ಮಾ.16ಕ್ಕೆ ರಕ್ಷಿತಾ-ಪ್ರೇಮ್‌ ನಿಶ್ಚಿತಾರ್ಥ, ಈ ಸಲ ಖಚಿತ... !?

By Staff

!?
ಖ್ಯಾತ ತಾರೆಯಾಬ್ಬರ ವಿಶ್ವಾಸ, ಶೀಘ್ರದಲ್ಲೇ ಸತ್ಯಾಸತ್ಯತೆ ಬಯಲು

ಬೆಂಗಳೂರು : ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್‌ ಮದುವೆ ನಿಶ್ಚಿತಾರ್ಥ ಮಾರ್ಚ್‌ 16ರಂದು ನಡೆಯಲಿದೆ ಎಂಬ ಮಾತು ಮತ್ತೊಮ್ಮೆ ಗಾಂಧೀನಗರದ ತುಂಬ ಹರಡಿಕೊಂಡಿದೆ.

ಕಳೆದ ನಾಲ್ಕುತಿಂಗಳ ಹಿಂದೆ ಪ್ರೇಮ್‌ ಹಾಗೂ ರಕ್ಷಿತಾ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿತ್ತು. ಅಲ್ಲದೆ ಕಳೆದ ಫೆಬ್ರವರಿ 14ರಂದು(ಪ್ರೇಮಿಗಳ ದಿನ) ಎಂಗೇಜ್‌ಮೆಂಟ್‌ ಆಯಿತು ಎಂಬ ಮಾತೂ ಹರಡಿಕೊಂಡಿತ್ತು.

ಆದರೆ ಕನ್ನಡದ ಖ್ಯಾತ ಸ್ಟಾರ್‌ ಒಬ್ಬರು, ಈ ಸಲದ ಸುದ್ದಿ ಹುಸಿಯಾಗುವುದಿಲ್ಲ. ಖಂಡಿತ ನಿಶ್ಚಿತಾರ್ಥ ನೆರವೇರಿಯೇ ತೀರುತ್ತದೆ ಎಂದು ಹೇಳಿರುವುದರಿಂದ ಈ ಸುದ್ದಿಗೆ ವಿಶೇಷ ಮಹತ್ವ ಬಂದಿದೆ.

ಇತ್ತೀಚೆಗೆ ರವಿಚಂದ್ರನ್‌ ಅಭಿನಯದ ಒಡಹುಟ್ಟಿದವಳು ಚಿತ್ರದ ಮುಹೂರ್ತದಲ್ಲಿ ರಕ್ಷಿತಾ-ಪ್ರೇಮ್‌ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವುದರ ಮೂಲಕ ಎಂಗೇಜ್‌ಮೆಂಟ್‌ ಸುದ್ದಿ ಮತ್ತೊಮ್ಮೆ ಚಿಗಿತುಕೊಂಡಿದೆ. ಸತ್ಯಾಸತ್ಯತೆಯನ್ನು ಕಾಲವೇ ನಿರ್ಧರಿಸಲಿದೆ.

(ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X