»   » ರಸಿಕನ ಪ್ರಗತಿ, ‘ಯಾಹೂ...’ ಸಿದ್ಧ

ರಸಿಕನ ಪ್ರಗತಿ, ‘ಯಾಹೂ...’ ಸಿದ್ಧ

Posted By: Staff
Subscribe to Filmibeat Kannada
'Ba Baro Rasika'
'ರಕ್ತ ಕಣ್ಣೀರಿ"ನ ಬಾ ಬಾರೋ ರಸಿಕ... ಹಾಡು 2003ರ ಸೂಪರ್‌ಹಿಟ್‌ ಹಾಡುಗಳಲ್ಲೊಂದು. ನಾಗಮಂಗಲದ ನಂಗಾನಾಚ್‌ನಲ್ಲಿ ಬಿತ್ತರವಾದದ್ದು ಇದೇ ಹಾಡು ! ಇದೀಗ ಈ ಹಾಡಿನ ಸಾಲು ಚಿತ್ರವೊಂದರ ಶೀರ್ಷಿಕೆಯೂ ಹಾಗಿದೆ !

'ಶಾಂತಿ ಕ್ರಿಯೇಷನ್ಸ್‌" ಲಾಂಛನದಲ್ಲಿ ಜಿ. ಪ್ರಸಾದ ರೆಡ್ಡಿ ಹಾಗೂ ಡಿ. ಸಾಯೀಂದ್ರ ರೆಡ್ಡಿ ಅವರು 'ಬಾ ಬಾರೋ ರಸಿಕ..." ಎನ್ನುವ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಮುಗಿದಿದ್ದು , ದ್ವಿತೀಯ ಮತ್ತು ಅಂತಿಮ ಹಂತದ ಚಿತ್ರೀಕರಣ ಪ್ರಗತಿಯಲ್ಲಿದೆ.

ಬಾ ಬಾರೋ ರಸಿಕ ಎಂದು 'ರಕ್ತಕಣ್ಣೀರು "ಚಿತ್ರದಲ್ಲಿ ಕುಣಿದ ರಮ್ಯಕೃಷ್ಣ 'ಬಾ ಬಾರೋ ರಸಿಕ..." ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರ ಚಿಕ್ಕದಾದರೂ ವಿಶಿಷ್ಟವಾದದ್ದು ಎನ್ನುತ್ತಾರೆ ನಿರ್ದೇಶಕರು. ನಿರ್ಮಾಪಕರು ಕೂಡಾ ಹೌದೆನ್ನುತ್ತಾರೆ.

'ಯಾಹೂ..." ಎಂದ ಸೆನ್ಸಾರ್‌ !
ಸೀತಾರಾಮ ಕಾರಂತರ ನಿರ್ದೇಶನದ ಕುತೂಹಲಕಾರಿ ಚಿತ್ರ 'ಯಾಹೂ..." ಗೆ ಸೆನ್ಸಾರ್‌ ಮನ್ನಣೆ ದೊರೆತಿದೆ. ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ನೈಜ ಘಟನೆಯಾಂದನ್ನು ಆಧರಿಸಿದ ಚಿತ್ರ ಎಂದು ನಿರ್ದೇಶಕ ಕಾರಂತರು ತಮ್ಮ 'ಯಾಹೂ.." ಚಿತ್ರವನ್ನು ಬಣ್ಣಿಸುತ್ತಾರೆ.

ಸೌರವ್‌, ದತ್ತಣ್ಣ , ನೀತಾ, ನೇತ್ರಾ ಸಿಂಧಿಯಾ, ಶ್ರೀವಿದ್ಯಾ, ಡಾ.ಸುರೇಶ್‌ ಶರ್ಮಾ, ಧ್ರುವ ಶರ್ಮಾ 'ಯಾಹೂ..." ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದಾರೆ.

English summary
'Ba Baro Rasika' kannada film shooting is in final stage. Seetharam Karanth's 'Yahoo' gets censor certificate
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada