»   » ರಾಜಧಾನಿ ನಗರ ಉದ್ರಿಕ್ತ : ವಿವಿಧೆಡೆ ಕಲ್ಲು ತೂರಾಟ

ರಾಜಧಾನಿ ನಗರ ಉದ್ರಿಕ್ತ : ವಿವಿಧೆಡೆ ಕಲ್ಲು ತೂರಾಟ

Subscribe to Filmibeat Kannada

ಬೆಂಗಳೂರು : ರಾಜ್‌ಕುಮಾರ್‌ ನಿಧನದ ಹಿನ್ನೆಲೆ ರಾಜಧಾನಿ ನಗರದ ಕೆಲವೆಡೆ, ಉದ್ರಿಕ್ತ ಸ್ಥಿತಿ ನಿರ್ಮಾಣಗೊಂಡಿದೆ. ಅಹಿತಕರ ಘಟನೆ ತಪ್ಪಿಸಲು ಪೊಲೀಸರು ಎಚ್ಚರಿಕೆವಹಿಸಿದ್ದಾರೆ.

ವಿಜಯನಗರ, ಜಯನಗರ, ಕೆ.ಆರ್‌.ಪುರ, ಬಸವೇಶ್ವರನಗರ, ರಾಜಾಜೀನಗರ ಸೇರಿದಂತೆ ಕೆಲವೆಡೆ ಅಂಗಡಿಮುಂಗಟ್ಟುಗಳನ್ನು ಮುಚ್ಚಲಾಗಿದೆ. ರಸ್ತೆಯಲ್ಲಿ ಬೆಂಕಿ ಹಾಕಿಕೊಂಡು ಅಭಿಮಾನಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಲ್ಲುತೂರಾಟದ ಪ್ರಕರಣಗಳು ನಡೆದಿವೆ. ಕೆಲವೆಡೆ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ ಪ್ರಕರಣಗಳು ವರದಿಯಾಗಿವೆ.

ಪ್ರಪಂಚದ ಎಲ್ಲಾ ರಸ್ತೆಗಳು ರೋಮ್‌ ನಗರವನ್ನೇ ಸೇರುತ್ತವೆ ಎಂಬಂತೆ ಬೆಂಗಳೂರಿನ ಎಲ್ಲಾ ರಸ್ತೆಗಳು ಸದಾಶಿವನಗರವನ್ನೇ ಸೇರುತ್ತಿವೆ. ಮೆಜೆಸ್ಟಿಕ್‌ನಲ್ಲಿ ಜನ ಗುಂಪುಗುಂಪಾಗಿ ನಿಂತು, ತಮ್ಮ ನೆಚ್ಚಿನ ನಟನ ಬಗ್ಗೆ ಚರ್ಚಿಸುತ್ತಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada