಿನಿಮಾ ಆಲ್ಬಮ್ಸ್‌!

ಟಾಪ್‌ 5 ಕನ್ನಡ ಸಿನಿಮಾ ಆಲ್ಬಮ್ಸ್‌!

Posted By: Super
Subscribe to Filmibeat Kannada
Kannada albums
ಈ ವಾರ ಸಂಗೀತ ಪ್ರೇಮಿಗಳ ಸೆಳೆದ ಟಾಪ್‌-5 ಕನ್ನಡ ಚಿತ್ರಗಳ ಸಂಗೀತ ಧ್ವನಿಸುರುಳಿಗಳು ಇಲ್ಲಿವೆ.
  1. ಜೊತೆಜೊತೆಯಲಿ(ತಾರಾಗಣ -ಪ್ರೇಮ್‌, ರಮ್ಯಾ...) : 'ಓ.. ಗುಣವಂತ.." ಹಾಗೂ ಬಾಂಬೆ ಜಯಶ್ರೀ ಹಾಡಿರುವ ' ಸುಮ್ಮನೆ ಸುಮ್ಮನೆ.." ಹಾಡುಗಳು ಯುವಕ-ಯುವತಿಯರನ್ನು ಸೆಳೆದಿವೆ. ಸಾಹಿತ್ಯ -ನಾಗೇಂದ್ರಪ್ರಸಾದ್‌, ಕವಿರಾಜ್‌.
  2. ಮುಂಗಾರು ಮಳೆ(ಕಾಮಿಡಿ ಟೈಮ್‌ ಗಣೇಶ್‌ ನಾಯಕನಾಗಿ ಅಭಿನಯಿಸಿದ ಎರಡನೇ ಚಿತ್ರ) : 'ಅನ್ನಿಸುತ್ತಿದೆ...", 'ಒಂದೇ ಒಂದು ಸಾರಿ. ..", 'ಕುಣಿದು ಕುಣಿದು ಬಾರೆ..." - -ಹಾಡುಗಳು ಭಾರೀ ಜನಪ್ರಿಯ. ಸಂಗೀತ-ಮನೋಮೂರ್ತಿ.
  3. ಸೇವಂತಿ ಸೇವಂತಿ(ತಾರಾಗಣ -ವಿಜಯ ರಾಘವೇಂದ್ರ, ರಮ್ಯಾ) : ಜಾನಪದ ಸೊಗಡಿನ ಈ ಚಿತ್ರದೊಳಗಿನ ' ಜಾಜಿ ಮಲ್ಲಿಗೆ ಹೂವೇ..." ಸೇರಿದಂತೆ ಎಲ್ಲಾ ಗೀತೆಗಳು ಕೇಳುಗರ ಮೋಡಿ ಮಾಡಿವೆ. ಸಂಗೀತ - ಎಸ್‌. ಎ. ರಾಜ್‌ಕುಮಾರ್‌.
  4. ನೀಲಕಂಠ(ತಾರಾಗಣ -ರವಿಚಂದ್ರನ್‌, ನಮಿತಾ) : 'ಮಲ್ಲ ಮಲ್ಲ...", 'ಅಮ್ಮಮ್ಮಮ್ಮೋ..." ಗೀತೆಗಳು ರವಿಚಂದ್ರನ್‌ ಅಭಿಮಾನಿಗಳಿಗೆ ಇಷ್ಟವಾಗಿವೆ. ಸಂಗೀತ -ರವಿಚಂದ್ರನ್‌.
  5. ಏಕದಂತ(ತಾರಾಗಣ -ವಿಷ್ಣುವರ್ಧನ್‌, ಪ್ರೇಮಾ) : ಚಿತ್ರವಿನ್ನು ಬಿಡುಗಡೆಯಾಗಿಲ್ಲ. ಆದರೆ ಹಾಡುಗಳು ಕೇಳುಗರ ಮನ ಸೆಳೆದಿವೆ. ಸಂಗೀತ -ಗುರುಕಿರಣ್‌.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X