»   » ‘ಕುಲುಕಬೇಡ ಕುಲುಕಬೇಡ ಸಿಲ್ಕು...’

‘ಕುಲುಕಬೇಡ ಕುಲುಕಬೇಡ ಸಿಲ್ಕು...’

Subscribe to Filmibeat Kannada

‘ಕುಲುಕಬೇಡ ಕುಲುಕಬೇಡ ಸಿಲ್ಕು...ನೀ ಕುಲುಕೋಕ್ಮುಂಚೆ ಯಾಕಂತ್ಹೇಳಿ ಕುಲುಕು... ’ ದಾಸ ಚಿತ್ರದ ಈ ಐಟಂ ಸಾಂಗ್‌ ಯಾರಿಗೆ ಗೊತ್ತಿಲ್ಲ? ಕೈಗೆ ಕೈ, ಮೈಗೆ ಮೈ ತಾಕಿಸುತ್ತಾ ಕುಣಿದ ಈಕೆ, ಎಲ್ಲರಿಗೂ ಜ್ಯೂನಿಯರ್‌ ಸಿಲ್ಕ್‌ ಎಂದೇ ಪರಿಚಿತೆ. ಈಕೆಯ ಮೂಲ ಹೆಸರು ರೇಖಾ ಅನ್ನೋದು ಬಹಳ ಮಂದಿಗೆ ಗೊತ್ತಿಲ್ಲ.

ಭಾವನಾ, ಧಾಮಿನಿಯಂತಹ ನಟಿಯರು ಐಟಂ ಸಾಂಗ್‌ನಲ್ಲಿ ನಟಿಸಲು ಕ್ಯೂನಿಂತಿದ್ದರೂ, ಈಕೆಗೆ ಡಿಮ್ಯಾಂಡ್‌ ಕಡಿಮೆಯಾಗಿಲ್ಲ. ಹಳೇಕಾಲದ ಜ್ಯೋತಿ ಲಕ್ಷ್ಮಿ, ಡಿಸ್ಕೋಶಾಂತಿ, ಅನುರಾಧಾ, ಸಿಲ್ಕ್‌ ಜಾಗವನ್ನು ಈಗ ಜೂನಿಯರ್‌ ಸಿಲ್ಕ್‌ ಆಕ್ರಮಿಸಿಕೊಂಡಿದ್ದಾಳೆ. ಸಿಲ್ಕ್‌ ತೆರೆ ಮೇಲೆ ಕಾಣಿಸಿಕೊಂಡ ತಕ್ಷಣ ಪಡ್ಡೆಹುಡುಗರು ಮೈಮರೆಯುತ್ತಾರೆ, ರೋಮಾಂಚನಗೊಳ್ಳುತ್ತಾರೆ!

ಕಡಿಮೆ ಅವಧಿಯಲ್ಲಿಯೇ ಕನ್ನಡದಲ್ಲಿ ಈ ಮಟ್ಟಿಗೆ ಜನಪ್ರಿಯತೆಗಳಿಸಿದ್ದು ಅಚ್ಚರಿಯೇ ಸರಿ. ಹತ್ತಕ್ಕೂ ಹೆಚ್ಚು ಸಾಂಗ್‌ಗಳಿಗೆ ‘ಐಟಂ’ ಆಗಿರುವ ಸಿಲ್ಕ್‌ ಸದ್ಯಕ್ಕೆ ‘ಗ್ರೀನ್‌ ಸಿಗ್ನಲ್‌’ ಚಿತ್ರದಲ್ಲಿ ಕುಣಿದುಕುಪ್ಪಳಿಸಿದ್ದಾಳೆ. ಉಗ್ರನರಸಿಂಹ, ಮತ್ತು ಶಾಸ್ತ್ರಿ ಚಿತ್ರಗಳು ಈಕೆಗೆ ಕಾಯುತ್ತಿವೆ.

ಚೆನ್ನೈಮೂಲದ ರೇಖಾ, ಸಿಲ್ಕ್‌ ಆಗಿದ್ದೇ ಒಂದು ಕಥೆ. ಈಕೆಯ ತಂದೆ- ತಾಯಿ ತಮಿಳು ಚಿತ್ರರಂಗದಲ್ಲಿ ಖ್ಯಾತ ನೃತ್ಯ ನಿರ್ದೇಶಕರು. ಅಪ್ಪ-ಅಮ್ಮ ಕುಣಿಯೋದನ್ನು ಕಂಡ ರೇಖಾ ಮನದಲ್ಲಿ ಅದೇ ಆಸೆ ಬೇರೂರಿತ್ತು. ಸರಿ ಮುಂದೆ ಪ್ರಕಾಶ್‌ ರೈ ನಿರ್ಮಾಣದ ‘ದಯಾ’ ಚಿತ್ರದಲ್ಲಿ ಐಟಂ ಪಾತ್ರವೊಂದು ಆಕೆಯ ಪಾಲಿಗೆ ಬಂತು.

ಆ ಚಿತ್ರೀಕರಣವನ್ನು ವರದಿ ಮಾಡಲು ಹೋಗಿದ್ದ ಒಬ್ಬ ಪತ್ರಕರ್ತನಿಗೆ ರೇಖಾ, ಸಿಲ್ಕ್‌ಸ್ಮಿತಾ ತರಹ ಕಾಣಿಸಿದಳಂತೆ. ಕೂಡಲೇ ಸ್ಥಳದಲ್ಲಿಯೇ ಆಕೆಗೆ ಜ್ಯೂನಿಯರ್‌ ಸಿಲ್ಕ್‌ ಎಂಬ ನಾಮಕರಣ ನಡೆದುಹೋಯಿತಂದೆ.

ಆದರೆ ಸಿಲ್ಕ್‌ಗಿದ್ದ ಎತ್ತರ, ಮೈಮಾಟ, ವೈಯ್ಯಾರ ಈಕೆಯಲ್ಲಿದೆಯೇ ಅನ್ನೋ ಪ್ರಶ್ನೆಗೆ, ‘ನನಗೆ ನಾನೇ ಸುಂದರಿ. ನಾನೇ ಸೆಕ್ಸಿ ... ನಾನು ಯಾರನ್ನೂ ಫಾಲೋ ಮಾಡೋದಿಲ್ಲ, ನನ್ನನ್ನೇ ಇತರರು ಫಾಲೋ ಮಾಡಲಿ’ ಎಂದು ಬೋಲ್ಡಾಗಿ ಹೇಳುತ್ತಾಳೆ ಸಿಲ್ಕ್‌.

‘ಐಟಂ ಸಾಂಗ್‌ ಕುಣಿತ ಕಲಿತರೆ ಬರುವಂಥದ್ದಲ್ಲ. ಅದಕ್ಕೆ ತರಬೇತಿಯ ಅಗತ್ಯವೂ ಇಲ್ಲ, ಸಂಗೀತದ ಸೆನ್ಸ್‌ ಇದ್ದರೆ ಸಾಕು ಸುಲಭವಾಗಿ ಸಾಧಿಸಬಹುದು. ಹೀಗಾಗಿ ನನಗೆ ಎಂದೂ ಭಾಷೆಯ ಸಮಸ್ಯೆ ಕಾಡಿಲ್ಲ. ನಿರ್ದೇಶಕರು ಹೇಳಿದ್ದನ್ನು ಅಚ್ಚುಕಟ್ಟಾಗಿ ಮಾಡುತ್ತೇನೆ...’ ಎನ್ನುವುದು ಸಿಲ್ಕ್‌ ಅನಿಸಿಕೆ.

‘ಐಟಂ’ಗಳ ಜೊತೆಗೆ, ಸಣ್ಣಪುಟ್ಟ ಪಾತ್ರ ಮಾಡೋ ಆಸೆ ಸಹಾ ಈಕೆಗುಂಟು. ಆದರೆ ನಾಯಕಿ ಪಾತ್ರದ ಮೇಲೆ ಸಿಲ್ಕ್‌ ಕಣ್ಣು ಹಾಕಿಲ್ಲ. ಕನ್ನಡ, ತೆಲುಗು, ತಮಿಳು ಸೇರಿದಂತೆ ದಕ್ಷಿಣ ಭಾರತದ ‘ಐಟಂ ರಾಣಿ’ಯಾಗಿರುವ ಸಿಲ್ಕ್‌ ಹೊಟ್ಟೆ ತಣ್ಣಗಿರಲಿ ಎಂಬ ಆಶಯ ಪಡ್ಡೆ ಹುಡುಗರದು!

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada