»   » ಜಾಕ್‌ಪಾಟ್‌ ನಿರೀಕ್ಷೆಯಲ್ಲಿ ಧ್ಯಾನ್‌!

ಜಾಕ್‌ಪಾಟ್‌ ನಿರೀಕ್ಷೆಯಲ್ಲಿ ಧ್ಯಾನ್‌!

Subscribe to Filmibeat Kannada

ಮುಂಬೈ ಹುಡುಗ ಧ್ಯಾನ್‌ಗೆ ಕನ್ನಡದಲ್ಲಿ ೕಗ ಸಾಲಾಗಿ ಅವಕಾಶಗಳು ಒಲಿಯುತ್ತಿವೆ. ‘ಜೂಟಾಟ’ ದ ನಂತರ ‘ಜಾಕ್‌ಪಾಟ್‌’ಗೆ ಧ್ಯಾನ್‌ ಬುಕ್‌ ಆಗಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶನದ ನನ್ನ ಪ್ರೀತಿಯ ಹುಡುಗಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಧ್ಯಾನ್‌, ಮೊನಾಲಿಸಾ, ಜೂಟಾಟಗಳಲ್ಲಿ ನಟಿಸಿದ್ದರು. ಜನಪ್ರಿಯತೆಗಾಗಿ ಹಂಬಲಿಸುತ್ತಿರುವ ಧ್ಯಾನ್‌, ಅಮೃತಧಾರೆ ಚಿತ್ರಕ್ಕೆ ಅವಕಾಶ ಗಿಟ್ಟಿಸಿದ ಬೆನ್ನಲ್ಲಿಯೇ ‘ಜಾಕ್‌ಪಾಟ್‌’ನತ್ತ ಗಮನಹರಿಸಿದ್ದಾರೆ.

ನಿರಂಜನ್‌ ನಿರ್ದೇಶಿಸುತ್ತಿರುವ ‘ಜಾಕ್‌ಪಾಟ್‌’ -ಕಾಮಿಡಿ ಚಿತ್ರ. ಮ್ಯಾನೇಜ್‌ಮೆಂಟ್‌ ಕ್ಷೇತ್ರದಿಂದ ಸ್ಯಾಂಡಲ್‌ವುಡ್‌ಗೆ ನಿರಂಜನ್‌ ನಿರ್ದೇಶಕರಾಗಿ ಕಾಲಿಡುತ್ತಿದ್ದಾರೆ. ಅಲ್ಲದೇ ಚಿತ್ರಕಥೆಯನ್ನು ಸಹಾ ಅವರೇ ಬರೆಯುತ್ತಿದ್ದಾರೆ.

‘ಕರಿಯ’ ಯಶಸ್ವಿನ ನಂತರ ನಿರ್ಮಾಪಕ ಆನೇಕಲ್‌ ಬಾಲರಾಜ್‌ ಜಾಕ್‌ಪಾಟ್‌ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕರಿಯ ನಂತರ ಬಾಲರಾಜ್‌ ಆರಂಭಿಸಿದ್ದ ವ್ಯಾಲೆಂಟೈನ್ಸ್‌ ಡೇ ಚಿತ್ರೀಕರಣ ಅರ್ಧಕ್ಕೆ ನಿಂತಿದೆ. ಈ ನಡುವೆ ‘ಜಾಕ್‌ಪಾಟ್‌’ಗೆ ಅವರು ಕೈಹಾಕಿದ್ದಾರೆ.

ಪ್ರೇಕ್ಷಕರನ್ನು ಚಿತ್ರಕ್ಕೆ ಕರೆತರುವ ಎಲ್ಲಾ ಮಾರ್ಗಗಳ ಅನ್ವೇಷಣೆಯಲ್ಲಿ ನಿರಂಜನ್‌ ಯೋಚಿಸುತ್ತಿದ್ದಾರೆ. ದಯಾನಾಯಕ್‌ ಚಿತ್ರದ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದ ಅಂತರಾ ಬಿಸ್ವಾಸ್‌ರನ್ನು ಜಾಕ್‌ಪಾಟ್‌ನಲ್ಲಿ ಪ್ರೇಕ್ಷಕರು ಕಾಣಬಹುದು. ಅಲ್ಲದೇ ಶುಭ ಮತ್ತು ಡೈಸಿ ಎಂಬ ಮಿಂಚುಹುಳಗಳು ಈ ಚಿತ್ರದಲ್ಲಿದ್ದಾರೆ.

ಸುದೀಪ್‌ ಅತಿಥಿ ಪಾತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಜಾಕ್‌ಪಾಟ್‌ಗೆ ಕೃಪಾಕರ್‌ ಸಂಗೀತ ನೀಡುತ್ತಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada