»   » ಶ್ರೇಷ್ಠ ಮಕ್ಕಳ ಚಿತ್ರಕ್ಕೆ 25ಲಕ್ಷರೂ. ಪ್ರೋತ್ಸಾಹ ಧನ

ಶ್ರೇಷ್ಠ ಮಕ್ಕಳ ಚಿತ್ರಕ್ಕೆ 25ಲಕ್ಷರೂ. ಪ್ರೋತ್ಸಾಹ ಧನ

Subscribe to Filmibeat Kannada

ಬೆಂಗಳೂರು : ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮಕ್ಕಳ ಚಿತ್ರಗಳಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಪ್ರತಿವರ್ಷ ಎರಡು ಅತ್ಯುತ್ತಮ ಚಿತ್ರಗಳಿಗೆ ತಲಾ 25ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದೆ.

ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಸಿದ್ದರಾಮಯ್ಯ ಮಂಡಿಸಿದ ಮುಂಗಡಪತ್ರದಲ್ಲಿ ಮಕ್ಕಳ ಚಿತ್ರಗಳ ಜೊತೆಗೆ, ಪ್ರಶಸ್ತಿ ವಿಜೇತ ಚಿತ್ರಗಳಿಗೆ ಪ್ರತ್ಯೇಕ ಧನಸಹಾಯ ನೀಡುವ ಅಂಶ ವ್ಯಕ್ತವಾಗಿದೆ.

ಎಲ್ಲಾ ಕನ್ನಡ ಚಿತ್ರಗಳಿಗೂ ಸಹಾಯಧನ ಕೋರಿದ್ದ ಚಿತ್ರೋದ್ಯಮದ ಬೇಡಿಕೆಗೆ ಬಜೆಟ್‌ನಲ್ಲಿ ಮನ್ನಣೆ ಸಿಕ್ಕಿಲ್ಲ. ಗುಣಮಟ್ಟದ ಇಪ್ಪತ್ತು ಚಿತ್ರಗಳಿಗೆ ತಲಾ ಹತ್ತು ಲಕ್ಷ ನೀಡುವ ಯೋಜನೆ ಮುಂದುವರೆದಿದೆ. ನಕಲಿ ವಿಡಿಯೋ ಮತ್ತು ಆಡಿಯೋ ಕ್ಯಾಸೆಟ್‌ ಹಾಗೂ ಸಿ.ಡಿ ಹಾವಳಿ ತಡೆಗಟ್ಟಲು ಕಾಯ್ದೆಗೆ ತಿದ್ದುಪಡಿ ತರುವ ಅಂಶವನ್ನು ಪುನರುಚ್ಚರಿಸಲಾಗಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada