ಸದಾಶಿವನಗರದಲ್ಲಿ ಅಭಿಮಾನಿಗಳ ಜಾತ್ರೆ, ಕಂಬನಿಧಾರೆ
ಬೆಂಗಳೂರು : ಸದಾಶಿವನಗರದಲ್ಲಿನ ರಾಜ್ ಸ್ವಗೃಹ ಅಪಾರ ಅಭಿಮಾನಿಗಳಿಂದ ತುಂಬಿ ತುಳುಕುತ್ತಿದೆ. ಅಲ್ಲಿಗೆ ತಮ್ಮ ನೆಚ್ಚಿನ ನಟನನ್ನು ಅಂತಿಮವಾಗಿ ದರ್ಶಿಸಲು, ಅಭಿಮಾನಿಗಳು ಉತ್ಸುಕರಾಗಿ ಧಾವಿಸುತ್ತಿದ್ದಾರೆ.
ಮನೆಯ ಸಮೀಪ ನೂಕು ನುಗ್ಗಲು ಉಂಟಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಹಿರಿಯ ರಾಜಕೀಯ ಮುಖಂಡರು ರಾಜ್ ನಿವಾಸಕ್ಕೆ ತೆರಳಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು.
ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈ ಘಟನೆಯನ್ನು ಅನಿರೀಕ್ಷಿತ ಎಂದು ಬಣ್ಣಿಸಿದ್ದು, ಸಿಡಿಲಿನಂತೆ ಕನ್ನಡಿಗರಿಗೆ ಆಘಾತ ಬಂದು ತಾಕಿದೆ. ರಾಜ್ ಅಭಿಮಾನಿಗಳು ಶಾಂತಿಯಿಂದ ವರ್ತಿಸಬೇಕು ಎಂದಿದ್ದಾರೆ.
ಡಾ.ರಾಜ್‌ಗೆ ಸಂತಾಪ ಕೋರಲು ಬುಧವಾರ ಸಂಜೆ 5ಗಂಟೆಗೆ ಸಂಪುಟದ ತುರ್ತುಸಭೆಯನ್ನು ವಿಧಾನಸೌಧದಲ್ಲಿ ಕರೆಯಲಾಗಿದೆ.
ಬಿಜಾಪುರದಲ್ಲಿ ಎಲ್.ಕೆ.ಆಡ್ವಾಣಿ ನೇತೃತ್ವದಲ್ಲಿ ಸಭೆ ಸೇರಿದ ಬಿಜೆಪಿ ಮುಖಂಡರು, ರಾಜ್ ನಿಧನಕ್ಕೆ ಶೋಕ ವ್ಯಕ್ತಪಡಿಸಿ, ಚಿರಶಾಂತಿ ಕೋರಿದರು.
ತಾರಾ ಪ್ರತಿಕ್ರಿಯೆ : ಅವರಿಗೆ ಯಾವತ್ತೂ ಸಾವಿಲ್ಲ. ಅವರ ವ್ಯಕ್ತಿತ್ವ, ಬದುಕು ಎಲ್ಲರಿಗೂ ಆದರ್ಶ. ರಾಜ್‌ಗೆ ರಾಜೇ ಸಾಟಿ...
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications